Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಮ್ಚಿ » ಹವಾಮಾನ

ನಾಮ್ಚಿ ಹವಾಮಾನ

ನಾಮ್ಚಿಯಲ್ಲಿ ಕಡಿಮೆ ತಾಪಮಾನದ ಬೇಸಿಗೆ ಮತ್ತು ಕೊರೆಯುವ ಚಳಿಗಾಲವಿರುತ್ತದೆ. ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಬೇಸಿಗೆ ಕಾಲ ಇಲ್ಲಿಗೆ ಭೇಟಿ ನೀಡಲು ಸೂಕ್ತವಾದ ಸಮಯ.

ಬೇಸಿಗೆಗಾಲ

ಇಲ್ಲಿ ಬೇಸಿಗೆ ಕಾಲ ಮಾರ್ಚ-ಜೂನ್. ಈ ಸಮಯದಲ್ಲಿ ಉಷ್ಣತೆಯು 28 ಡಿಗ್ರಿಯಿಂದ 10 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಈ ಸಮಯದಲ್ಲಿ ಹವಾಮಾನವು ಆಹ್ಲಾದಕರವಾಗಿದ್ದು ಪ್ರವಾಸಕ್ಕೆ ಹೇಳಿ ಮಾಡಿಸಿದಂತಿರುತ್ತದೆ.

ಮಳೆಗಾಲ

ನಾಮ್ಚಿಯಲ್ಲಿ ಜುಲೈ, ಆಗಸ್ಟ ಮತ್ತು ಸೆಪ್ಟೆಂಬರ್ಗಳಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ. ಈ ಸಮಯದಲ್ಲಿ ಉಷ್ಣತೆಯು ತುಂಬ ಕಡಿಮೆಯಿರುತ್ತದೆ. ಇದು ಪ್ರವಾಸಕ್ಕೆ ಸೂಕ್ತ ಸಮಯವಲ್ಲ.

ಚಳಿಗಾಲ

ಇಲ್ಲಿ ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣತೆಯು 16 ಡಿಗ್ರಿ ಸೆಲ್ಸಿಯಸ್ನಿಂದ -5 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದಾದರೆ ಬೆಚ್ಚನೆಯ ಉಣ್ಣೆಯ ಬಟ್ಟೆಗಳನ್ನು ಒಯ್ಯುವುದನ್ನು ಮರೆಯದಿರಿ.