'ಲ್ಯಾಂಡ್ಸ್ ಎಂಡ್' ಸಮುದ್ರ ಮಟ್ಟದಿಂದ 2118 ಮೀಟರ್ ಎತ್ತರದಲ್ಲಿರುವ ಒಂದು ರಮಣೀಯವಾದ ಪ್ರವಾಸಿ ತಾಣವಾಗಿದೆ. ಇದು ನೈನಿತಾಲ್ ನಿಂದ ಸುಮಾರು 4 ಕಿ. ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳವು ನೆರೆಯ ಬೆಟ್ಟಗಳ ಸಮ್ಮೋಹನಗೊಳಿಸುವ ವೀಕ್ಷಣೆಗಳು, ಹಸಿರು ಕಣಿವೆಗಳು ಮತ್ತು ಖುರ್ಪಾತಾಲ್ (ಖುರ್ಪ ಸರೋವರ) ಸರೋವರದ ರಮಣೀಯ ದೃಶ್ಯಗಳನ್ನು ವೀಕ್ಷಿಸುವ ಒಂದು ಪರಿದೃಶ್ಯಗಳನ್ನು ಒದಗಿಸುತ್ತದೆ. ಪ್ರವಾಸಿಗರು ಈ ಬೆಟ್ಟವನ್ನು ಹೆಚ್ಚು ಹತ್ತುವ ಅಗತ್ಯವಿಲ್ಲ. ಬಾರಾ ಪತ್ಥರ್ ವರೆಗೆ ವಾಹನಗಳಲ್ಲಿ ತಲುಪಿ ನಂತರ, ಕೇವಲ 1 ಕಿ. ಮೀ ದೂರವನ್ನು ನಡಿಗೆಯ ಮೂಲಕ ತಲುಪಬಹುದು. ಅಲ್ಲದೇ ಬಾರಾ ಪತ್ಥರ್ ರಿಂದ ಸ್ಥಳವನ್ನು ತಲುಪಲು ಒಂದು ಕುದುರೆಯನ್ನು ಕೂಡಾ ಏರಬಹುದು!


Click it and Unblock the Notifications