Search
  • Follow NativePlanet
Share
ಮುಖಪುಟ » ಸ್ಥಳಗಳು » ನೌಕುಚಿಯಾತಲ್ » ಹವಾಮಾನ

ನೌಕುಚಿಯಾತಲ್ ಹವಾಮಾನ

ನೌಕುಚಿಯತಲ್‍ನಲ್ಲಿ ವರ್ಷ ಪೂರ್ತಿ ಉತ್ತಮ ಹವಾಮಾನವಿರುವುದರಿಂದ ಇದನ್ನು ಸರ್ವಋತು ರಜಾ ದಿನದ ವಿಹಾರ ತಾಣವೆಂದು ಕರೆಯಲಾಗುತ್ತದೆ. ಆದರು ಬೇಸಿಗೆ ಮತ್ತು ಮಳೆಗಾಲದ ನಂತರದ ದಿನಗಳು ಇಲ್ಲಿಗೆ ಭೇಟಿಕೊಡಲು ಪ್ರಶಸ್ತವಾದ ಸಮಯವಾಗಿದೆ. ಆಗ ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯಲು ಮತ್ತು ಇನ್ನಿತರ ಸ್ಥಳಗಳನ್ನು ನೋಡಲು ಅನುಕೂಲಕರವಾಗಿರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ನೌಕುಚಿಯತಲ್‍ನಲ್ಲಿ ಬೇಸಿಗೆಯು ಮಾರ್ಚ್ ನಲ್ಲಿ ಆರಂಭವಾಗಿ ಜೂನ್‍ನಲ್ಲಿ ಅಂತ್ಯಗೊಳ್ಳುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 28° ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 15° ಡಿಗ್ರಿ ಸೆಲ್ಶಿಯಸ್ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್) : ನೌಕುಚಿಯತಲ್‍ನಲ್ಲಿ ಮಳೆಗಾಲವು ಇಲ್ಲಿ ಜುಲೈನಿಂದ ಆರಂಭವಾಗಿ ಸೆಪ್ಟೆಂಬರ್ ವರೆಗೆ ಇರುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ) : ನೌಕುಚಿಯತಲ್‍ನಲ್ಲಿ ಚಳಿಗಾಲವು ಅಕ್ಟೋಬರ್ ನಿಂದ ಫೆಬ್ರವರಿಯವರೆಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 15˚ ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 3˚ ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಹಾಗಾಗಿ ಇಲ್ಲಿ ಈ ಸಮಯದಲ್ಲಿ ಮರಗಟ್ಟುವಂತಹ ಚಳಿ ಇರುತ್ತದೆ. ಒಮ್ಮೊಮ್ಮೆ ಇಲ್ಲಿನ ಉಷ್ಣಾಂಶವು ಶೂನ್ಯಕ್ಕಿಂತ ಕಡಿಮೆ ಪ್ರಮಾಣಕ್ಕೆ ಕುಸಿಯುವ ಸಾಧ್ಯತೆ ಸಹ ಇರುತ್ತದೆ.