Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಂದೇಡ್

ಗುರು ಗೋವಿಂದರ ನೆಚ್ಚಿನ ನಾಂದೇಡ್

12

ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ನಾಂದೇಡ್ ನಗರವಿದೆ. ಇತ್ತೀಚಿನ ದಿನಗಳಲ್ಲಿ ಈ ಪ್ರದೇಶವು ಭೂ ಪರಿವರ್ತನೆ ಮಾಡುವ ಲ್ಯಾಂಡ್ ಡೆವಲಪರ್ಸ್ ಮುಂತಾದ ಬಂಡವಾಳ ಶಾಹಿಗಳು ಹಾಗೂ ಧಾರ್ಮಿಕ ಸಂಸ್ಥೆಗಳನ್ನು ಆಕರ್ಷಿಸುತ್ತಿದ್ದು ಪ್ರವಾಸಿಗರಿಗೂ ಇದು ಮೆಚ್ಚುಗೆಯ ಪ್ರದೇಶವಾಗಿ ಹೊರಹೊಮ್ಮುತ್ತಿದೆ. ಸಿಖ್ಖರ ಜನಪ್ರಿಯ ಧಾರ್ಮಿಕ ಕೇಂದ್ರ ಇಲ್ಲಿದೆ. ಕೊನೆಯ ಗುರು, ಗುರು ಗೋವೀಂದ ಸಿಂಗರ ನೆನಪಿನಾರ್ಥವಾಗಿ ಕಟ್ಟಿರುವ ಹುಜೂರ್ ಸಾಹೇಬ್ ಇಲ್ಲಿದ್ದು, ಇದನ್ನು ಸಚ್ಕಾಂದ್ ಗುರುದ್ವಾರ್ ಎಂದೂ ಕರೆಯುತ್ತಾರೆ.

ಮುಘಲರು ಭಾರತವನ್ನು ಆಳುತ್ತಿದ್ದ ದಿನಗಳಿಂದಲೂ ನಾಂದೇಡ್ ಪ್ರದೇಶದಲ್ಲಿ ಹೆಚ್ಚಾಗಿ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಲೆ ಇದ್ದವು. ಇಂದು ನಾಂದೇಡ್ ಅನೇಕ ಸಿಖ್ ದೇವಸ್ಥಾನಗಳನ್ನು ಹಾಗೂ ಮಸೀದಿಗಳನ್ನು ಹೊಂದಿದ್ದು ಅನೇಕ ಧರ್ಮಗಳ ಕೇಂದ್ರ ಸ್ಥಾನವಾಗಿದ್ದು, ಭಾರತದ ಉದ್ದಗಲಕ್ಕೂ ಅನೇಕ ಭಕ್ತಾಧಿಗಳನ್ನು ತನ್ನತ್ತ ಸೆಳೆದುಕೊಂಡಿದೆ. ಅಷ್ಟು ಮಾತ್ರವಲ್ಲದೆ, ನಾಂದೇಡ್ ಅನೇಕ ಹಿಂದೂ ದೇವಾಲಯಗಳನ್ನು ಹೊಂದಿದ್ದು ಸಿಖ್ಖರ ಗುರುಗಳಾದ ಹತ್ತನೇ ಗುರು ಗೋವಿಂದ್ ಸಿಂಗ್ ತಮ್ಮ ಕೊನೆಯ ದಿನಗಳಲ್ಲಿ ಇದೆ ಊರಿನಲ್ಲಿ ನೆಲೆಸಿದ್ದರು ಎಂಬ ಪ್ರತೀತಿ ಇದೆ.

