ನೌಕುಚಿಯತಲ್ ಕೆರೆಯು ಸಮುದ್ರ ಮಟ್ಟದಿಂದ 3996 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಒಂದು ಸುಂದರವಾದ ಕೆರೆಯಾಗಿದೆ. "ನೌಕುಚಿಯತಲ್" ಎಂಬ ಪದದ ಅರ್ಥವೇನೆಂದರೆ ಒಂಬತ್ತು ಮೂಲೆಗಳನ್ನು ಹೊಂದಿರುವ ಕೆರೆಯೆಂದಾಗುತ್ತದೆ. ನಂಬಿಕೆಗಳ ಪ್ರಕಾರ, ಈ ಕೆರೆಯ ಒಂಬತ್ತು ಮೂಲೆಗಳನ್ನು ನೋಡುವ ವ್ಯಕ್ತಿಯು 'ನಿರ್ವಾಣ' ಅರ್ಥಾತ್ ಮೋಕ್ಷವನ್ನು ಹೊಂದುತ್ತಾನಂತೆ. ಈ ಕೆರೆಯು ಒಂದು ಅಂತರ್ಗಾಮಿಯಾಗಿ ಹರಿಯುವ ಝರಿಯಿಂದ ನೀರನ್ನು ಪಡೆಯುತ್ತದೆ. ಹಾಗಾಗಿ ಇದು ವರ್ಷಪೂರ್ತಿ ತುಂಬಿರುತ್ತದೆ.
ಈ ಸ್ಥಳದಲ್ಲಿ ಹಲವಾರು ಪಕ್ಷಿ ಪ್ರಭೇದಗಳು ವಾಸಿಸುತ್ತಿದ್ದು, ಪಕ್ಷಿ ವೀಕ್ಷಕರಿಗೆ ಈ ಸ್ಥಳವು ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಈ ಕೆರೆಯಲ್ಲಿ ದೋಣಿ ವಿಹಾರ, ಈಜು, ಮೀನು ಹಿಡಿಯುವುದು ಮುಂತಾದ ಚಟುವಟಿಕೆಗಳನ್ನು ಮಾಡಬಹುದು. ಪ್ರವಾಸಿಗರು ಮೌಂಟೇನ್ ಬೈಕಿಂಗ್ ಮತ್ತು ಪ್ಯಾರಾಗ್ಲೈಡಿಂಗ್‍ನಂತಹ ಸಾಹಸ ಚಟುವಟಿಕೆಗಳನ್ನೂ ಸಹ ನೌಕುಚಿಯಟಲ್‍ನಲ್ಲಿ ಕೈಗೊಳ್ಳಬಹುದು. ಕೆರೆಯ ಸುತ್ತಮುತ್ತಲ ಪ್ರಶಾಂತವಾದ ವಾತಾವರಣದಲ್ಲಿ ನಡೆದಾಡುತ್ತ ಪ್ರಕೃತಿಯ ಸೊಬಗನ್ನು ಸವಿಯಬಹುದು.


Click it and Unblock the Notifications