Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಹವಾಮಾನ

ಮಸ್ಸೂರಿ ಹವಾಮಾನ

ಮಾರ್ಚ್ ನಿಂದ ಜೂನ್ ಮತ್ತು ಸೆಪ್ಟೆಂಬರ್ ನಿಂದ ನವೆಂಬರ್ ಇಲ್ಲಿಗೆ ಭೇಟಿ ನೀಡಲು ಅತ್ಯುತ್ತಮವಾದ ಅವಧಿಯಾಗಿದೆ. ಚಾರಣ ಮತ್ತಿತರ ಸಾಹಸಿ ಪ್ರವೃತ್ತಿಯ ಪ್ರವಾಸಿಗರು ಇಲಿ ಬೇಸಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಸೆಪ್ಟೆಂಬರ್ ನಿಂದ ನವಂಬರ್ ತನಕದ ಮಾನ್ಸೂನ್ ಪೂರ್ವ ಅವಧಿಯು ರಿವರ್ ರಾಫ್ಟಿಂಗ್ ಗೆ ಸರಿಯಾದ ಸಮಯವಾಗಿದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್ ತನಕ) : ಇಲ್ಲಿ ಬೇಸಿಗೆ ಮಾರ್ಚ್ ನಿಂದ ಜೂನ್ ತನಕ ಇರುತ್ತದೆ. ಬೇಸಗೆಯಲ್ಲೂ ಇಲ್ಲಿ ತಂಪಾದ ಹವಾಮಾನವಿದ್ದು ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಶಿಯಸ್ ತನಕ ತಲುಪುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟೆಂಬರ್) : ಮಸ್ಸೂರಿಯಲ್ಲಿ ಸಾಮಾನ್ಯವಾದ ಮಳೆಯಾಗುತ್ತದೆ. ಇದು ಸುಮಾರು ಜೂನ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಇರುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಮಸ್ಸೂರಿಯಲ್ಲಿ ಚಳಿಗಾಲ ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರುವರಿಯ ತನಕ ಇರುತ್ತದೆ. ಈ ಸಮಯದಲ್ಲಿ ಈ ಪ್ರದೇಶದ ತಾಪಮಾನ ಕನಿಷ್ಠ 0 ಡಿಗ್ರಿ ಸೆಲ್ಶಿಯಸ್ ವರೆಗೂ ಕುಸಿಯುತ್ತದೆ. ಈ ಸಮಯದಲ್ಲಿ ಇಲ್ಲಿ ಭಾರಿ ಪ್ರಮಾಣದ ಹಿಮಪಾತವಾಗುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವವರು ದಪ್ಪನೆಯ ಉಣ್ಣೆಯ ಬಟ್ಟೆಗಳನ್ನು ಜೊತೆಗೆ ತರಬೇಕಾದುದು ಕಡ್ಡಾಯ.