Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೋಬಾ » ಹವಾಮಾನ

ಮಹೋಬಾ ಹವಾಮಾನ

ಮಹೋಬಾದಲ್ಲಿ ಉಪೋಷ್ಣವಲಯದ ಹವಾಮಾನ ಕಂಡುಬರುತ್ತದೆ. ಇಲ್ಲಿ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲಗಳು ತೀವ್ರವಾಗಿರುತ್ತವೆ.

ಬೇಸಿಗೆಗಾಲ

ಮಾರ್ಚ-ಮೇ ಬೇಸಿಗೆಕಾಲ. ಕೆಲವೊಮ್ಮೆ ಜೂನ್ಗೆ ವಿಸ್ತಾರವಾಗಬಹುದು. ಮೇ ತೀವ್ರ ಬೇಸಿಗೆಯ ತಿಂಗಳು. ಈ ಸಮಯದಲ್ಲಿ ಉಷ್ಣಾಂಶವು 25 ಡಿಗ್ರಿ ಸೆಲ್ಸಿಯಸ್ ಇಂದ 40 ಡಿಗ್ರಿ ಸೆಲ್ಸಿಯಸ್ ಇರುತ್ತದೆ.

ಮಳೆಗಾಲ

ಜುಲೈ-ಸೆಪ್ಟಂಬರ್ ಮಳೆಗಾಲ. ಆಗಸ್ಟನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಈ ಸಮಯದಲ್ಲಿ ಧಗೆಯೊಂದಿಗೆ ವಾತಾವರಣದಲ್ಲಿ ತೇವಾಂಶ ಕಂಡುಬರುತ್ತದೆ. ಹೆಚ್ಚು ಮಳೆ ಬೀಳುವ ಸಂಭವವಿರುತ್ತದೆ.

ಚಳಿಗಾಲ

ನವಂಬರ್-ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ಉಷ್ಣಾಂಶವು ಕನಿಷ್ಟ 9 ಡಿಗ್ರಿ ಸೆಲ್ಸಿಯಸ್ ಇಂದ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಚಳಿಗಾಲದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ.