Search
  • Follow NativePlanet
Share
» »2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಚರಿಸಲಾಗುವ ಹಬ್ಬಗಳು

2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಆಚರಿಸಲಾಗುವ ಹಬ್ಬಗಳು

2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ನಡೆಯುವ ಹಬ್ಬಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ಮಾಡಿದ್ದೇವೆ ಅದರಂತೆ ನಿಮ್ಮ ಮುಂದಿನ ಪ್ರವಾಸ ಆಯೋಜಿಸಿ ಭಾರತವು ವೈವಿದ್ಯತೆಯಿಂದ ಕೂಡಿದ ದೇಶವೆಂಬುದು ನಮಗೆಲ್ಲಾ ತಿಳಿದಿರುವ ವಿಷಯ ಅದರಂತೆ ಇಲ್ಲಿ ಭಾರತೀಯ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರತಿಬಿಂಬಿಸುವ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತಿದ್ದು ಇವುಗಳ ಮೂಲಕ ಭಾರತೀಯರು ತಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಹೇಗೆ ಇಂದಿಗೂ ಮುಂದುವರೆಸುತ್ತಾ ಬಂದಿದ್ದಾರೆ ಎಂಬುದನ್ನು ತೋರಿಸಿಕೊಡುವಲ್ಲಿ ಈ ಹಬ್ಬಗಳು ಮಹತ್ತರ ಪಾತ್ರವಹಿಸುತ್ತವೆ. ಭಾರತವು ಅತ್ಯಂತ ದೊಡ್ಡ ದೇಶವಾಗಿದ್ದು, ಇದರ ಪ್ರತೀ ರಾಜ್ಯವೂ ಕೂಡ ತನ್ನ ವೈವಿದ್ಯತೆಯನ್ನು ಪ್ರದರ್ಶಿಸುವ ವಿವಿಧ ಹಬ್ಬಗಳನ್ನು ವಿವಿಧ ರೀತಿಯಲ್ಲಿ ಆಚರಿಸುತ್ತದೆ.

ಅದರಂತೆ ಈ ಅಕ್ಟೋಬರ್ ಅಂದರೆ 2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತಿದೆ. ಇವು ಭಾರತದ ಭವ್ಯತೆಯನ್ನು ಅರಿವು ಮಾಡಿಕೊಡುತ್ತದೆ. ಈ ಅಕ್ಟೋಬರ್ ನಲ್ಲಿ ನಡೆಯುವ ಹಬ್ಬಗಳಂತೂ ನೋಡಲು ಯೋಗ್ಯವಾದವುಗಳಾಗಿವೆ.

mumbai2

ನಿಮ್ಮ ಪ್ರವಾಸವನ್ನು ಯೋಜಿಸಲು ಭಾರತದಲ್ಲಿ ಅಕ್ಟೋಬರ್ 2022 ರಲ್ಲಿ ನಡೆಯುವ ಉತ್ಸವಗಳು ಮತ್ತು ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

1) ನವರಾತ್ರಿ (ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5)

ಭಾರತವು ನವರಾತ್ರಿ ಹಬ್ಬವನ್ನು ಒಂಬತ್ತು ದಿನಗಳ ಕಾಲ ಆಚರಿಸುತ್ತದೆ ಈ ಸಮಯದಲ್ಲಿ ದುರ್ಗಾದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಶೈಲಪುತ್ರಿ ಇದು ನವರಾತ್ರಿಯ ಮೊದಲನೆಯ ದಿನದ ಅವತಾರವಾಗಿದ್ದು ನವರಾತ್ರಿಯ ಮೊದಲ ದಿನ ದೇವಿಯು ಈ ಅವತಾರದಲ್ಲಿ ಪೂಜಿಸಲ್ಪಡುತ್ತಾಳೆ. ನವರಾತ್ರಿ ಉತ್ಸವವು ರಾಮ ದೇವರು ರಾವಣನ ಮೇಲೆ ವಿಜಯ ಸಾಧಿಸಿದುದರ ಸಂಕೇತವಾಗಿ ಆಚರಿಸಿ ಆ ದಿನವನ್ನು ನವರಾತ್ರಿಯ ಕೊನೆಯ ದಿನವಾಗಿ ಆಚರಿಸಲಾಗುತ್ತದೆ.

ನವರಾತ್ರಿ ಸಮಯದಲ್ಲಿ ದುರ್ಗಾದೇವಿಯ ಭಕ್ತರು ಮಾಂಸಾಹಾರ, ಮೊಟ್ಟೆ , ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನೂ ತಿನ್ನುವುದನ್ನು ತ್ಯಜಿಸುತ್ತಾರೆ. ನವರಾತ್ರಿಯು ಜನರಲ್ಲಿ ಉತ್ಸಾಹ ಮತ್ತು ಉಲ್ಲಾಸವನ್ನು ತುಂಬಿಸುತ್ತದೆ ಇದಕ್ಕೆ ಸಾಕ್ಷಿ ಎಂಬಂತೆ ಈ ಸಮಯದಲ್ಲಿ ಜನರು ಪ್ರಖ್ಯಾತ ನೃತ್ಯವಾದ ಗರ್ಬಾ ನೃತ್ಯವನ್ನು ಒಂಬತ್ತು ದಿನಗಳ ಕಾಲ ದೇವಿಯ ಮುಂದೆ ನರ್ತಿಸುತ್ತಾರೆ. ಈ ನೃತ್ಯವನ್ನು ಭಾರತದ ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಹಲವಾರು ರಾಜ್ಯಗಳಲ್ಲಿಯೂ ಆಯೋಜಿಸಲಾಗುತ್ತದೆ.

durga1-23-1474623811-1664170059.jpg -Properties

2) ದುರ್ಗಾ ಪೂಜಾ (ಅಕ್ಟೋಬರ್ 1ರಿಂದ ಅಕ್ಟೋಬರ್ 5ರವರೆಗೆ)

ದುರ್ಗಾ ಪೂಜೆಯನ್ನು ಪ್ರಮುಖವಾಗಿ ಪಶ್ಚಿಮ ಬಂಗಾಳದಲ್ಲಿ ಆಚರಿಸಲಾಗುತ್ತದೆ ಈ ಹಬ್ಬವು ಅಲ್ಲಿಯ ಅತ್ಯಂತ ದೊಡ್ಡ ಹಬ್ಬವಾಗಿದೆ. ದುರ್ಗಾ ದೇವಿಯು ಮಹಿಶಾಸುರನ ಮೇಲೆ ವಿಜಯ ಸಾಧಿಸಿದುದರ ಗೌರವಾರ್ಥವಾಗಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಲಯ ದ ದಿನ ದುರ್ಗಾ ದೇವಿ ಮತ್ತು ಮಹಿಷಾಸುರನ ಯುದ್ದವು ಪ್ರಾರಂಭವಾಗಿ, ಇದು ದುರ್ಗಾ ಪೂಜೆಯ ಪ್ರಾರಂಭವನ್ನು ಸೂಚಿಸುತ್ತದೆ.

ಈ ಸಮಯದಲ್ಲಿ ಅಸಂಖ್ಯಾತ ಪೆಂಡಾಲ್ ಗಳನ್ನು ಹಾಕಲಾಗುತ್ತದೆ. ಈ ಪೆಂಡಾಲ್ ಗಳಲ್ಲಿ ದುರ್ಗೆ, ಲಕ್ಷ್ಮಿ, ಸರಸ್ವತಿ, ಗಣೇಶ ಮತ್ತು ಕಾರ್ತಿಕೇಯರ ದೊಡ್ಡ ದೊಡ್ಡ ಪ್ರತಿಮೆಗಳನ್ನು ಇಡಲಾಗುತ್ತದೆ. ಈ ಪ್ರತಿಮೆಗಳ ವಿಸರ್ಜನೆಯ ಮೊದಲು ದುರ್ಗಾ ಪೂಜೆಯು ಕೊನೆಗೊಳ್ಳುತ್ತಿದ್ದಂತೆಯೇ ವಿವಾಹಿತ ಮಹಿಳೆಯರು ಸಿಂಧೂರ್ ಅಥವಾ ಕುಂಕುಮದಲ್ಲಿ ಆಟವಾಡುತ್ತಾ ಒಬ್ಬರ ಮೇಲೆ ಒಬ್ಬರು ಕುಂಕುಮ ಹಚ್ಚುತ್ತಾ ಸಂಭ್ರಮಿಸುತ್ತಾರೆ. ಬೆಂಗಾಲಿಗಳಿಗೆ, ದುರ್ಗಾ ಪೂಜೆಯ ಆಚರಣೆಯು ಕೆಲವು ಮಾಂಸಾಹಾರಿ ಸತ್ಕಾರಗಳನ್ನು ಒಳಗೊಂಡಂತೆ ರುಚಿಕರವಾದ ಆಹಾರಗಳನ್ನೂ ಈ ಸಮಯದಲ್ಲಿ ಮಾಡಿ ಸಂಭ್ರಮಿಸುತ್ತಾರೆ.

navratri1

3) ದಸರಾ (ಅಕ್ಟೋಬರ್ 5)

ವಿಜಯದಶಮಿಯನ್ನು ಸಾಮಾನ್ಯವಾಗಿ ದಶೇರಾ, ದಸರಾ ಅಥವಾ ದಶೈನ್ ಎಂದೂ ಕರೆಯಲಾಗುತ್ತದೆ. ಈ ಹಬ್ಬವು ಹಿಂದುಗಳಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ವಿಜಯದಶಮಿಯನ್ನು ನವರಾತ್ರಿಯ ಕೊನೆಯದಿನವೆಂದು ಪ್ರತೀವರ್ಷ ಆಚರಿಸಲಾಗುತ್ತದೆ. ಇದನ್ನು ವಿಷ್ಣುದೇವರ ಅವತಾರವಾದ ರಾಮದೇವರು ತಮ್ಮ ಪತ್ನಿ ಸೀತಾದೇವಿಯನ್ನು ಅಪಹರಿಸಿದ ದಶಕಂಠ ರಾವಣನು ಸೀತಾದೇವಿಯನ್ನು ಅಪಹರಿಸಿದುದಕ್ಕಾಗಿ ಅವನ ಮೇಲೆ ಯುದ್ದ ಮಾಡಿ ಜಯಸಾಧಿಸಿದುದರ ಸಂಕೇತವಾಗಿ ಆಚರಿಸಲಾಗುತ್ತದೆ.

ಈ ಹಬ್ಬದ ಹೆಸರನ್ನು ಸಂಸ್ಕೃತದಿಂದ ಆರಿಸಲಾಗಿದ್ದು ಅದರಂತೆ 'ದಶ' ಅಂದರೆ ಹತ್ತು ಎಂದೂ 'ಹರ' ಎಂದರೆ ಸೋಲಿಸು ಎಂದೂ ಅರ್ಥೈಸುತ್ತದೆ. ದಶೆರಾ ಹಬ್ಬವನ್ನು ಭಾರತದಾದ್ಯಂತ ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಕುಲುವಿನಲ್ಲಿ ನಡೆಯುವ ದಶೆರಾ ಮತ್ತು ಮೈಸೂರಿನಲ್ಲಿ ನಡೆಯುವ ದಸರಾ ಅತ್ಯಂತ ಸುಂದರವಾಗಿದ್ದು ಇದು ಭೇಟಿ ನೀಡಲೇಬೇಕು ಎನ್ನುವ ಸ್ಥಳವಾಗಿದೆ.

marwar festival

4) ಮಾರ್ವಾರ್ ಉತ್ಸವ (ಅಕ್ಟೋಬರ್ 12 - 13)

ಮಾರ್ವಾರ್ ಉತ್ಸವವನ್ನು ಜೋಧಪುರ ನಗರದಲ್ಲಿ ಆಯೋಜಿಸಲಾಗುತ್ತದೆ. ಈ ಉತ್ಸವವು ರಾಜಸ್ಥಾನದ ಎಲ್ಲಾ ವರ್ಷಪೂರ್ತಿ ನಡೆಯುವ ಹಬ್ಬಗಳಿಗಿಂತ ಅತ್ಯಂತ ಅದ್ಬುತವಾದುದಾಗಿದೆ. ದೇಶದ ಬೇರೆ ರಾಜ್ಯಗಳಲ್ಲಿ ಎಲ್ಲಿಯೂ ಕಾಣಸಿಗದಂತಹ ತನ್ನದೇ ಆದ ವಿಭಿನ್ನವಾದ ಮತ್ತು ಅಪರೂಪವಾದ ಹಾಗೂ ಅದ್ಬುತವಾದ ಹಬ್ಬಗಳನ್ನು ಆಚರಿಸುವುದಕ್ಕೆ ಪ್ರಸಿದ್ದಿಯನ್ನು ಪಡೆದಿದೆ.

