ನಾಗೂರ್ ದರ್ಗಾಕ್ಕೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಭೇಟಿ ನೀಡಬಹುದು. ಕೆಲವೇ ದಿನಗಳ ಪ್ರವಾಸ ಮಾಡುವವರು ಜೂನ್ ನಿಂದ ಸೆಪ್ಟಂಬರ್ ಮಧ್ಯೆ ನಾಗೂರ್ ಗೆ ಭೇಟಿ ನೀಡಬಹುದು. ಈ ವೇಳೆ ಹವಾಮಾನ ತೇವಾಂಶದಿಂದ ಕೂಡಿದ್ದರೂ ಪ್ರಕೃತಿ ವೀಕ್ಷಣೆ ಮತ್ತು ಮಂದಿರ ಭೇಟಿಗೆ ಯಾವುದೇ ಸಮಸ್ಯೆಯಿಲ್ಲ. ಅಕ್ಟೋಬರ್ ನಿಂದ ಮಾರ್ಚ್ ಮಧ್ಯೆ ನಾಗೂರ್ ಗೆ ಭೇಟಿ ನೀಡಲು ಪ್ರವಾಸಿಗರಿಗೆ ಸಲಹೆ ಮಾಡಲಾಗುತ್ತದೆ.
ಮಾರ್ಚ್ ನಲ್ಲಿ ನಾಗೂರ್ ನಲ್ಲಿ ಆರಂಭವಾಗುವ ಬೇಸಿಗೆ ಕಾಲವು ಮೇ ತನಕ ಮುಂದುವರಿಯುತ್ತದೆ. ಈ ತಿಂಗಳುಗಳಲ್ಲಿ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್ ನಿಂದ 39 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ. ಈ ತಿಂಗಳುಗಳಲ್ಲಿ ಅಧಿಕ ಉಷ್ಣಾಂಶದಿಂದಾಗಿ ಪ್ರವಾಸಿಗರು ಭೇಟಿ ನೀಡುವುದಿಲ್ಲ.
ಜೂನ್ ನಿಂದ ಸೆಪ್ಟಂಬರ್ ತನಕ ನಾಗೂರ್ ನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತದೆ. ಈ ಋತುವಿನಲ್ಲಿ ತಾಜಾ ಹೂ ಹಾಗೂ ತರಕಾರಿಗಳು ನಗರದೆಲ್ಲೆಡೆ ಸಿಗುತ್ತದೆ. ಋತು ಪ್ರತಿಯೊಬ್ಬರನ್ನು ಕೈಬೀಸಿ ಕರೆಯುತ್ತದೆ.
ಡಿಸೆಂಬರ್ ನಿಂದ ನಾಗೂರ್ ನಲ್ಲಿ ಚಳಿಗಾಲವು ಆರಂಭವಾಗಿ ಫೆಬ್ರವರಿ ತನಕ ಮುಂದುವರಿಯುತ್ತದೆ. ಹವಾಮಾನವು ತುಂಬಾ ಹಿತಕರವಾಗಿರುತ್ತದೆ ಮತ್ತು ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ನಿಂದ 30 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.