Search
  • Follow NativePlanet
Share
ಮುಖಪುಟ » ಸ್ಥಳಗಳು » ಮಾಂಡು » ಹವಾಮಾನ

ಮಾಂಡು ಹವಾಮಾನ

ಮಾನವನ ನಿಯಂತ್ರಣವನ್ನು ಮೀರಿದ ಕೆಲವು ಅಂಶಗಳ ಆಧಾರದ ಮೇಲೆ ಒಂದು ಸ್ಥಳಕ್ಕೆ ಪ್ರಯಾಣ ಬೆಳೆಸುವ ಉತ್ತಮ ಕಾಲ ಯಾವುದೆಂದು ನಿರ್ಧರಿಸಲ್ಪಡುವುದು. ಮಾಂಡುವಿನಲ್ಲಿ  ಮಾರ್ಚ್ ಮತ್ತು ಜುಲೈ ತಿಂಗಳ ನಡುವಿನ ಕಾಲವು  ಅನುಕೂಲಕರ ವಾತಾವರಣವನ್ನು  ಹೊಂದಿದ್ದು, ಪ್ರಯಾಣಕ್ಕೆ ಉತ್ತಮ ಎನಿಸಿವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಬರುವ ಗಣೇಶ ಚತುರ್ಥಿಯ ಸಮಯದಲ್ಲೂ ಮಾಂಡುಗೆ ಬಹಳಷ್ಟು ಜನ ಪ್ರಯಾಣ ಬೆಳೆಸುವುದುಂಟು.

ಬೇಸಿಗೆಗಾಲ

ಸಮುದ್ರ ಮಟ್ಟದಿಂದ ಎರಡು ಸಾವಿರ ಅಡಿ ಎತ್ತರದಲ್ಲಿರುವದರಿಂದ ಮಾಂಡುವಿನಲ್ಲಿ ಬೇಸಿಗೆ ದುರ್ಬಲವಾಗಿರುತ್ತದೆ. ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಇದು ಸ್ವಲ್ಪ ತಂಪಾದ ಪ್ರದೇಶ.  ಮಾರ್ಚ್ ನಿಂದ ಜೂನ್ ವರೆಗೆ  ವಿಸ್ತರಿಸುವ ಬೇಸಿಗೆಯಲ್ಲಿ ತಾಪಮಾನ ಕನಿಷ್ಠ 20 ಡಿಗ್ರಿ ಸೆಲ್ಷಿಯಸ್ ನಿಂದ ಗರಿಷ್ಠ  35 ಡಿಗ್ರಿ ಸೆಲ್ಷಿಯಸ್ ಆಸುಪಾಸಿನಲ್ಲಿರುತ್ತದೆ.

ಮಳೆಗಾಲ

ಮಾಂಡು, ಒಂದೊಮ್ಮೆ ದೆಹಲಿಯ ಮೊಘಲ್ ಚಕ್ರವರ್ತಿಗಳ ಮಳೆಗಾಲದ ವಿಶ್ರಾಂತಿ ತಾಣವಾಗಿತ್ತು. ಇಲ್ಲಿನ ದೀರ್ಘ ಕಾಲದ ಮಳೆಗಾಲವು ನಗರದ ಸಂಪೂರ್ಣ ಚಿತ್ರಣವನ್ನೇ ಪುನಶ್ಚೇತನಗೊಳಿಸಿ ಬಿಡುವುದು. ಆಹ್ಲಾದಕರ ವಾತಾವರಣ, ಹಿತವಾಗಿ ಸುರಿಯುವ ತುಂತುರು ಮಳೆಯ ಸಿಂಚನ ಇವು ಭೇಟಿಗರಿಗೆ ನವೋಲ್ಲಾಸ ನೀಡುತ್ತವೆ.

ಚಳಿಗಾಲ

ಚಳಿಗಾಲದಲ್ಲಿ ತಂಪಾದ ಹವಾಮಾನವಿರುವ ಕಾರಣ ಮಾಂಡು ಪ್ರಯಾಣಕ್ಕೆ ಉತ್ತಮ ಸಮಯ ಎನ್ನಬಹುದು. ಚಳಿಗಾಲದಲ್ಲಿ ಕನಿಷ್ಠ ತಾಪಮಾನವು 7 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಚಳಿಗಾಲದ ರಜಾದಿನಗಳಲ್ಲಿ ಮಕ್ಕಳೊಟ್ಟಿಗೆ ಕುಟುಂಬದವರು ಇಲ್ಲಿಗೆ ಪ್ರವಾಸ ಕೈಗೊಳ್ಳಬಹುದು.