Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗರಹೊಳೆ » ಹವಾಮಾನ

ನಾಗರಹೊಳೆ ಹವಾಮಾನ

ನಾಗರಹೊಳೆಗೆ ವರ್ಷವಿಡೀ ಯಾವುದೇ ಸಮಯದಲ್ಲಿ  ಭೇಟಿ ನೀಡಬಹುದಾಗಿದ್ದು , ಅಕ್ಟೋಬರ್ ನಿಂದ ಜನವರಿ ಸಮಯ ಅತ್ಯಂತ ಉತ್ತಮವಾಗಿದೆ ಏಕೆಂದರೆ  ಮಳೆಗಾಲದ ನಂತರ  ಕಾಡು ಹಚ್ಚ ಹಸಿರಿನಿಂದ ತುಂಬಿ ಇನ್ನಷ್ಟು ಸುಂದರವಾಗಿರುತ್ತದೆ . ಅದಕ್ಕೂ ಮಿಗಿಲಾಗಿ ಪ್ರಾಣಿಗಳನ್ನು ವೀಕ್ಷಿಸಲು ಅದು ಸರಿಯಾದ ಸಮಯವಾಗಿದೆ.

ಬೇಸಿಗೆಗಾಲ

ಬೇಸಿಗೆ ( ಮಾರ್ಚ್ ನಿಂದ ಏಪ್ರಿಲ್ ) : ನಾಗರ ಹೊಳೆಯಲ್ಲಿ ಬೇಸಿಗೆಯ ಸಮಯ ಸಹಜವಾಗಿ ಬಿಸಿಲಿನಿಂದ ಕೂಡಿದ್ದು  ಉಷ್ಣಾಂಶವು ಸರಾಸರಿ ಮಟ್ಟವು 33 ಡಿಗ್ರಿ  ದಾಖಲಾಗುತ್ತದೆ .  ಪ್ರವಾಸಿಗರು ಕಾಡು ಪ್ರಾಣಿಗಳ ವೀಕ್ಷಣೆಗಾಗಿ ಈ ಸಮಯದಲ್ಲಿ ಹೆಚ್ಚು ಭೇಟಿ ನೀಡುತ್ತಾರೆ.

ಮಳೆಗಾಲ

ಮಳೆಗಾಲ (ಜೂನ್ ನಿಂದ ಸೆಪ್ಟೆಂಬರ್) : ಮಳೆಗಾಲದಲ್ಲಿ ನಾಗರಹೊಳೆಯು ಮಧ್ಯಮ ಪ್ರಮಾಣದ ಮಳೆಯನ್ನು  ಕಾಣುತ್ತದೆ . ಹೊರಾಂಗಣ ಚಟುವಟಿಕೆಗಳನ್ನು ಮಾಡಲಾಗದ ಕಾರಣ ಪ್ರವಾಸಿಗರು ಮಳೆಗಾಲದಲ್ಲಿ  ಭೇಟಿ ನೀಡುವುದು ಅನಿರೀಕ್ಷಿತ.

ಚಳಿಗಾಲ

ಚಳಿಗಾಲ (ಅಕ್ಟೋಬರ್ ನಿಂದ  ಜನವರಿ ) : ಚಳಿಗಾಲದಲ್ಲಿ ನಾಗರಹೊಳೆಯ ವಾತಾವರಣವು ಅತ್ಯಂತ ಸುಂದರ ಮತ್ತು ಹಿತಕರವಾಗಿರುತ್ತದೆ , ಅಲ್ಲದೆ  ಉಷ್ಣಾಂಶದ ಕನಿಷ್ಠ ಮಟ್ಟವು 14 ಡಿಗ್ರಿ ದಾಖಲಾಗುತ್ತದೆ.