Search
  • Follow NativePlanet
Share
» »ಕೋಲ್ಕತ್ತಾದಲ್ಲಿ ನವರಾತ್ರಿ ದುರ್ಗಾ ಪೂಜೆಯ ಆಚರಣೆಗಳು ಹೇಗೆ ನಡೆಯುತ್ತದೆ ನೋಡೋಣ ಬನ್ನಿ!

ಕೋಲ್ಕತ್ತಾದಲ್ಲಿ ನವರಾತ್ರಿ ದುರ್ಗಾ ಪೂಜೆಯ ಆಚರಣೆಗಳು ಹೇಗೆ ನಡೆಯುತ್ತದೆ ನೋಡೋಣ ಬನ್ನಿ!

2022ರಲ್ಲಿ ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾ ಪೂಜೆಯ ಆಚರಣೆಗಳು

ಈ ಅಕ್ಟೋಬರ್ ನಲ್ಲಿ ಭಾರತವು ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾಪೂಜೆ ಅಥವಾ ದಸರ, ನವರಾತ್ರಿ ಎಂದು ಕರೆಯಲಾಗುವ ಆಡಂಬರದ ಹಬ್ಬವನ್ನು ಆಚರಿಸುತ್ತದೆ. ದುರ್ಗಾ ಪೂಜೆಯು ದುಷ್ಟ ಶಕ್ತಿಯ ಮೇಲೆ ಒಳಿತಿನ ವಿಜಯದ ಸಂಕೇತವನ್ನು ಪ್ರತಿಬಿಂಬಿಸಲು ಹಾಗೂ ದುರ್ಗಾ ದೇವಿಯು ಮಹಿಷಾಸುರ ನನ್ನು ಕೊಂದು ವಿಜಯ ಸಾಧಿಸುದದರ ಸಂಕೇತವಾಗಿ ಈ ಹಬ್ಬವನ್ನು ದುರ್ಗಾದೇವಿಯನ್ನು ಗೌರವಾರ್ಥವಾಗಿ ಆಚರಿಸಲಾಗುತ್ತದೆ. ಈ ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬವನ್ನು ಭಾರತದ ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ.

ಕರ್ನಾಟಕ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ ಮತ್ತು ಇನ್ನಿತರ ಸ್ಥಳಗಳಲ್ಲಿ ದುರ್ಗಾ ಪೂಜೆ ಅಥವಾ ದಸರವನ್ನು ಬಹಳ ಉತ್ಸಾಹ ಮತ್ತು ಉಲ್ಲಾಸದಿಂದ ಆಚರಿಸಲಾಗುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಈ ಹಬ್ಬಕ್ಕೆ ಇನ್ನಷ್ಟು ಮಹತ್ವವನ್ನು ನೀಡಲಾಗುತ್ತದೆ. ಕೋಲ್ಕತ್ತಾದ ರಾಜಧಾನಿ ಈ ಸಂದರ್ಭದಲ್ಲಿ ಜೀವಂತವಾಗಿ ಕಾಣುತ್ತದೆ ಮತ್ತು ಇಲ್ಲಿ ವರ್ಣರಂಜಿತ ಉತ್ಸವಗಳನ್ನು ವೀಕ್ಷಿಸಲು ನಿಜವಾಗಿಯೂ ಸಂತೋಷವಾಗುತ್ತದೆ!

ಕೊಲ್ಕತ್ತಾ 2022 ರಲ್ಲಿ ದುರ್ಗಾ ಪೂಜೆಯ ಆಚರಣೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಓದಿ

ಪೆಂಡಾಲ್ ಗಳು

ಪೆಂಡಾಲ್ ಗಳು

ದುರ್ಗಾ ಪೂಜೆಯ ಆಚರಣೆಯ ಸಂದರ್ಭದಲ್ಲಿ, ಕೋಲ್ಕತ್ತಾದ ಇಡೀ ನಗರವನ್ನು ಒಂಬತ್ತೂ ದಿನಗಳ ಕಾಲ ಜಗಮಗಿಸುವ ದೀಪಗಳು ಮತ್ತು ಹೂವುಗಳಿಂದ ಅಲಂಕರಿಸಲಾಗುತ್ತದೆ. ದುರ್ಗಾ ದೇವಿಯನ್ನು ಪೂಜಿಸುವ ಸಲುವಾಗಿ ಭಕ್ತಿ ಕಾರ್ಯಕ್ರಮಗಳು, ಹಾಡುಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಡೆಯುವ ಎರಡು ಸಾವಿರಕ್ಕೂ ಹೆಚ್ಚು ಪೆಂಡಾಲ್‌ಗಳನ್ನು (ತಾತ್ಕಾಲಿಕ) ಸ್ಥಾಪಿಸಲಾಗುತ್ತದೆ. ಜಗತ್ತಿನಾದ್ಯಂತದ ಜನರು ಈ ಪೆಂಡಾಲ್ ಗಳಿಗೆ ಸಂತೋಷದಿಂದ ಭೇಟಿ ಕೊಟ್ಟು ಕೊಲ್ಕತ್ತಾದಲ್ಲಿ ನಡೆಯುವ ದುರ್ಗಾ ಪೂಜೆಯ ಸಾರವನ್ನು ಅನುಭವಿಸಲು ಭೇಟಿ ಕೊಡುತ್ತಾರೆ .

ಪೆಂಡಾಲ್ ನಲ್ಲಿ ಕಂಡು ಬರುವ ದೃಶ್ಯಗಳು

ಮಾ ದುರ್ಗೆಯ ಪ್ರತಿಮೆಯು ಈ ಪೆಂಡಾಲ್ ಗಳಲ್ಲಿ ಇರಿಸಲಾಗುತ್ತದೆ ಮತ್ತು ಪ್ರತೀ ಪೆಂಡಾಲ್ ಗಳಲ್ಲಿಯೂ ವಿವಿಧ ಬಗೆಯ ಥೀಮ್ ಗಳನ್ನು ಒಳಗೊಂಡಿರುತ್ತದೆ. ಒಂಬತ್ತು ದಿನಗಳ ಕಾಲನಡೆಯುವ ಈ ಹಬ್ಬದ ಕೊನೆಯ ದಿನದಂದು ನಗರದ ಅತ್ಯುತ್ತಮ ಪೆಂಡಾಲ್ ಅನ್ನು ಆರಿಸಿ ಅದಕ್ಕೆ ಬಹುಮಾನ ನೀಡಲಾಗುತ್ತದೆ. ಕೆಲವು ಅತ್ಯಂತ ಜನಪ್ರಿಯ ಪೆಂಡಾಲ್ ಗಳಲ್ಲಿ ಬಾಗ್ ಬಜಾರ್, ಕಾಲೇಜ್ ಸ್ಕ್ಯ್ವಾರ್, ಕುಮರ್ತುಲಿ ಪಾರ್ಕ್, ಸಂತೋಷ್ ಮಿತ್ರ ಸ್ಕ್ವ್ಯಾರ್, ಸುರುಚಿ ಸಂಘ ಇತ್ಯಾದಿ ಪ್ರಮುಖವಾದವುಗಳಾಗಿವೆ.

ಕುಮಾರ್ತುಲಿ

ಕುಮಾರ್ತುಲಿ

ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾದಲ್ಲಿ ಕಂಡುಬರುವ ಮತ್ತೊಂದು ಪ್ರಮುಖ ಚಟುವಟಿಕೆಯೆಂದರೆ ಕುಂಬಾರರು ದುರ್ಗಾ ದೇವಿಯ ಸುಂದರವಾದ ಮಣ್ಣಿನ ವಿಗ್ರಹಗಳನ್ನು ತಯಾರಿಸುವ ಪ್ರದೇಶವಾಗಿದೆ. ಇಲ್ಲಿ ನುರಿತ ಕುಂಬಾರರಿಂದ ಸೃಜನಾತ್ಮಕವಾಗಿ ಮಾಡಿದ ದೊಡ್ಡ ಮತ್ತು ಚಿಕ್ಕ ದೇವರ ವಿಗ್ರಹಗಳನ್ನು ಕೆತ್ತಲಾಗುತ್ತದೆ ಮತ್ತು ಸುಂದರವಾಗಿ ಚಿತ್ರಿಸಲಾಗುತ್ತದೆ. ದುರ್ಗಾ ಪೂಜೆಯ ಸಮಯದಲ್ಲಿ ಕೋಲ್ಕತ್ತಾಗೆ ಪ್ರವಾಸದಲ್ಲಿರುವಾಗ ಇದನ್ನು ವೀಕ್ಷಿಸುವುದನ್ನು ತಪ್ಪಿಸಿಕೊಳ್ಳಬಾರದು.

ಬಿರ್ಭುಮ್ ಮತ್ತು ಬಂಕುರ ಜಿಲ್ಲೆಗಳು

ಬಿರ್ಭುಮ್ ಮತ್ತು ಬಂಕುರ ಜಿಲ್ಲೆಗಳು

ದುರ್ಗಾ ಪೂಜೆಯ ಸಮಯದಲ್ಲಿ, ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಈ ದೊಡ್ಡ ಹಬ್ಬವನ್ನು ಹೇಗೆ ಆಚರಿಸಲಾಗುತ್ತದೆ ಎಂಬ ಕಲ್ಪನೆಯನ್ನು ಪಡೆಯಲು ಕೋಲ್ಕತ್ತಾದ ಈ ಜಿಲ್ಲೆಗಳಿಗೆ ಭೇಟಿ ನೀಡಬಹುದು. ಇಲ್ಲಿರುವ ಮೆರವಣಿಗೆಗಳು ಮತ್ತು ಪೆಂಡಾಲ್‌ಗಳು ಖಂಡಿತವಾಗಿಯೂ ಭೇಟಿ ನೀಡಲು ಯೋಗ್ಯವಾಗಿವೆ. ಇದರ ಜೊತೆಗೆ, ಪ್ರವಾಸಿಗರು ರೇಷ್ಮೆ ನೇಯ್ಗೆ, ಶಂಖ-ಚಿಪ್ಪು ಕೆತ್ತನೆ, ಟೆರಾಕೋಟಾ ಕುಂಬಾರಿಕೆ ಮತ್ತು ಧೋಕ್ರಾ ಲೋಹದ ಕೆತ್ತನೆಗಳನ್ನು ಈ ಜಿಲ್ಲೆಗಳಲ್ಲಿ ವೀಕ್ಷಿಸಬಹುದು. ಕೋಲ್ಕತ್ತಾದ ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯುವುದನ್ನು ಸಹ ಆನಂದಿಸಬಹುದು.

ಹೂಗ್ಲಿ ನದಿ

ಹೂಗ್ಲಿ ನದಿ

ದುರ್ಗಾ ಪೂಜೆಯ ಒಂಬತ್ತನೇ ದಿನದಂದು, ಮಾ ದುರ್ಗೆಯ ವಿಗ್ರಹಗಳನ್ನು ಬಹಳ ವಿಜೃಂಭಣೆಯಿಂದ ಹೂಗ್ಲಿ ನದಿಗೆ ಒಯ್ಯಲಾಗುತ್ತದೆ. ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿರುವ ವಿಸ್ತಾರವಾದ ಮೆರವಣಿಗೆಗಳೊಂದಿಗೆ ವಿಗ್ರಹಗಳನ್ನು ಅಲ್ಲಿಗೆ ತರಲಾಗುತ್ತದೆ. ನದಿಯನ್ನು ತಲುಪಿದ ನಂತರ, ವಿಗ್ರಹಗಳನ್ನು ಅಂತಿಮವಾಗಿ ನೀರಿನಲ್ಲಿ ಮುಳುಗಿಸಲಾಗುತ್ತದೆ, ಇದು ಕೊಲ್ಕತ್ತಾದಲ್ಲಿ ದುರ್ಗಾ ಪೂಜೆಯ ಮುಕ್ತಾಯವನ್ನು ಸೂಚಿಸುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X