Search
 • Follow NativePlanet
Share
ಮುಖಪುಟ » ಸ್ಥಳಗಳು» ಮುದುಮಲೈ

ಮುದುಮಲೈ - ಪ್ರಕೃತಿಯ ಅದ್ಭುತ ತಾಣ

18

ಮುದುಮಲೈ ವನ್ಯಜೀವಿಧಾಮವು ಮೂರು ರಾಜ್ಯಗಳ ಗಡಿಯು ಸಂಧಿಸುವ ತಾಣದಲ್ಲಿ ನೆಲೆಗೊಂಡಿರುವ ನೀಲಗಿರಿ ಪರ್ವತಳ ದಟ್ಟ ಕಾಡುಗಳಲ್ಲಿ ನೆಲೆಸಿದೆ. ಮುದುಮಲೈ ವನ್ಯಜೀವಿಧಾಮವು ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಶ್ರೀಮಂತ ವನ್ಯ ಸಂಪತ್ತನ್ನು ಹೊಂದಿರುವ ವನ್ಯಧಾಮವಾಗಿ ಗುರುತಿಸಿಕೊಂಡಿದೆ. 1940 ರಲ್ಲಿ ಸ್ಥಾಪನೆಗೊಂಡ ಈ ವನ್ಯಧಾಮವು ಅತ್ಯಂತ ನಾಜೂಕಾಗಿ ಮತ್ತು ವ್ಯವಸ್ಥಿತವಾಗಿ ಕಾಡು ಪ್ರಾಣಿಗಳನ್ನು ಸಂರಕ್ಷಿಸುತ್ತಿರುವ ವನ್ಯಧಾಮವಾಗಿ ದೇಶದಲ್ಲಿಯೇ ಹೆಸರುವಾಸಿಯಾಗಿದೆ. ಈ ವನ್ಯಧಾಮವು ದಕ್ಷಿಣ ಭಾರತದ ಪ್ರಸಿದ್ಧ ಆಕರ್ಷಣೆಯಾಗಿದ್ದು, ಇಲ್ಲಿಗೆ ಭೇಟಿಕೊಡುವವರಿಗೆ ತನ್ನಲ್ಲಿರುವ ಶ್ರೀಮಂತ ಪ್ರಾಣಿ ಮತ್ತು ಸಸ್ಯ ಸಂಪತ್ತಿನ ಪರಿಚಯವನ್ನು ಮಾಡಿಕೊಡುತ್ತದೆ.

ಕಾಡಿಗೆ ಸ್ವಾಗತ ಸುಸ್ವಾಗತ!

ಅರಣ್ಯ ಇಲಾಖೆಯು ಮುದುಮಲೈ ವನ್ಯಧಾಮದಲ್ಲಿ ಜಂಗಲ್ ಸಫಾರಿಯನ್ನು ಆಯೋಜಿಸುತ್ತಾರೆ. ಇದು ನಿಜಕ್ಕು ಬೆಲೆಕಟ್ಟಲಾಗದಂತಹ ಸಫಾರಿಯಾಗಿರುತ್ತದೆ. ಈ ಸಫಾರಿಯಲ್ಲಿ ನೀವು ಮುದುಮಲೈನ ವಿಪುಲ ವನಸಂಪತ್ತಿನ ಪರಿಚಯವನ್ನು ಪಡೆದುಕೊಳ್ಳುತ್ತೀರಷ್ಟೇ ಅಲ್ಲದೆ ನಿಮ್ಮ ಜೀವನದಲ್ಲಿ ಎಂದೆಂದಿಗು ಮರೆಯದ ಅನುಭವವನ್ನು ನಿಮ್ಮದಾಗಿಸಿಕೊಳ್ಳುತ್ತೀರಿ.

ಈ ವನ್ಯಧಾಮದಲ್ಲಿ ಜೌಗು ಪ್ರದೇಶದ ಎಲೆ ಉದುರುವ ದಟ್ಟ ಕಾಡುಗಳನ್ನು, ದಕ್ಷಿಣದ ಉಷ್ಣವಲಯದ ಮುಳ್ಳು ಕಾಡುಗಳನ್ನು ಮತ್ತು ಉಷ್ಣವಲಯದ ದಟ್ಟವಾದ ಒಣ ಕಾಡುಗಳನ್ನು ಕಾಣಬಹುದು. ಪಕ್ಷಿ ವೀಕ್ಷಕರಿಗೆ ಇಲ್ಲಿ ನೂರಾರು ಪಕ್ಷಿಗಳನ್ನು ನೋಡುವ ಅವಕಾಶ ದೊರೆಯುತ್ತದೆ. ಇದರ ಜೊತೆಗೆ ಇಲ್ಲಿ ಉಡಗಳು, ಕತ್ತೆ ಕಿರುಬಗಳು, ನರಿಗಳು, ಚಿರತೆ ಮತ್ತು ಜಿಂಕೆಗಳು ಶಾಂತಿಯುತ ಜೀವನ ನಡೆಸುತ್ತಿರುವುದನ್ನು ನಾವು ಇಲ್ಲಿ ಕಾಣಬಹುದು.

ಮುದುಮಲೈ ಹುಲಿಗಳ ಆವಾಸ ಸ್ಥಾನವಾಗಿರುವುದಷ್ಟೇ ಅಲ್ಲದೆ, ಭಾರತದಲ್ಲಿಯೇ ಅತಿ ಹೆಚ್ಚು ಹುಲಿಗಳ ಸಾಂದ್ರತೆಯನ್ನು ಹೊಂದಿರುವ ವನ್ಯಧಾಮವಾಗಿ ಗುರುತಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿ ಏಳು ನೂರು ಭಾರತೀಯ ಆನೆಗಳು ಓಡಾಡಿಕೊಂಡಿವೆ. ತನ್ನಲ್ಲಿರುವ ಅಳಿವಿನಂಚಿನಲ್ಲಿರುವ ಪ್ರಾಣಿ ಮತ್ತು ಪಕ್ಷಿ ಪ್ರಭೇದಗಳ ಸಲುವಾಗಿ ಮುದುಮಲೈ ದೇಶದ ಜೈವಿಕ - ವೈವಿಧ್ಯದ ಉತ್ತಮ ಸಂರಕ್ಷಣಾ ತಾಣವಾಗಿದೆ. ಈ ವನ್ಯಧಾಮದಲ್ಲಿ ಪ್ರಾಣಿಗಳಷ್ಟೇ ಅಲ್ಲದೆ ಕಾಡಿನಲ್ಲಿ ಬೆಳೆಯುವ ಕಾಡು ಭತ್ತ, ಅರಿಶಿಣ, ಕಾಡು ಶುಂಠಿ, ದಾಲ್ಚಿನ್ನಿ, ಮಾವು, ಸೀಬೆಹಣ್ಣು ಮತ್ತು  ಮೆಣಸುಗಳು ಪ್ರಾಕೃತಿಕವಾಗಿ ಬೆಳೆಯುತ್ತವೆ.

ಈ ಸಸ್ಯ ಸಂಪತ್ತು ಸಸ್ಯಾಹಾರಿ ಪ್ರಾಣಿಗಳಿಗೆ ಆಹಾರವನ್ನು ಒದಗಿಸುವ ಕೆಲಸವನ್ನು ನಿರ್ವಹಿಸುತ್ತವೆ.  ಆ ಕಾರಣದಿಂದಾಗಿ ಈ ಧಾಮವು ಪ್ರಾಕೃತಿಕವಾಗಿ ಬೆಳೆಯುವ ಸಸ್ಯ ತಳಿಗಳನ್ನು ಸಂರಕ್ಷಿಸುವ ತಾಣವಾಗಿ ಸಹ ಗುರುತಿಸಿಕೊಂಡಿದೆ. ಇದರ ಜೊತೆಗೆ ಇಲ್ಲಿ  ಬಿದಿರಿನ ಎರಡು ಜಾತಿಯ ಬಗೆಗಳು (ಬಂಬುಸ ಮತ್ತು ಡೆಂಡ್ರೊಕಲಮಸ್ ಸ್ಟ್ರಿಕ್ಟಸ್) ಬೆಳೆಯುತ್ತವೆ. ಇವು ಆನೆ ಮತ್ತು ಕಾಡು ಕೋಣಗಳಿಗೆ ಆಹಾರವನ್ನು ಒದಗಿಸುತ್ತವೆ.

ಮುದುಮಲೈ ಸಮೀಪದಲ್ಲಿ ಹಲವಾರು ಆಕರ್ಷಣೆಗಳು ಇವೆ. ಅವುಗಳಲ್ಲಿ ಪೈಕರ ಕೆರೆ, ಕಲ್ಲಟ್ಟಿ ಜಲಪಾತ, ತೆಪ್ಪಕಾಡು ಆನೆ ಶಿಬಿರ, ಮೋಯರ್ ನದಿ ಮತ್ತು ಪ್ರಾಣಿಗಳನ್ನು ನೋಡುವ ಹಾಗು ಒಡನಾಡ ಬಹುದಾದ ಇನ್ನಿತರ ಅದ್ಭುತ ತಾಣಗಳು ಇವೆ. ಇಲ್ಲಿನ ಅದ್ಭುತವಾದ ವಾತಾವರನ ಮತ್ತು ಉತ್ತಮ ಸಂಪರ್ಕ ವ್ಯವಸ್ಥೆಯು ಇದನ್ನು ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ಮಾಡಿವೆ. ಮುದುಮಲೈ ತನ್ನ ಅನುಪಮ ಸೌಂದರ್ಯ, ಉತ್ತಮ ಸ್ಥಳಗಳು ಮತ್ತು ಚಾರಣಕ್ಕೆ ಅವಕಾಶ ನೀಡುವ ಪ್ರದೇಶಗಳಿಂದ ಕೂಡಿ ಕುಟುಂಬ ಸಭ್ಯರಿಗೆ, ಸಾಹಸಿಗಳಿಗೆ ಮತ್ತು ಸುಮ್ಮನೆ ಸುತ್ತಾಡುವವರಿಗೆ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಮುದುಮಲೈ ಪ್ರಸಿದ್ಧವಾಗಿದೆ

ಮುದುಮಲೈ ಹವಾಮಾನ

ಮುದುಮಲೈ
22oC / 72oF
 • Partly cloudy
 • Wind: ESE 6 km/h

ಉತ್ತಮ ಸಮಯ ಮುದುಮಲೈ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಮುದುಮಲೈ

 • ರಸ್ತೆಯ ಮೂಲಕ
  ಮುದುಮಲೈ ವನ್ಯಜೀವಿಧಾಮಕ್ಕೆ ಸಮೀಪದಲ್ಲಿ ನೆಲೆಗೊಂಡಿರುವ ಪಟ್ಟಣವೆಂದರೆ ಅದು ಗುಡಲುರ್ ಆಗಿದೆ. ಇದು ಉದಗಮಂಡಲಂ- ಮೈಸೂರು ಹೆದ್ದಾರಿಯ ಗುಂಟ 30 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಮುದುಮಲೈ ವನ್ಯಜೀವಿಧಾಮಕ್ಕೆ ಮೈಸೂರು, ಉದಗಮಂಡಲಂ ಮತ್ತು ಇನ್ನಿತರ ಅಕ್ಕ ಪಕ್ಕದ ನಗರಗಳಿಂದ ಬಸ್ಸುಗಳ ಸೌಕರ್ಯವಿದೆ. ಇಲ್ಲಿಗೆ ತಲುಪುವ ಹಾದಿಯಲ್ಲಿ ಹಲವಾರು ಹೇರ್ ಪಿನ್ ತಿರುವುಗಳು ಇರುವುದರಿಂದ ಸ್ವತಃ ಚಾಲನೆ ಮಾಡಿಕೊಂಡು ಬರುವವರು ಸ್ವಲ್ಪ ಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬರುವುದು ಉತ್ತಮ.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಮುದುಮಲೈಗೆ ಸಮೀಪದ ರೈಲು ನಿಲ್ದಾಣವೆಂದರೆ ನೀಲಗಿರಿ ಮೌಂಟೆನ್ ಸರ್ವಿಸ್‍ನಲ್ಲಿ ಬರುವ ಉದಗಮಂಡಲಂ ನಿಲ್ದಾಣವಾಗಿದೆ. ಇದು ಮುದುಮಲೈನಿಂದ 64 ಕಿ.ಮೀ ದೂರದಲ್ಲಿದೆ. ಉದಗಮಂಡಲಂ ನಿಲ್ದಾಣದಿಂದ ಮುದುಮಲೈಗೆ ಟ್ಯಾಕ್ಸಿಗಳಲ್ಲಿ ತಲುಪಬಹುದು. ಅವುಗಳ ದರವು 1.500 ರೂಪಾಯಿಗಳಾಗಿರುತ್ತವೆ. ಇದರ ಜೊತೆಗೆ ಕೊಯಮತ್ತೂರು ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ಬ್ರಾಡ್‍ಗೇಜ್ ನಿಲ್ದಾಣವಾಗಿದೆ. ಈ ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ಮುದುಮಲೈನಿಂದ 82 ಕಿ.ಮೀ ದೂರದಲ್ಲಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಪೀಲಮೆಡುನಲ್ಲಿರುವ ಕೊಯಮತ್ತೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಮುದುಮಲೈಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ಇದು ಮುದುಮಲೈನಿಂದ 160 ಕಿ.ಮೀ ದೂರದಲ್ಲಿದೆ. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‍ಗಳಂತಹ ಪ್ರಮುಖ ನಗರಗಳಿಂದ ವಿಮಾನಗಳು ಇಲ್ಲಿಗೆ ಬರುತ್ತಿರುತ್ತವೆ. ಕೊಯಮತ್ತೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮುದುಮಲೈಗೆ ಟ್ಯಾಕ್ಸಿಯ ಮೂಲಕ ತಲುಪಬಹುದು. ಇದರ ದರವು 3.500 ರೂಪಾಯಿ ಹಾಸು ಪಾಸು ಇರುತ್ತದೆ.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Fri
Return On
23 Mar,Sat
 • Today
  Mudumalai
  22 OC
  72 OF
  UV Index: 6
  Partly cloudy
 • Tomorrow
  Mudumalai
  18 OC
  65 OF
  UV Index: 6
  Partly cloudy
 • Day After
  Mudumalai
  18 OC
  65 OF
  UV Index: 6
  Partly cloudy