Search
  • Follow NativePlanet
Share
ಮುಖಪುಟ » ಸ್ಥಳಗಳು» ಮಂಗಳೂರು

ಮಂಗಳೂರು: ಕರ್ನಾಟಕದ ಹೆಬ್ಬಾಗಿಲು

69

ಮಂಗಳೂರು ನಗರಿಯನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಸಂಬೋಧಿಸಲಾಗಿದೆ. ಪಶ್ಚಿಮ ಘಟ್ಟದ ಸುಂದರ ದಟ್ಟಾರಣ್ಯ ಹಾಗೂ ಆಕರ್ಷಕ ನೀಲಿ ನೀರಿನ ಅರೇಬಿಯನ್‌ ಸಮುದ್ರ ಎರಡು ಪ್ರಕೃತಿದತ್ತ ಸೌಂದರ್ಯವನ್ನು ಮೈವೆತ್ತಿ ನಿಂತಿದೆ. ಇವೆರಡೂ ಈ ನಗರಿಗೆ ಭೂಷಣಪ್ರಾಯವಾಗಿ ಲಭಿಸಿವೆ. ಇದರಿಂದಲೇ ಮಂಗಳೂರು ನೋಡುಗರ ಕಣ್ಮನ ಸೆಳೆಯುವ ಆಕರ್ಷಕ ತಾಣಗಳನ್ನು ಒಳಗೊಂಡ ಪ್ರದೇಶವಾಗಿ ಜನಪ್ರಿಯವಾಗಿದೆ.

ದೇವಿ ಮಂಗಲದೇವಿಯಿಂದಾಗಿ ಈ ಪ್ರದೇಶಕ್ಕೆ ಮಂಗಳೂರು ಎಂಬ ಹೆಸರು ಬಂದಿದೆ. ಇಂದು ಅತ್ಯಂತ ಪ್ರಸಿದ್ಧ ತಾಣವಾಗಿ ಮಾತ್ರವಲ್ಲ, ಸದಾ ಕಾರ್ಯನಿರತ ಬಂದರನ್ನು ಹೊಂದಿದ ಕಡಲ ತೀರವಾಗಿ ಜನಪ್ರಿಯವಾಗಿದೆ. ಈ ನಗರದ ಪ್ರಸ್ತಾಪ ಮೊದಲು ಆಗಿದ್ದು 14 ನೇ ಶತಮಾನದಲ್ಲಿ. ಪರ್ಶಿಯನ್‌ ಗಲ್ಫ್‌ ರಾಜರ ಜತೆ ಸ್ಥಳೀಯರು ವಾಣಿಜ್ಯ ವ್ಯವಹಾರವನ್ನು ಈ ಸಮಯದಲ್ಲಿ ಆರಂಭಿಸಿದರು. ತದ ನಂತರದ ದಿನಗಳಲ್ಲಿ ಇದು ಒಂದು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಾ ಸಾಗಿ ಇಂದು ಸಾಕಷ್ಟು ಎತ್ತರಕ್ಕೆ ಏರಿದೆ.

ಮಂಗಳೂರಿನ ಆಡಳಿತವನ್ನು ಹಲವಾರು ರಾಜರು, ಅಧಿಕಾರಶಾಹಿಗಳು ಆಳಿದ್ದಾರೆ. ಸಾಕಷ್ಟು ಜನರ ಅಧಿಕಾರದ ಅಡಿ ಇದು ಬೆಳೆದಿದೆ. ಇವರಲ್ಲಿ ಪೋರ್ಚುಗೀಸರು, ಬ್ರಿಟೀಷರು, ಮೈಸೂರು ಅರಸರಾದ ಹೈದರ್‌ ಅಲಿ, ಟಿಪ್ಪು ಸುಲ್ತಾನ್‌ ಮತ್ತಿತರರು ಈ ಪ್ರದೇಶವನ್ನು ಒಂದು ಸುಸ್ಥಿರ ಬಂದರು ನಗರಿಯನ್ನಾಗಿ ರೂಪಿಸಿದ್ದಾರೆ. ಮಂಗಳೂರನ್ನು ಆಳಿದ ಪ್ರತಿಯೊಬ್ಬರೂ ತಮ್ಮದೇ ಆದ ಛಾಪನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ಇದರಿಂದಾಗಿಯೇ ಇಂದು ಇಲ್ಲಿ ಬಹು ಸಂಸ್ಕೃತಿಯ ಬಳಕೆಯನ್ನು ಕಾಣಬಹುದು. ಅದೇನೇ ಇರಲಿ, ಈ ನಗರಿಯು ಒಂದು ಅತ್ಯುತ್ತಮ ಬಂದರಾಗಿ ಗಳಿಸಿದ ಹೆಸರನ್ನು ಇನ್ನೂ ಉಳಿಸಿಕೊಂಡಿದೆ. ದೇಶದ ಪ್ರಮುಖ ಬಂದರುಗಳಲ್ಲಿ ಹಿಂದೆ, ಇಂದು ಕೂಡ ಮಂಗಳೂರಿಗೆ ವಿಶೇಷ ಪ್ರಾಧಾನ್ಯ ಇದ್ದೇ ಇದೆ. ಭಾರತೀಯ ಕಾಫಿ ಹಾಗೂ ಗೇರುಬೀಜ ರಫ್ತಿನಲ್ಲಿ ಇದು ಹೆಸರುವಾಸಿ ಬಂದರು.

