ನೆರ್ಸಗೆ ಅಕ್ಟೋಬರ್ ನಿಂದ ಮಾರ್ಚ್ ನಡುವಿನ ಕಾಲದಲ್ಲಿ ಭೇಟಿಕೊಡಲು ಅತ್ಯುತ್ತಮವಾಗಿದೆ. ಏಕೆಂದರೆ ಈ ಸಮಯದಲ್ಲಿ ಹವಾಮಾನ ಅತ್ಯಂತ ಹಿತಕರವಾಗಿರುತ್ತದೆ.
(ಮಾರ್ಚ್ ನಿಂದ ಮೇ): ನೆರ್ಸದಲ್ಲಿ ಬೇಸಿಗೆಯು ಅತ್ಯಂತ ಬಿಸಿಲಿನಿಂದ ಕೂಡಿದ್ದು ಅಸೌಕರ್ಯವನ್ನುಂಟು ಮಾಡುತ್ತದೆ. ಆಗ ಹಗಲಿನಲ್ಲಿ ಉಷ್ಣಾಂಶವು 40°ಸೆಲ್ಶಿಯಸ್ ವರೆಗು ಏರುತ್ತದೆ. ಪ್ರವಾಸಿಗರು ಈ ಇಲ್ಲಿಗೆ ಬೇಸಿಗೆಯಲ್ಲಿ ಚಾರಣ ಮತ್ತು ಪ್ರಾಣಿಗಳನ್ನು ನೋಡುವ ಸಲುವಾಗಿ ಆಗಮಿಸುತ್ತಾರೆ.
(ಜೂನ್ ನಿಂದ ಸೆಪ್ಟಂಬರ್): ನೆರ್ಸದಲ್ಲಿ ಮಳೆಗಾಲದಲ್ಲಿ ನೈಋತ್ಯ ಮಾರುತಗಳ ಕಾರಣದಿಂದಾಗಿ ಮಿತಪ್ರಮಾಣದ ಮಳೆ ಬೀಳುತ್ತದೆ. ಪ್ರವಾಸಿಗರು ಈ ಕಾಲದಲ್ಲಿ ಚಾರಣ ಕೈಗೊಳ್ಳಲು ಸಾಧ್ಯವಿಲ್ಲವಾದ್ದರಿಂದ, ಇಲ್ಲಿಗೆ ಭೇಟಿಕೊಡದಿರುವುದು ಉತ್ತಮ.
(ಡಿಸೆಂಬರ್ ನಿಂದ ಫೆಬ್ರವರಿ): ನೆರ್ಸದಲ್ಲಿ ಚಳಿಗಾಲವು ತಂಪಾಗಿ ಮತ್ತು ಹಿತವಾಗಿರುತ್ತದೆ. ಪ್ರವಾಸಿಗರು ಇಲ್ಲಿನ ಹಿತವಾದ ಮತ್ತು ಆಹ್ಲಾದಕರವಾದ ಹವಾಮಾನದಿಂದಾಗಿ ಈ ಸಮಯದಲ್ಲಿ ನೆರ್ಸಗೆ ಭೇಟಿಕೊಡಲು ಬಯಸುತ್ತಾರೆ.