ಇಲ್ಲಿಯೆ ಅವರು ಸಿಖ್ಖರ ಪವಿತ್ರ ಗ್ರಂಥವಾದ 'ಗುರು ಗ್ರಂಥ್ ಸಾಹೇಬ್' ರಚಿಸಿದ್ದರು ಎಂದು ಹೇಳಲಾಗುತ್ತದೆ. ಇತರ ಧಾರ್ಮಿಕ ಸ್ಥಳಗಾಳಾದ ಕಾಂದಾರ್ ದರ್ಗಾ ಮತ್ತು ಬಿಹೋಲಿ ಮಸೀದಿ  ಮತ್ತು ಇದರ ಜೊತೆಗೆ ಗೋವಿಂದ ಉದ್ಯಾನ ಹಾಗೂ ಇಸಾಪೂರ್ ಡ್ಯಾಮ್ ಕೂಡ ನಗರದ ಕೇಂದ್ರ ಪ್ರದೇಶದಿಂದ 100 ಕಿ.ಮೀ.ಅಂತರದಲ್ಲಿದೆ. ಭಾರತದಲ್ಲಿ ಹಿಂದೂಗಳ ಪ್ರಮುಖ ಹಬ್ಬಗಳಾದ ನವರಾತ್ರಿಯನ್ನು ಇಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ.

ಸುಸಂಸ್ಕೃತ ಬೀದಿಗಳು

ನಾಂದೇಡ್ ನಗರದ ಬೀದಿಗಳು ಬಹಳ ವಿಶೇಷವಾಗಿ ಕಂಡು ಬರುತ್ತವೆ, ಕಾರಣವೇನೆಂದರೆ ಬೀದಿ ಬದಿಯಲ್ಲಿ ಕೂಗುತ್ತಾ ವ್ಯಾಪಾರ ಮಾಡುವವರು ಹಾಗೂ ರಸ್ತೆ ಬದಿಯಲ್ಲಿ ಬಣ್ಣ ಬಣ್ಣದ ಟಾರ್ಪಾಲ್ ಗಳನ್ನು ಹಾಕಿ ನಿರ್ಮಿಸಿಕೊಂಡಿರುವ ಅಂಗಡಿಗಳಲ್ಲಿ ಧಾರ್ಮಿಕ ಆಕರ್ಷಣೀಯ ವಸ್ತುಗಳಾದ ಬಟ್ಟೆಗಳು, ಜಪಮಣಿ ಸರಗಳು, ಕೀ ಚೈನ್, ಬಳೆಗಳು, ವಿಭಿನ್ನವಾದ ಕತ್ತಿ-ಖಡ್ಗಗಳು ಮಾರಾಟಕಿದ್ದು ಸಿಖ್ ಧರ್ಮದ ಸ್ಫೂರ್ತಿ ಎಲ್ಲೆಡೆ ಹರಡಿರುವುದನ್ನು ತೋರಿಸುವಂತಿದೆ. ನಿಧಾನವಾಗಿ ಹುಡುಕಿದರೆ ಉತ್ತಮ ವಸ್ತುಗಳು ಸಿಗುತ್ತವೆ. ನಾಂದೇಡ್ ಬೀದಿಗಳಲ್ಲಿ ಚೌಕಾಸಿ ಮಾಡದೆ ಯಾರೂ ವ್ಯಾಪಾರ ಮಾಡುವುದೆ ಇಲ್ಲವಂತೆ. ಇಲ್ಲಿ ಭಕ್ತರು, ಹಬ್ಬಗಳಿಗೆ ಬರುವವರು ಹಾಗೂ ಪ್ರವಾಸಿಗರು ಹೀಗೆ ಎಲ್ಲಾ ರೀತಿಯ ಜನರು ತುಂಬಿರುತ್ತಾರೆ. ನಾಂದೇಡ್ ರುಚಿ ರುಚಿಯಾದ ತಿಂಡಿಗಳಿಗೂ ಹೇಳಿ ಮಾಡಿಸಿದ ನಗರವೆ ಹೌದು. ರಸ್ತೆ ಬದಿಯಲ್ಲಿ ಧೂಳು ಗೋಚರಿಸುತ್ತಿದ್ದರೂ ಚಿಕ್ಕ ಅಂಗಡಿಗಳು ಹಾಗೂ ಟೀ ಶಾಪುಗಳಲ್ಲಿ ತಿಂಡಿಗಳನ್ನು ಖರೀದಿಸಲು ಜನರ ದಟ್ಟಣಿ ಇದ್ದೆ ಇರುತ್ತದೆ.

