Search
  • Follow NativePlanet
Share
ಮುಖಪುಟ » ಸ್ಥಳಗಳು » ನೆಲ್ಲೂರು » ಹವಾಮಾನ

ನೆಲ್ಲೂರು ಹವಾಮಾನ

ಚಳಿಗಾಲದ ಸಂದರ್ಭ ನೆಲ್ಲೂರಿಗೆ ಭೇಟಿ ನೀಡಲು ಉತ್ತಮ ಸಮಯ. ತಾಪಮಾನ ಈ ಸಮಯದಲ್ಲಿ ಗಣನೀಯವಾಗಿ ಇಳಿದಿರುತ್ತದೆ. ಇದರಿಂದ ಚಳಿಗಾಲದ ಸಂದರ್ಭ ಅಂದರೆ ಅಕ್ಟೋಬರ್‌ನಿಂದ ಫೆಬ್ರವರಿ ನಡುವಿನ ಅವಧಿಯಲ್ಲಿ ಬರುವುದು ಸೂಕ್ತ.

ಬೇಸಿಗೆಗಾಲ

ವರ್ಷದಲ್ಲೇ ಅತ್ಯಂತ ಸೆಖೆಯಿಂದ ಕೂಡಿರುವ ಸಮಯ ಇದು. ಈ ಸಂದರ್ಭದಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್‌ವರೆಗೂ ತಲುಪುತ್ತದೆ. ಈ ಸಂದರ್ಭದಲ್ಲಿ ಇಲ್ಲಿಗೆ ಪ್ರಯಾಣ ಬೆಳೆಸುವುದನ್ನು ಕೈಬಿಡುವುದು ಒಳಿತು. ಬೇಸಿಗೆಯಲ್ಲಿ ವಾತಾವರಣದಲ್ಲಿ ಬಿಸಿ ಗಾಳಿ ಇದ್ದು, ತೇವಾಂಶ ಕಡಿಮೆ ಇರುತ್ತದೆ. ಬೇಸಿಗೆಯಲ್ಲಿ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ಬೇಸಿಗೆಯಲ್ಲಿ ಬೆಳಗ್ಗಿನ ಹೊತ್ತಿನ ತಾಪಮಾನವೇ ಸರಾಸರಿ 35 ಡಿಗ್ರಿ ಸೆಲ್ಶಿಯಸ್‌ನಷ್ಟಿರುತ್ತದೆ. ಮೇ ತಿಂಗಳು ಅತಿ ಕಡು ಬೇಸಿಗೆ ಇರುವ ಸಮಯ. ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳುಗಳಲ್ಲಿ ಬೇಸಿಗೆ ಇರುತ್ತದೆ.

ಮಳೆಗಾಲ

ಜೂನ್‌ನಿಂದ ಆರಂಭವಾಗುವ ಮಳೆಗಾಲ ಸೆಪ್ಟೆಂಬರ್‌ವರೆಗೂ ಇರುತ್ತದೆ. ಈ ಸಂದರ್ಭದಲ್ಲಿ ತಾಪಮಾನದಲ್ಲಿ ಉಷ್ಣಾಂಶದ ಪ್ರಮಾಣ ಇಳಿಮುಖವಾಗುತ್ತದೆ. ಆದರೆ ಆ ಸಂದರ್ಭದಲ್ಲಿಯೂ ಉಷ್ಣಾಂಶ 32 ರಿಂದ 35 ಡಿಗ್ರಿ ಸೆಲ್ಶಿಯಸ್‌ ಇದ್ದೇ ಇರುತ್ತದೆ.

ಚಳಿಗಾಲ

ನೆಲ್ಲೂರಿಗೆ ಭೇಟಿ ನೀಡಲು ಚಳಿಗಾಲ ಸಕಾಲ. ತಾಪಮಾನ ಗರಿಷ್ಠ ಪ್ರಮಾಣದಲ್ಲಿ ಇಳಿಮುಖವಾಗುತ್ತದೆ. ಸುಮಾರು 15 ಡಿಗ್ರಿ ಸೆಲ್ಶಿಯಸ್‌ಗೆ ಇಳಿಯುತ್ತದೆ. ಈ ಸಮಯದಲ್ಲಿ ತಾಪಮಾನ ಹೆಚ್ಚೆಂದರೆ 30 ಡಿಗ್ರಿ ಸೆಲ್ಶಿಯಸ್‌ವರೆಗೆ ತಲುಪುತ್ತದೆ. ಅಕ್ಟೋಬರ್‌ನಿಂದ ಚಳಿಗಾಲ ಆರಂಭ. ಫೆಬ್ರವರಿವರೆಗೂ ಇರುತ್ತದೆ. ಇದು ಭೇಟಿಗೆ ಸರಿಯಾದ ಸಮಯ.