ಮೂಲತಃ ವಾಗಿ"ಮಾಂಡ್" ಎಂದು ಕರೆಯಲ್ಪಡುವ ಈ ಹಬ್ಬವು ರಾಜಸ್ಥಾನದ ರಾಜರುಗಳು ಮತ್ತು ರಾಜಕುಮಾರಿಯರನ್ನು ಈ ಸಂಧರ್ಬದಲ್ಲಿ ಗೌರವಿಸಲಾಗುತ್ತದೆ. ಇದರ ಇತಿಹಾಸದಲ್ಲಿ ಬರುವ ರಜಪೂತ ರಾಜವಂಶದ ವೀರರನ್ನು ಗೌರವಿಸುವ ಸಲುವಾಗಿಈ ಹಬ್ಬವನ್ನು ಶರದ್ ಪೂರ್ಣಿಮಾ ಹುಣ್ಣಿಮೆಯ ದಿನಗಳಲ್ಲಿ ಆಚರಿಸಲಾಗುತ್ತದೆ. ಮಾರ್ವಾರ್ ಉತ್ಸವವು ಸಂಗೀತ ಮತ್ತು ನೃತ್ಯದ ವಾರ್ಷಿಕ ಆಚರಣೆಯಾಗಿದ್ದು, ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ನಡೆಯುತ್ತದೆ.

deepawalifestival

5) ದೀಪಾವಳಿ (ಅಕ್ಟೋಬರ್ 24)

ದೀಪಾವಳಿಯು ಭಾರತದಲ್ಲಿಯ ಅತ್ಯಂತ ದೊಡ್ಡ ಹಬ್ಬವಾಗಿದೆ ಈ ಹಬ್ಬವನ್ನು "ದೀಪಗಳ ಹಬ್ಬ" ಎಂದೂ ಕರೆಯಲಾಗುತ್ತದೆ. ದೀಪಾವಳಿಯನ್ನು ಪ್ರತೀವರ್ಷ ಆಚರಿಸಲಾಗುತ್ತಿದ್ದು ಭಕ್ತರು ಲಕ್ಷ್ಮೀದೇವಿ ಮತ್ತು ಗಣೇಶನನ್ನು ಸುಖ ಸಂಪತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾರೆ.

10 ತಲೆಯ ರಾಕ್ಷಸ ರಾಜ ರಾವಣನನ್ನು ಸೋಲಿಸಿ ವನವಾಸದಿಂದ ಬಂದ ರಾಮ ಅಯೋಧ್ಯೆಗೆ ಮರಳಿದ ದಿನದ ಸಂಕೇತವಾಗಿಯೂ ದೀಪಾವಳಿಯನ್ನು ಆಚರಿಸಲಾಗುತ್ತದೆ. ದೀಪಾವಳಿಯನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ, ಆದರೆ ಉತ್ತರ ಪ್ರದೇಶದ ಅಯೋಧ್ಯೆಗೆ ಈ ಸಮಯದಲ್ಲಿ ಭೇಟಿ ನೀಡಲೇಬೇಕು.

tawangfestival

6) ತವಾಂಗ್ ಹಬ್ಬ (ಅಕ್ಟೋಬರ್ 28ರಿಂದ ಅಕ್ಟೋಬರ್ 31ರ ವರೆಗೆ)

ತವಾಂಗ್ ಉತ್ಸವವು ಒಂದು ವಾರ್ಷಿಕ ಕಾರ್ಯಕ್ರಮವಾಗಿದ್ದು ಇದು 2012ರಲ್ಲಿ ಪ್ರಾರಂಭವಾಯಿತು. ಇದನ್ನು ಅರುಣಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆಯಿಂದ ಈ ಪ್ರದೇಶಕ್ಕೆ ಪ್ರಯಾಣವನ್ನು ಉತ್ತೇಜಿಸಲು ಮತ್ತು ಸ್ಥಳೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯ ರುಚಿಯನ್ನು ಪಡೆಯಲು ಪ್ರವಾಸಿಗರನ್ನು ಪ್ರೋತ್ಸಾಹಿಸಲು ಆಯೋಜಿಸಲಾಗಿದೆ. ಈ ಉತ್ಸವವು ಬೌದ್ಧ ಆಚರಣೆಗಳು, ಸಾಂಪ್ರದಾಯಿಕ ನೃತ್ಯಗಳು, ಸ್ಥಳೀಯ ಕ್ರೀಡೆಗಳು, ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳು, ಆಹಾರ ಉತ್ಸವಗಳು ಮತ್ತು ಹೆಚ್ಚಿನದನ್ನು ಒಳಗೊಂಡಿರುವ ಪ್ರದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X