Search
  • Follow NativePlanet
Share
ಮುಖಪುಟ » ಸ್ಥಳಗಳು» ಮನಿಕರನ್

ಮನಿಕರನ್ - ಧರ್ಮಶೃದ್ಧೆಯುಳ್ಳವರಿಗೊಂದು ತಾಣ

17

ಮನಿಕರನ್ ಎಂಬುದು ಹಿಮಾಚಲ್ ಪ್ರದೇಶದಲ್ಲಿರುವ ಕುಲ್ಲುವಿನಿಂದ 45 ಕಿ.ಮೀ ದೂರದಲ್ಲಿರುವ ಸಿಖ್ಖರ ಮತ್ತು ಹಿಂದೂಗಳ ಪವಿತ್ರ ಯಾತ್ರಾಸ್ಥಳವಾಗಿದೆ. ಇದು ಸಮುದ್ರ ಮಟ್ಟದಿಂದ 1737 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ’ಮನಿಕರನ್’ ಎಂದರೆ ಆಭರಣ ಎಂದರ್ಥ. ದಂತಕಥೆಗಳ ಪ್ರಕಾರ, ಪರಮಶಿವನ ಸತಿಯಾದ ಪಾರ್ವತಿ ದೇವಿಯು ಇಲ್ಲಿನ ನೀರಿನ ತಾಣದಲ್ಲಿ ತನ್ನ ಅಮೂಲ್ಯವಾದ ಆಭರಣವನ್ನು ಕಳೆದುಕೊಂಡಳಂತೆ. ಆಗ ಪಾರ್ವತಿ ದೇವಿಯು ಈಶ್ವರನನ್ನು ಆ ಆಭರಣ ಹುಡುಕಿಕೊಡುವಂತೆ ಕೇಳಿದಾಗ, ಶಿವನು ಅದನ್ನು ಹುಡುಕುವಂತೆ ತನ್ನ ಅನುಚರರಿಗೆ ಹೇಳಿದನಂತೆ. ಆದರೆ ಅವರು ಅದನ್ನು ಹುಡುಕಲು ವಿಫಲರಾದಾಗ ಕೋಪಗೊಂಡ ಶಿವನು ತನ್ನ ಮೂರನೆಯ ಕಣ್ಣನ್ನು ತೆಗೆದನಂತೆ. ಇದರಿಂದ ಭೂಮಿಯ ಮೇಲೆ ಅಲ್ಲೋಲ ಕಲ್ಲೋಲವಾಯಿತಂತೆ. ಇದರಿಂದ ಭೂಮಿಯಲ್ಲಿ ಹಲವಾರು ಅಮೂಲ್ಯ ರತ್ನ ಮತ್ತು ಹರಳುಗಳು ಉತ್ಪತಿಯಾದವಂತೆ.

ಶ್ರೀ ಗುರುನಾನಕ್ ದೇವಿ ಗುರುದ್ವಾರವು ಮನಿಕರನ್‍ನಲ್ಲಿರುವ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿನ ಜನರ ನಂಬಿಕೆಯಂತೆ, ಸಿಖ್ ಧರ್ಮದ ಸ್ಥಾಪಕರಾದ ಗುರುನಾನಕರು ತಮ್ಮ ಐದು ಜನ ಅನುಯಾಯಿಗಳೊಂದಿಗೆ ಇಲ್ಲಿಗೆ ಆಗಮಿಸಿದ್ದರಂತೆ.

ಗುರುದ್ವಾರದ ಆವರಣದಲ್ಲಿರುವ ಝರಿಯು ಇಲ್ಲಿಗೆ ಭೇಟಿಕೊಡುವ ಪ್ರವಾಸಿಗರನ್ನು ಆಕರ್ಷಿಸುತ್ತಿರುತ್ತದೆ. ಇಲ್ಲಿರುವ ಶಿವನ ದೇವಾಲಯವು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿದೆ. 1905 ರಲ್ಲಿ ಈ ಪ್ರಾಂತ್ಯದಲ್ಲಿ ಸಂಭವಿಸಿದ 8.0 ಪ್ರಮಾಣದ ಭೀಕರ ಭೂಕಂಪದ ಕಾರಣದಿಂದಾಗಿ ಈ ದೇವಾಲಯ ಸ್ವಲ್ಪ ಮಟ್ಟಿಗೆ ವಾಲಿದೆ. ಇದು ಈ ದೇವಾಲಯದ ಅಸಾಮಾನ್ಯ ಲಕ್ಷಣವಾಗಿದೆ.