ಕೋಟೆಗಳು ಹಾಗೂ ಇತರೆ ಆಕರ್ಷಣೆಗಳು

ನಾಂದೇಡ್ ನಗರದಲ್ಲಿ ಜನಪ್ರಿಯ ಪುರಾತನ ಕೋಟೆಳಾದ ಕಂಧರ್, ದರೂರ್ ಹಾಗೂ ಕುಂತಲಗಿರಿಗಳನ್ನು ಕಾಣಬಹುದಾಗಿದೆ. ಈ ಕೋಟೆಗಳು ಮರಾಠರ ಕಾಲದಲ್ಲಿ ನಿರ್ಮಾಣಗೊಂಡವುಗಳು. ಇದು ಛಾಯಾಗ್ರಾಹಕರ ಸ್ವರ್ಗವೆಂದೆ ಖ್ಯಾತಿ ಪಡೆದ ತಾಣವಾಗಿದ್ದು ಇಲ್ಲಿಗೆ ದೇಶ ಹಾಗೂ ವಿದೇಶಗಳ ಹೆಸರಾಂತ ಛಾಯಾಗ್ರಾಹಕರುಗಳು ಭೇಟಿ ನೀಡಿ ವಿಭಿನ್ನ ಕೋನಗಳಿಂದ ಆಕರ್ಷಕ ಚಿತ್ರಗಳನ್ನು ಕ್ಲಿಕ್ಕಿಸಿದ್ದಾರೆ. ಚಾರಣ ಪ್ರೀಯರಿಗೂ ಇದು ಮೆಚ್ಚಿನ ಸ್ಥಳವಾಗಿದ್ದು, ಇಲ್ಲಿಗೆ ಪ್ರವಾಸಕ್ಕೆ ಬರುವವರು ಮೊದಲೆ ಪ್ಲಾನ್ ಮಾಡಿಕೊಂಡು ಬರುತ್ತಾರೆ. ಇದಕ್ಕಾಗಿ ಕೆಲವು ಸಂಸ್ಥೆಗಳೂ ಇಲ್ಲಿ ಕಾರ್ಯ ನಿರ್ವಹಿಸುತ್ತವೆ. ನೀವು ಮೊದಲನೆ ಬಾರಿಗೆ ಇಲ್ಲಿಗೆ ಹೋಗುತ್ತಿರುವುದಾದರೆ ಒಬ್ಬ ಗೈಡ್ ನನ್ನು ಗೊತ್ತು ಮಾಡಿಕೊಳ್ಳುವುದಾದರೆ, ನೀವು ಅಂದುಕೊಂಡ ಸಮಯದಲ್ಲಿ ಎಲ್ಲಾ ಆಕರ್ಷಕ ತಾಣಗಳನ್ನು ನೋಡಿಕೊಂಡು ಬರಬಹುದು. ನಾಂದೇಡ್ ಅಪ್ರಿಪೂರ್ಣವಾಗಿ ಅನ್ವೇಷಿಸಲು ನಾಲ್ಕೈದು ದಿನಗಳು ಸಾಕು. ಇನ್ನೊಂದೆರಡು ದಿನ ಛಾಯಾಗ್ರಹಣ ಹಾಗೂ ಚಾರಣಕ್ಕೆ ಮೀಸಲಿಡಬಹುದು.

ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳ ಚಳಿಗಾಲವು ನಾಂದೇಡಿಗೆ ಭೇಟಿ ನೀಡಲು ಸೂಕ್ತ ಕಾಲ. ಬೇಸಿಗೆಯಲ್ಲಿ ಕೊಂಚ ಶೆಕೆ ಇದ್ದರೂ ತಕ್ಕ ಮಳೆ ಹಾಗೂ ಚಳಿಗಾಲದಲ್ಲಿ ಚಳಿ ಅನುಭವ ಆಗದೆ ಇರದು. ನಾಂದೇಡ್ ತಲುಪಲು ವಿಮಾನ, ರಸ್ತೆ ಹಾಗೂ ರೈಲು ಮಾರ್ಗಗಳ ಸಂಪರ್ಕಗಳಿವೆ. ಸದ್ಯಕ್ಕೆ ಇಲ್ಲಿನ ಸ್ಥಳೀಯ ವಿಮಾನ ನಿಲ್ದಾಣದ ದುರಸ್ತಿ ಕಾರ್ಯ ಮುಗಿದಿದ್ದು ಮಹಾನಗರಗಳಾದ ಮುಂಬೈ ಹಾಗೂ ದೆಹಲಿಗೆ ಇಲ್ಲಿಂದ ವಿಮಾನ ಸಂಚರಿಸುತ್ತಿವೆ. ಆಯ್ಕೆ ಮಾಡಬಹುದಾದ ಸಂಚಾರ ವ್ಯವಸ್ಥೆ ಎಂದರೆ ಅದು ರೈಲು ಮಾರ್ಗ, ಬಹುತೇಕ ಎಲ್ಲಾ ಪ್ರಮುಖ ನಗರಗಳಿಗೂ ಇಲ್ಲಿಂದ ಸಂಪರ್ಕವಿದೆ.  

ಭಾರತದ ಬಹುತೇಕ ಪ್ರಮುಖ ನಗರಗಳಲ್ಲಿ ಕಂಡು ಬರುವಂತೆ ಇಲ್ಲಿಯೂ ಎಲ್ಲಾ ಧರ್ಮ, ಸಂಸ್ಕೃತಿ ಹಾಗೂ ದೇಶಗಳ ಜನರನ್ನು ಕಾಣಬಹುದು. ಇಲ್ಲಿನ ಸಂಸ್ಕೃತಿ ಹಾಗೂ ಎಲ್ಲಾ ಹಬ್ಬಹರಿದಿನಗಳಲ್ಲಿ ಭಾಗವಹಿಸುವ ಮೂಲಕ ಇಲ್ಲಿಗೆ ಬರುವವರು ಬದುಕಿನ ಹೊಸ ಅನುಭವವನ್ನು ಪಡೆದುಕೊಳ್ಳುವುದರಲ್ಲಿ ಅನುಮಾನವೆ ಇಲ್ಲ.

ನಾಂದೇಡ್ ಪ್ರಸಿದ್ಧವಾಗಿದೆ

ನಾಂದೇಡ್ ಹವಾಮಾನ

ಉತ್ತಮ ಸಮಯ ನಾಂದೇಡ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾಂದೇಡ್

  • ರಸ್ತೆಯ ಮೂಲಕ
    ಮುಂಬೈ ನಗರದಿಂದ 651 ಕಿ.ಮೀ. ದೂರದಲ್ಲಿರುವ ಈ ನಗರ ರಾಷ್ಟ್ರೀಯ ಹೆದ್ದಾರ 7ರ ಮೂಲಕ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಉತ್ತರ ಭಾರತದ ಕಡೆಯಿಂದ ನಾಂದೇಡ್ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹುತೇಕರು ರೈಲಿನಲ್ಲೆ ಪ್ರಯಾಣಿಸುತ್ತಾರೆ. ನಾಂದೇಡ್ ಪೂರ್ವದಲ್ಲಿ ನಾಗಪುರ್ ಹಾಗೂ ಪಶ್ಚಿಮದಲ್ಲಿ ಮುಂಬೈ ನಗರಗಳ ಹೆಚ್ಚು ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮುಂಬೈ, ಪುಣೆ ಹಾಗೂ ನಾಗಪುರದಿಂದ ಅನೇಕ ವಿಮಾನಗಳು ನಾಂದೇಡ್ ನಗರಕ್ಕೆ ಸಂಚರಿಸುತ್ತವೆ. ಇತ್ತೀಚೆಗೆ ದುರಸ್ತಿ ಮಾಡಲಾಗಿರುವ ನಾಂದೇಡ್ ವಿಮಾನ ನಿಲ್ದಾಣದಲ್ಲಿ ದೊಡ್ಡ ದೊಡ್ಡ ವಿಮಾನಗಳು ಬಂದು ಹೋಗಲು ಸೌಕರ್ಯವನ್ನು ಕಲ್ಪಿಸಲಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat