Search
  • Follow NativePlanet
Share
ಮುಖಪುಟ » ಸ್ಥಳಗಳು » ಮಂಡಿ » ಹವಾಮಾನ

ಮಂಡಿ ಹವಾಮಾನ

ಮಾರ್ಚ್ ತಿಂಗಳಿಂದ ಅಕ್ಟೋಬರ್‌ ನಡುವಿನ ಅವಧಿಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಪ್ರದೇಶದ ವಾತಾವರಣ ಆಧರಿಸಿ ಹೇಳುವುದಾದರೆ ಚಳಿಗಾಲ ಹಾಗೂ ಬೇಸಿಗೆಕಾಲ ಪ್ರವಾಸಕ್ಕೆ ಯೋಗ್ಯ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಜೂನ್‌): ಬೇಸಿಗೆ ಇಲ್ಲಿ ಏಪ್ರಿಲ್‌ನಲ್ಲಿ ಆರಂಭವಾಗಿ ಜೂನ್‌ನಲ್ಲಿ ಕೊನೆಯಾಗುತ್ತದೆ. ಇಲ್ಲಿ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಶಿಯಸ್‌ ಇದ್ದರೆ ಕನಿಷ್ಠ 18 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್‌): ಮಳೆಗಾಲ ಮಂಡಿಯಲ್ಲಿ ಆರಂಭವಾಗುವುದು ಜುಲೈನಲ್ಲಿ. ಇದು ಸೆಪ್ಟೆಂಬರ್‌ವರೆಗೂ ಮುಂದುವರಿಯುತ್ತದೆ. ಇಲ್ಲಿ ಸಾಮಾನ್ಯ ಮಳೆ ಈ ಸಂದರ್ಭದಲ್ಲಿ ಸುರಿಯುತ್ತದೆ.

ಚಳಿಗಾಲ

(ನವೆಂಬರ್‌ನಿಂದ ಫೆಬ್ರವರಿ): ನವೆಂಬರ್‌ನಿಂದ ಆರಂಭವಾಗುವ ಚಳಿಗಾಲ ಫೆಬ್ರವರಿಯಲ್ಲಿ ಮುಗಿಯುತ್ತದೆ. ಮಂಡಿ ಜಿಲ್ಲೆಯ ಚಳಿಗಾಲ ಹಿಮಾಚಲ ಪ್ರದೇಶದ ಇತರೆ ಪ್ರದೇಶದ ಮಾದರಿಯಲ್ಲಿ ಇರುವುದಿಲ್ಲ. ವಿಪರೀತ ಚಳಿ ಇಲ್ಲಾಗುವುದಿಲ್ಲ. ಚಳಿಗಾಲದ ಸಂದರ್ಭ ಇಲ್ಲಿನ ಗರಿಷ್ಠ ಉಷ್ಣಾಂಶ 26.2 ಡಿಗ್ರಿ ಸೆಲ್ಶಿಯಸ್‌ ದಾಖಲಾದರೆ ಕನಿಷ್ಠ ಉಷ್ಣಾಂಶ 6.7 ಡಿಗ್ರಿ ಸೆಲ್ಶಿಯಸ್‌ ಇರುತ್ತದೆ. ವಾತಾವರಣ ಸಾಮಾನ್ಯವಾಗಿರುತ್ತದೆ. ಆದರೆ ಸೂರ್ಯಾಸ್ಥದ ನಂತರ ತಾಪಮಾನ ಕಡಿಮೆ ಆಗುತ್ತದೆ.