Search
  • Follow NativePlanet
Share
ಮುಖಪುಟ » ಸ್ಥಳಗಳು » ನಂದಿ ಬೆಟ್ಟ » ಹವಾಮಾನ

ನಂದಿ ಬೆಟ್ಟ ಹವಾಮಾನ

ನಂದಿ ಬೆಟ್ಟವನ್ನು ವರ್ಷದಲ್ಲಿ ಮಳೆಗಾಲವನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ  ಪ್ರವಾಸಿಸಬಹುದು.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಬೇಸಿಗೆ ಕಾಲದಲ್ಲಿ ನಂದಿ ಶಿಖರಗಳು ಸಾಧಾರಣ ವಾತಾವರಣವನ್ನು ಹೊಂದಿದ್ದು ಗರಿಷ್ಠ ಉಷ್ಣಾಂಶ 29 ಡಿಗ್ರಿ ಮತ್ತು ಕನಿಷ್ಠ ಉಷ್ಣಾಂಶ 23 ಡಿಗ್ರಿ ಇರುತ್ತದೆ. ಪ್ರವಾಸಿಗರು ತಣ್ಣನೆಯ ವಾತಾವರಣದ ಕಾರಣ ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ಕೊಡುವುದು ಸಹಜ.

ಮಳೆಗಾಲ

(ಜೂನ್ ನಿಂದ ಆಗಸ್ಟ್): ಈ ಬೆಟ್ಟಗುಡ್ಡಗಳ ಶ್ರೇಣಿಯಲ್ಲಿ ನೈರುತ್ಯ ಮೋಡಗಳ ಪ್ರಭಾವದಿಂದ ಆಸಾಧಾರಣ ಮಳೆಯಾಗುತ್ತಿರುತ್ತದೆ. ಈ ಸಮಯದಲ್ಲಿ ಬೆಟ್ಟಗುಡ್ಡಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನು  ಪ್ರವಾಸಿಗರಿಗೆ ಮಾಡಲು ಕಷ್ಟವಾದುದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದಿಲ್ಲ ಎನ್ನಬಹುದು.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ): ಚಳಿಗಾಲದಲ್ಲಿ ನಂದಿ ಬೆಟ್ಟಗಳ ವಾತಾವರಣವೂ ತುಂಬಾ ಹಿತಕರವಾಗಿರುತ್ತದೆ. ಈ ಸಮಯದಲ್ಲಿ ದಾಖಲಾದ ಕನಿಷ್ಠ ಉಷ್ಣಾಂಶ 11 ಡಿಗ್ರಿ  ಮತ್ತು ಗರಿಷ್ಠ ಉಷ್ಣಾಂಶ 21 ಡಿಗ್ರಿ ಆಗಿದೆ. ಪ್ರವಾಸಿಗರು ಹಿತಕರ ಮತ್ತು ಅನುಕೂಲಕರ ವಾತಾವರಣದ  ಕಾರಣ ಚಳಿಗಾಲದಲ್ಲಿ ಹೆಚ್ಚು ಭೇಟಿ ನೀಡುತ್ತಾರೆ.