ನಿಸರ್ಗ ಪ್ರಿಯರ ನೆಚ್ಚಿನ ತಾಣ

ನೈಸರ್ಗಿಕ ಸೌಂದರ್ಯವನ್ನು ಮೈವೆತ್ತಿ ನಿಂತಿರುವ ಮಂಗಳೂರು ಈ ಕ್ಷೇತ್ರದಲ್ಲಿ ಇತರೆ ತಾಣಗಳನ್ನು ಹಿಂದಿಕ್ಕಿದೆ. ಗುರುಪುರ ಹಾಗೂ ನೇತ್ರಾವತಿ ಎಂಬ ಎರಡು ನದಿಯ ದಡದಲ್ಲಿರುವ ಈ ಊರು 132 ಚದರ್‌ ಕಿ.ಮೀ. ಹಿನ್ನೀರಿನ ಪ್ರದೇಶವನ್ನು ಹೊಂದಿದೆ. ಅರೇಬಿಯನ್‌ ಕಡಲ ತೀರವನ್ನು ಕೂಡ ಹೊಂದಿರುವ ನಗರವು ಸಾಕಷ್ಟು ಅತ್ಯಾಕರ್ಷಕ ತೀರಗಳನ್ನು ನೈಸರ್ಗಿಕವಾಗಿ ಹೊಂದಿದೆ. ಇಲ್ಲಿನ ದಟ್ಟಾರಣ್ಯ ಪ್ರದೇಶ ಹಾಗೂ ಸಾಂಪ್ರದಾಯಿಕ ಶೈಲಿಯ ಮನೆಗಳು ನೋಡುಗರ ಗಮನ ಸೆಳೆಯುತ್ತವೆ. ಹೆಂಚಿನ ಮನೆಗಳು ಹೆಚ್ಚಾಗಿ ಇಲ್ಲಿವೆ. ತಾರಸಿ ಮನೆಗಳೇ ಹೆಚ್ಚಾಗುತ್ತಿರುವಾಗ ಕಾಂಕ್ರಿಟ್‌ ಕಾಡಾಗದೇ ಮಂಗಳೂರು ಸರಿಸುಮಾರು ಆರು ಲಕ್ಷ ಹೆಂಚಿನ ಮನೆಗಳನ್ನು ಹೊಂದಿದೆ ಎನ್ನುವುದು ಇನ್ನೊಂದು ವಿಶೇಷ.