ಮನಿಕರನ್ ಶ್ರೀ ರಾಮಚಂದ್ರ ದೇವಾಲಯ ಮತ್ತು ಕುಲಂತ್ ಪೀಠಗಳ ಕಾರಣದಿಂದಾಗಿ ಹಿಂದೂ ಭಕ್ತಾದಿಗಳ ವಲಯದಲ್ಲಿ ಭಾರೀ ಪ್ರಸಿದ್ಧಿಯನ್ನು ಪಡೆದಿದೆ. ಹರಿಂಧರ್ ಪರ್ವತ ಮತ್ತು ಪಾರ್ವತಿ ನದಿ, ಶೋಜ, ಮಲಾನಾ ಮತ್ತು ಖಿರ್ ಗಂಗದಲ್ಲಿ ಪ್ರವಾಸಿಗರು ಚಾರಣವನ್ನು ಕೈಗೊಳ್ಳಬಹುದು. ಈ ಎಲ್ಲ ಸ್ಥಳಗಳು ಇಲ್ಲಿರುವ ಇನ್ನಿತರ ಆಕರ್ಷಣೆಗಳಲ್ಲಿ ಸೇರಿವೆ.

ಮನಿಕರನ್‍ಗೆ ಬರಬೇಕೆನ್ನುವ ಪ್ರವಾಸಿಗರು ವಿಮಾನ, ರೈಲು ಮತ್ತು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಬಂದು ಸೇರಬಹುದು. ಏಪ್ರಿಲ್ ನಿಂದ ಜೂನ್‍ ನಡುವಿನ ಅವಧಿಯು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮ ಅವಧಿಯಾಗಿದೆ.

ಮನಿಕರನ್ ಪ್ರಸಿದ್ಧವಾಗಿದೆ

ಮನಿಕರನ್ ಹವಾಮಾನ

ಉತ್ತಮ ಸಮಯ ಮನಿಕರನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮನಿಕರನ್

  • ರಸ್ತೆಯ ಮೂಲಕ
    ಪ್ರವಾಸಿಗರು ಮನಿಕರನ್‍ಗೆ ಹೋಗಬೇಕೆಂದು ಬಯಸಿದರೆ ಬಸ್ಸಿನ ಮೂಲಕವು ಸಹ ಹೋಗಬಹುದು. ಆದರೆ ಮನಿಕರನ್‍ಗೆ ನೇರ ಬಸ್ ಸಂಪರ್ಕವಿಲ್ಲ. ಅದಕ್ಕಾಗಿ ಪ್ರವಾಸಿಗರು ಮೊದಲು ಕುಲ್ಲು ಅಥವಾ ಮನಾಲಿಗೆ ಬಸ್ಸಿನಲ್ಲಿ ತಲುಪಬೇಕು. ಅಲ್ಲಿಂದ ಮನಿಕರನ್‍ಗೆ ಬಸ್ ಸೌಕರ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮನಿಕರನ್‍ಗೆ ಸಮೀಪದ ರೈಲು ನಿಲ್ದಾಣವು ಇಲ್ಲಿಂದ 150 ಕಿ.ಮೀ ದೂರದಲ್ಲಿರುವ ಪಠಾಣ್ ಕೋಟ್‍ನಲ್ಲಿದೆ. ಪ್ರವಾಸಿಗರು ಇಲ್ಲಿಗೆ ಸುಮಾರು 310 ಕಿ.ಮೀ ದೂರದಲ್ಲಿರುವ ಚಂಢೀಗಢ್‍ನ ರೈಲು ನಿಲ್ದಾಣದಿಂದ ಸಹ ಬರಬಹುದು. ಈ ರೈಲು ನಿಲ್ದಾಣವು ದೆಹಲಿ ಸೇರಿದಂತೆ ದೇಶದ ಇನ್ನಿತರ ಪ್ರಮುಖ ರೈಲು ನಿಲ್ದಾಣಗಳ ಜೊತೆಗೆ ಉತ್ತಮವಾದ ರೈಲು ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಟ್ಯಾಕ್ಸಿ ಮತ್ತು ಕ್ಯಾಬ್‍ಗಳಲ್ಲಿ ಮನಿಕರನ್‍ಗೆ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಭುಂತರ್ ವಿಮಾನ ನಿಲ್ದಾಣವು ಮನಿಕರನ್‍ಗೆ ಇರುವ ಅತ್ಯಂತ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಮನಿಕರನ್‍ನಿಂದ ಅರ್ಧ ಗಂಟೆಯ ಪ್ರಯಾಣದಷ್ಟು ದೂರದಲ್ಲಿದೆ. ಈ ವಿಮಾನ ನಿಲ್ದಾಣವು ದೆಹಲಿ, ಪಠಾಣ್‍ಕೋಟ್, ಚಂಢೀಗಢ್, ಧರ್ಮಶಾಲ, ಶಿಮ್ಲಾದಂತಹ ಇನ್ನಿತರ ಪ್ರಮುಖ ನಗರಗಳೊಂದಿಗೆ ಉತ್ತಮ ವಿಮಾನ ಸಂಪರ್ಕವನ್ನು ಹೊಂದಿದೆ. ಈ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮತ್ತು ಕ್ಯಾಬ್‍ಗಳು ನೀವು ಮನಿಕರನ್‍ ತಲುಪಲು ದೊರೆಯುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu