Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾರ್ಗೊ » ಆಕರ್ಷಣೆಗಳು » ಹೋಲಿ ಸ್ಪಿರಿಟ್ ಚರ್ಚ್

ಹೋಲಿ ಸ್ಪಿರಿಟ್ ಚರ್ಚ್, ಮಾರ್ಗೊ

1

ಮಾರ್ಗೊನಲ್ಲಿರುವ ಹೋಲಿ ಸ್ಪಿರಿಟ್ ಚರ್ಚ್ ನ್ನು ಮೊದಲು 1564 ರಲ್ಲಿ ಕಟ್ಟಲಾಗಿತ್ತು. ನಂತರ 1571 ರಲ್ಲಿ ಮುಸ್ಲಿಮ್ ಸೈನ್ಯದೊಂದಿಗಿನ ಯುದ್ಧದ ಪರಿಣಾಮವಾಗಿ ಇದು ನಾಶ ಹೊಂದಿತು. ತದನಂತರ ಪರಿಸ್ಥಿತಿಯು ತಿಳಿಗೊಂಡನಂತರ ಹಣವನ್ನು ಸಂಗ್ರಹಿಸಿ 1645 ರಲ್ಲಿ ಇದನ್ನು ಮತ್ತೆ ನಿರ್ಮಿಸಲಾಯಿತು. ಪ್ರತಿ ಮೇ ತಿಂಗಳಿನ ಕೊನೆಯಲ್ಲಿ ಇಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ ಮತ್ತು ಈ ಉತ್ಸವವು ಇಡೀ ಮಾರ್ಗೊದಲ್ಲೆ ಜನಪ್ರಿಯವಾದುದಾಗಿದೆ. ಮಳೆಗಾಲದ ಆರಂಭದಲ್ಲಿ ನಡೆಯುವ ಈ ಉತ್ಸವದಲ್ಲಿ ಗೋವಾದ ಬಹುತೇಕ ಜನರು ಭಾಗವಹಿಸುತ್ತಾರೆ. ಈ ಉತ್ಸವವು ಸಾಮಾನ್ಯವಾಗಿ 5 ರಿಂದ 6 ದಿನಗಳ ವರೆಗೂ ನಡೆಯುತ್ತದೆ.

ಬರೋಕ್ ವಾಸ್ತುಶಿಲ್ಪದಿಂದ ಪ್ರಭಾವಿತವಾದ ಈ ಚರ್ಚ್ ಎತ್ತರವಾದ ಗೋಪುರಗಳನ್ನು ಹೊಂದಿದ್ದು, ಶುಭ್ರ ಶ್ವೇತ ವರ್ಣದ ಮುಂಭಾಗವು ಕ್ರಿಸ್ಟಲ್ ಗಳ ಅದ್ಭುತ ವಿನ್ಯಾಸದಿಂದ ಸಿಂಗರಿಸಲ್ಪಟ್ಟಿದೆ. ಅಲಂಕೃತ ಅಲ್ಟರ್ ಹಾಗು ಡೋಮ್ ಇರುವುದನ್ನು ಗಮನಿಸಬಹುದು. ಈ ಚರ್ಚ್ ಸುಮಾರು 3000 ಕ್ರಿಶ್ಚಿಯನ್ ಕುಟುಂಬಗಳಿಗೆ ಮನೆಯಾಗಿದೆ.ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಈ ಚರ್ಚ್ ಗೆ ವಾರದ ಏಳೂ ದಿನಗಳಲ್ಲೂ ಭೇಟಿ ನೀಡಬಹುದು. ಇಲ್ಲಿಗೆ ತಲುಪಲು ಪಣಜಿ ಮತ್ತು ವಾಸ್ಕೊದಿಂದ ಸಾಕಷ್ಟು ಕ್ಯಾಬ್ ಹಾಗು ಬಸ್ಸುಗಳು ದೊರೆಯುತ್ತವೆ. ಅಥವಾ ನೀವೇನಾದರು ಬಾಗಾ, ಕಲಂಗುಟ್ ಅಥವಾ ಮಾಪುಸಾ ಪ್ರದೇಶಗಳಲ್ಲಿದ್ದರೆ, ಅಲ್ಲಿಂದ ಬೈಕ್ ಗಳ ಮುಖಾಂತರವು ಸುಲಭವಾಗಿ ತಲುಪಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu

Near by City