ಸಂಪ್ರದಾಯ ಹಾಗೂ ಸಂಸ್ಕೃತಿಯ ನಾಡು

ಮಂಗಳೂರು ನಿಜವಾಗಿಯೂ ವಿಭಿನ್ನ ಸಂಸ್ಕೃತಿ ಹಾಗೂ ಭಾಷಾವಾರು ಜನಸಂಖ್ಯೆಯನ್ನು ಹೊಂದಿದೆ. ಬಹು ಧರ್ಮಿಯ ವಾಸಸ್ಥಳವಾಗಿಯೂ ಜನಪ್ರಿಯವಾಗಿದೆ. ಅಲ್ಲದೇ ಇಲ್ಲಿ ತುಳು, ಕೊಂಕಣಿ, ಬ್ಯಾರಿ ಹಾಗೂ ಕನ್ನಡ ಈ ನಾಲ್ಕು ಭಾಷೆಯನ್ನು ಮಾತನಾಡುವವರು ಇದ್ದಾರೆ. ಈ ಮೂಲಕ ನಗರಿಯು ಬಹು ಸಂಸ್ಕೃತಿ ಹಾಗೂ ಸಂಪ್ರದಾಯದ ಮಿಶ್ರಣದವಾಗಿ ಕಂಗೊಳಿಸುತ್ತದೆ. ಇಲ್ಲಿನ ಅಪರೂಪದ ಹಾಗೂ ವಿಶಿಷ್ಟ ಅನೇಕ ಕಲೆಗಳಿವೆ. ಅಪರೂಪದ ಕಲಾ ಶ್ರೀಮಂತಿಕೆಯನ್ನು ಇದು ಹೊಂದಿದೆ. ಯಕ್ಷಗಾನ, ಕೃಷ್ಣ ಜನ್ಮಾಷ್ಠಮಿ ಹಾಗೂ ಕರದವಿ ವೇಶ ನೃತ್ಯ ಅತ್ಯಂತ ಪ್ರಮುಖವಾದವಾಗಿವೆ. ಇದಲ್ಲದೇ ಮಂಗಳೂರಿನಲ್ಲಿ ದಸರಾ ಆಚರಣೆ ಅದ್ದೂರಿಯಾಗಿರುತ್ತದೆ. ಇಲ್ಲಿನ ಆಚರಣೆಯ ಆಕರ್ಷಣೆ ವಿಶ್ವದೆಲ್ಲೆಡೆಯಿಂದ ಜನರನ್ನು ಸೆಳೆಯುತ್ತದೆ.

ನೋಡಲು, ನಡೆಯಲು ಸಾಕಷ್ಟು ಅವಕಾಶ

ನೈಸರ್ಗಿಕ ಸೌಂದರ್ಯದಿಂದ ಶ್ರೀಮಂತವಾಗಿರುವ ಮಂಗಳೂರಿನಲ್ಲಿ ನೋಡಲು, ಚಟುವಟಿಕೆಗಳನ್ನು ಮಾಡಲು ಸಾಕಷ್ಟು ಅವಕಾಶಗಳಿವೆ. ಇದೊಂದು ಪಾರಂಪರಿಕ ನಗರಿಯೂ ಆಗಿರುವುದರಿಂದ ಹಲವು ಆಕರ್ಷಣೆಗಳು ಗಮನ ಸೆಳೆಯುತ್ತವೆ. ಮಂಗಳಾದೇವಿ ದೇವಾಲಯ ಇಲ್ಲಿನ ಪ್ರಮುಖ ಧಾರ್ಮಿಕ ಆಕರ್ಷಣೆ ಕೇಂದ್ರ. ಸಾವಿರಾರು ಭಕ್ತರು ದೇಶದೆಲ್ಲೆಡೆಯಿಂದ ಬಂದು ದೇವಿಯ ಆಶೀರ್ವಾದ ಪಡೆದು ತೆರಳುತ್ತಾರೆ. ಇದಲ್ಲದೇ ಇಲ್ಲಿ ಅನೇಕ ದೇವಾಲಯ, ಚರ್ಚ್ ಹಾಗೂ ಮಸೀದಿಗಳು ಪ್ರದೇಶದ ಸರ್ವ ಧರ್ಮ ಧಾರ್ಮಿಕ ಪ್ರಾಮುಖ್ಯವನ್ನು ಹೆಚ್ಚಿಸಿವೆ. ಇದರಲ್ಲಿ ಕದ್ರಿ ಮಂಜುನಾಥ ದೇವಾಲಯ, ಸೇಂಟ್‌ ಅಲೋಶಿಸಿಯಸ್‌ ಚರ್ಚ್, ರೊಸಾರಿಯೋ ಕ್ಯಾಥೆಡ್ರಲ್‌ ಹಾಗೂ ಜಾಮಾ ಮಸೀದಿ ಇದರಲ್ಲಿ ಪ್ರಮುಖವಾದವು. ಚಿನ್ನದ ಬಣ್ಣದ ಮರಳು ಹಾಗೂ ಸೂರ್ಯನನ್ನು ಇಷ್ಟಪಡುವವರು ಸೋಮೇಶ್ವರ ಹಾಗೂ ತಣ್ಣೀರಬಾವಿ ಕಡಲ ತೀರದಲ್ಲಿ ಮೈಮರೆಯುತ್ತಾರೆ. ಇದು ಎಲ್ಲಾ ವಯೋಮಾನದವರನ್ನೂ ಆಕರ್ಷಿಸುವ ವಿಶಿಷ್ಟ ಗುಣ ಹೊಂದಿರುವ ನಗರಿ. ಅಪಾರ ಸಂಖ್ಯೆಯ ಪ್ರವಾಸಿಗರು ಇಲ್ಲಿ ಸದಾ ತಂಬಿರುತ್ತಾರೆ. ಸಾಕಷ್ಟು ಪ್ರಮುಖ ಹಾಗೂ ಜನಪ್ರಿಯ ತಾಣಗಳನ್ನು ಒಳಗೊಂಡು ಇದು ವಿಶೇಷ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಿದೆ.

ಮಂಗಳೂರು ಪ್ರಸಿದ್ಧವಾಗಿದೆ

ಮಂಗಳೂರು ಹವಾಮಾನ

ಉತ್ತಮ ಸಮಯ ಮಂಗಳೂರು

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮಂಗಳೂರು

  • ರಸ್ತೆಯ ಮೂಲಕ
    ಇದು ಪ್ರಮುಖ ಮೂರು ರಾಷ್ಟ್ರೀಯ ಹೆದ್ದಾರಿಯ ಸಂಪರ್ಕ ಹೊಂದಿದೆ. ರಾಷ್ಟ್ರೀಯ ಹೆದ್ದಾರಿ 13, 17 ಹಾಗೂ 48. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ಮಂಗಳೂರಿನಿಂದ ರಾಜ್ಯದ ನಾನಾ ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಾರ್ಯ ಮಾಡುತ್ತಿವೆ. ದಕ್ಷಿಣ ಕನ್ನಡ ಬಸ್‌ ಆಪರೇಟರ್ಸ್‌ ಅಸೋಸಿಯೇಷನ್‌ (ಡಿಕೆಬಿಒಎ) ಬಸ್‌ಗಳು ಕೂಡ ಇಲ್ಲಿ ಲಭ್ಯವಿರುತ್ತವೆ. ಬಿಳಿ ಬಣ್ಣದ ಟ್ಯಾಕ್ಸಿ ಹಾಗೂ ಆಟೊ ರಿಕ್ಷಾಗಳು ಸ್ಥಳೀಯ ಪ್ರಮುಖ ಸಾರಿಗೆ ಮಾಧ್ಯಮಗಳಾಗಿದ್ದು, ಸುಲಭವಾಗಿ ಪ್ರವಾಸಿಗರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಂಗಳೂರು ಉತ್ತಮ ರೈಲು ನಿಲ್ದಾಣ ಹೊಂದಿದೆ. ಇಲ್ಲಿಯೇ ಎರಡು ಪ್ರಮುಖ ನಿಲ್ದಾಣಗಳಿವೆ. ಇಲ್ಲಿಂದ ಬೆಂಗಳೂರು, ಚೆನ್ನೈ, ಮುಂಬಯಿ, ಹಾಸನ ಸೇರಿದಂತೆ ಹಲವು ಪ್ರಮುಖ ತಾಣಕ್ಕೆ ಸಂಪರ್ಕವಿದೆ. ಇದು ಬ್ರಾಡ್‌ಗೇಜ್‌ ಹಾಗೂ ಮೀಟರ್‌ಗೇಜ್‌ ರೈಲು ಹಳಿಗಳನ್ನು ಒಳಗೊಂಡಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಂಗಳೂರು ಖುದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿದೆ. ರಾಷ್ಟ್ರದ ನಾನಾ ರಾಜ್ಯಗಳಿಂದ ಹಾಗೂ ಹೊರ ರಾಷ್ಟ್ರದ ಕೆಲ ಭಾಗದಿಂದಲೂ ನೇರ ಸಂಪರ್ಕ ಹೊಂದಿದೆ. ಇಲ್ಲಿನ ಬಜ್ಪೆ ಬಳಿ ವಿಮಾನ ನಿಲ್ದಾಣ ಇದೆ. ಮಂಗಳೂರಿನಿಂದ 20 ಕಿ.ಮೀ. ದೂರದಲ್ಲಿದೆ. ಸ್ಪೈಸ್‌ ಜೆಟ್‌, ಏರ್‌ ಇಂಡಿಯಾ ವಿಮಾನಗಳು ಇಲ್ಲಿಗೆ ಆಗಮಿಸುತ್ತವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri