Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಾರ್ಜುನಸಾಗರ » ಹವಾಮಾನ

ನಾಗಾರ್ಜುನಸಾಗರ ಹವಾಮಾನ

ನಾಗರ್ಜುನಸಾಗರಕ್ಕೆ ಭೇಟಿ ನೀಡಲು ಸೂಕ್ತ ಸಮಯ ಅಕ್ಟೋಬರ್, ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ ತಿಂಗಳುಗಳು. ಈ ತಿಂಗಳಲ್ಲಿ  ಪಟ್ಟಣದಲ್ಲಿ ಹವಾಮಾನ ಅತ್ಯುತ್ತಮವಾಗಿದ್ದು ಮಧ್ಯಾಹ್ನ ಬೆಚ್ಚಗೆ ಮತ್ತು ಸಂಜೆಯು ಅಷ್ಟೊಂದು ತಂಪಾಗಿರದೆ ಹಿತಕರವಾಗಿರುತ್ತದೆ. ಈ ತಿಂಗಳಲ್ಲಿ ಹೊರಾಂಗಣ ಪ್ರಯಾಣ ಕೈಗೊಳ್ಳಲು ಸುಲಭವಾಗುತ್ತದೆ.

ಬೇಸಿಗೆಗಾಲ

ನಾಗರ್ಜುನಸಾಗರದಲ್ಲಿ ಅತ್ಯಂತ ಬಿಸಿಯಾದ ಬೇಸಿಗೆಯಿದ್ದು ಶಾಖದಿಂದ ಸನ್ ಸ್ಟ್ರೋಕ್ ಹಾಗೂ ನಿರ್ಜಲೀಕರಣ ಉಂಟಾಗುವ ಸಂಭವವಿದೆ. ಬೇಸಿಗೆಯ ತಿಂಗಳುಗಳು ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್. ಈ ತಿಂಗಳುಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸವರೆಗೆ  ಹೆಚ್ಚುವ ಸಾಧ್ಯತೆಯಿದೆ. ಈ ಸಮಯದಲ್ಲಿ ನಾಗರ್ಜುನಸಾಗರಕ್ಕೆ  ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ.

ಮಳೆಗಾಲ

ಪಟ್ಟಣದಲ್ಲಿ ಮಾನ್ಸೂನ್ ಜುಲೈ ತಿಂಗಳಿನಲ್ಲಿ  ಪ್ರಾರಂಭವಾಗುತ್ತದೆ. ಆಗಸ್ಟ್, ಸೆಪ್ಟೆಂಬರ್ಗಳಲ್ಲದೇ  ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ  ಕೂಡ ತುಂತುರು ಮಳೆಯಾಗುತ್ತಿರುತ್ತದೆ. ಮುಂಗಾರಿನ ಮಳೆಯು ಮಧ್ಯಮಗತಿಯಲ್ಲಿದ್ದು ಕೆಲವೊಮ್ಮೆ  ಗುಡುಗು ಬರಬಹುದು. ಈ ಸಮಯದಲ್ಲಿ ತಾಪಮಾನವು ಸಮಾನ್ಯವಾಗಿ 32 ಡಿಗ್ರಿ ಸೆಲ್ಶಿಯಸ್ ನಷ್ಟು ಕೆಳಗಿಳಿದಿರುತ್ತದೆ.

ಚಳಿಗಾಲ

ಚಳಿಗಾಲವು ನವೆಂಬರ್ ತಿಂಗಳಲ್ಲಿ ಆರಂಭಗೊಂಡು ಫೆಬ್ರವರಿ ಕೊನೆಯವರೆಗೆ ಇರುತ್ತದೆ. ಈ ಪ್ರದೇಶದಲ್ಲಿ ಅತ್ಯಂತ ತಂಪಾದ ತಿಂಗಳುಗಳು ಡಿಸೆಂಬರ್ ಮತ್ತು ಜನವರಿ. ಚಳಿಗಾಲದಲ್ಲಿ ಉತ್ತರ ಭಾರತದಲ್ಲಿರುವಷ್ಟು ಚಳಿ ಇರುವುದಿಲ್ಲ. ಬದಲಿಗೆ, ಹವಾಮಾನ ಸಾಕಷ್ಟು ಆಹ್ಲಾದಕರವಾಗಿರುತ್ತದೆ ಮತ್ತು ಚಳಿಗಾಲದ ಸೂರ್ಯ ಅಷ್ಟೊಂದು ಮುನಿಸಿಕೊಳ್ಳದೆ ಬೆಚ್ಚನೆಯ ಅನುಭವ ನೀಡುತ್ತಾನೆ.