Search
  • Follow NativePlanet
Share
ಮುಖಪುಟ » ಸ್ಥಳಗಳು » ಮಲಪ್ಪುರಂ » ಹವಾಮಾನ

ಮಲಪ್ಪುರಂ ಹವಾಮಾನ

ಮಲಪ್ಪುರಂ ಜಿಲ್ಲೆಯ ಪ್ರವಾಸಕ್ಕೆ ಸೂಕ್ತವಾದ ಸಮಯವೆಂದರೆ  ಸೆಪ್ಟೆಂಬರ್ ತಿಂಗಳಿಂದ (ಮಳೆಗಾಲ ಅಂತ್ಯವಾದ ತಕ್ಷಣ) ಫೆಬ್ರವರಿ ತಿಂಗಳವರೆಗೆ (ಬೇಸಿಗೆ ಪ್ರವೇಶಿಸುವ ಮುನ್ನ). ಅದೃಷ್ಟವಶಾತ ಈ ಸಮಯದಲ್ಲೇ ಕೇರಳದ ಎಲ್ಲ ಉತ್ಸವಗಳೂ ಜರುಗುವವು. ಆದರೆ, ಪಕ್ಷಿ ವೀಕ್ಷಣೆಯಲ್ಲಿ ಆಸಕ್ತರು ಬೇಸಿಗೆಯ ಬಿಸಿಲನ್ನು ಲೆಕ್ಕಿಸದೇ ಬೇಸಿಗೆಯಲ್ಲೇ ಮಲಪ್ಪುರಂನ ಪಕ್ಷಿ ವೀಕ್ಷಕ ಕಾಲುದಾರಿಯಲ್ಲಿ ಸಾಗಬೇಕು. ಅತೀ ವೃಷ್ಟಿ ಹಾಗೂ ಅತೀ ಬಿಸಿಲಿನ ದಿನಗಳಲ್ಲಿ ಮಲಪ್ಪುರಂಗೆ ಭೇಟಿನೀಡುವುದು  ಸೂಕ್ತವಲ್ಲ.

ಬೇಸಿಗೆಗಾಲ

ಮಲಪ್ಪುರಂ ಜಿಲ್ಲೆಯಲ್ಲಿ ಬೇಸಿಗೆ ಹೆಚ್ಚಿನ ತೀವ್ರತೆಯಿಂದ ಕೂಡಿರುತ್ತದೆ. ಕೇರಳದ ಎಲ್ಲಾ ಭಾಗಗಳ ಹಾಗೆ, ಬೇಸಿಗೆಯು ಮಾರ್ಚ್ ತಿಂಗಳಿಂದ ಪ್ರಾರಂಭವಾಗಿ ಮೇ ಕೊನೆಯಲ್ಲಿ ಮುಂಗಾರು ಆಗಮನದ ತನಕ ವ್ಯಾಪಿಸಿರುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ವರ್ಷದಲ್ಲೇ ಅತ್ಯಂತ ಹೆಚ್ಚಿನ ಬಿಸಿಲಿನಿಂದ ಕೂಡಿರುತ್ತದೆ ಆದರೆ ಈ ಕಾಲ ಹಕ್ಕಿಗಳ ವೀಕ್ಷಣೆಗೆ ಸೂಕ್ತವಾದ ಕಾಲವಾಗಿದೆ. ಬೇಸಿಗೆಯಲ್ಲಿ ಇಲ್ಲಿಗೆ ಪ್ರವಾಸಕ್ಕೆಂದು ಬರುವವರು  ಹತ್ತಿ ಬಟ್ಟೆಗಳು ಮತ್ತು ತಂಪುದಾಯಕ ಕನ್ನಡಕಗಳನ್ನು ಕೊಂಡೊಯ್ಯುವುದನ್ನು ಮರೆಯಬಾರದು.

ಮಳೆಗಾಲ

ಜೂನ್ ತಿಂಗಳಿಂದ ಮಲಪ್ಪುರಂನಲ್ಲಿ ಆರಂಭವಾಗುವ ಮಳೆಗಾಲದ ತುಂತುರು ಸೆಪ್ಟೆಂಬರ್ ತನಕ ಸುಮಾರು ನಾಲ್ಕು ಪೂರ್ಣ ತಿಂಗಳುಗಳವರೆಗೆ ಮುಂದುವರೆಯುತ್ತದೆ. ಮಳೆಗಾಲದುದ್ದಕ್ಕೂ  ಭಾರೀ ಮಳೆ ಕಾಣುವ ಮಲಪ್ಪುರಂನಲ್ಲಿ, ನೈರುತ್ಯ ಮಾನ್ಸೂನ್ ಜೂನ್ ಮತ್ತು ಜುಲೈನಲ್ಲಿ ಅತೀ ಹೆಚ್ಚು ಮಳೆಯನ್ನು ಸುರಿಸುತ್ತದೆ. ನಿರಂತರ ಮಳೆಯಿಂದಾಗಿ  ಈ ಋತು ಪ್ರವಾಸಕ್ಕೆ ಅನುಚಿತವಾದಗಿದೆ. ಮಲಪ್ಪುರಂ ಜಿಲ್ಲೆಯು  ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ  ವಾಯವ್ಯ ಮಾನ್ಸೂನ್ ಗಳಿಂದಲೂ ಸಾಕಷ್ಟು ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಕೇರಳದ ಇತರ ಜಿಲ್ಲೆಗಳಂತೆ, ಮಲಪ್ಪುರಂ ಕೂಡ  ಚಳಿಗಾಲದುದ್ದಕ್ಕೂ ಅಹ್ಲಾದಕರ ಹವಾಗುಣವನ್ನು  ಹೊಂದಿರುತ್ತದೆ. ಜನವರಿಯಲ್ಲಿ ಆರಂಭವಾಗುವ ಚಳಿಗಾಲ  ಫೆಬ್ರವರಿಯವರೆಗೂ ತನ್ನ ಸೌಮ್ಯ ಹವಾಮಾನವನ್ನು  ಮುಂದುವರೆಸುತ್ತದೆ. ಚಳಿಗಾಲವು ಈ ಪ್ರದೇಶದ ಪಟ್ಟಣಗಳಿಗೆ ಭೇಟಿ ನೀಡಲು ಮತ್ತು  ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಆದರ್ಶವಾದ ಸಮಯ.