Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹೇಶ್ವರ » ಹವಾಮಾನ

ಮಹೇಶ್ವರ ಹವಾಮಾನ

ಮಹೇಶ್ವರ ನಗರಕ್ಕೆ  ಮಳೆಗಾಲದಲ್ಲಿ ಅಲ್ಲದೇ, ಚಳಿಗಾಲದಲ್ಲಿ ಸಹ ಭೇಟಿ ನೀಡಬಹುದು. ಅಕ್ಟೋಬರ ನಿಂದ ಫೆಬ್ರುವರಿವರೆಗೆ ಇಲ್ಲಿಗೆ ಭೇಟಿ ನೀಡಲು ಅತ್ಯಂತ ಸೂಕ್ತವಾದ ಸಮಯವಾಗಿದೆ. ಚಳಿಗಾಲದಲ್ಲಿ ಇಲ್ಲಿನ ಹವಾಮಾನವು ತುಂಬಾ ಅಹ್ಲಾದಕತೆಯಿಂದ ಕೂಡಿರುತ್ತದೆ. ಇದು ಪ್ರವಾಸಿ ಚಟುವಟಿಕೆಗಳಿಗೆ ಚುರುಕುತನವನ್ನು ನೀಡುತ್ತದೆ. ಮಹೇಶ್ವರ ನಗರವು ಶಿವನಿಗೆ ಸಮರ್ಪಿತವಾದ್ದರಿಂದ ಪ್ರವಾಸಿಗರು ಇಲ್ಲಿಗೆ ಫೆಬ್ರುವರಿ ಮತ್ತು ಮಾರ್ಚ ತಿಂಗಳಿನಲ್ಲಿ ಭೇಟಿ ನೀಡುವುದು ಸೂಕ್ತ. ಏಕೆಂದರೆ ಈ ತಿಂಗಳುಗಳಲ್ಲಿ ಇಲ್ಲಿ ಶಿವನ ಪ್ರಿಯ ಹಬ್ಬವಾದ ಮಹಾ ಶಿವರಾತ್ರಿಯನ್ನು ಬಹು ಸಂಭ್ರಮದಿಂದ ಆಚರಿಸಲಾಗುತ್ತದೆ.

ಬೇಸಿಗೆಗಾಲ

ಬೇಸಿಗೆ ಋತುವಿನಲ್ಲಿ ಮಹೇಶ್ವರ ನಗರವು ಸ್ವಲ್ಪ ಮಟ್ಟಿಗಿನ ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಈ ಋತುವಿನಲ್ಲಿ ಇಲ್ಲಿ ಕನಿಷ್ಟ ತಾಪಮಾನವು 35 ಡಿಗ್ರಿ ಸೆಲ್ಸಿಯಸನವರೆಗೆ ಇರುತ್ತದೆ. ಪಾದರಸವು 42 ಡಿಗ್ರಿ ಸೆಲ್ಸಿಯಸನವರೆಗೆ ಏರಬಹುದು. ಬೇಸಿಗೆ ಕಾಲವು ಮಾರ್ಚನಿಂದ ಜೂನವರೆಗೂ ಇರುತ್ತದೆ. ಮೇ ತಿಂಗಳು ಅತ್ಯಂತ ಬಿಸಿ ವಾತಾವರಣದಿಂದ ಕೂಡಿರುತ್ತದೆ. ಮತ್ತು ಈ ತಿಂಗಳಲ್ಲಿ ಪಾದರಸವು 45 ಡಿಗ್ರಿ ಸೆಲ್ಸಿಯಸವವರೆಗೆ ಹೋಗಬಹುದು. ಮಹೇಶ್ವರಕ್ಕೆ ಭೇಟಿ ನೀಡಲು ಇದು ಖಂಡಿತವಾಗಿಯೂ ಯೋಗ್ಯವಾದ ಸಮಯವಲ್ಲ.

ಮಳೆಗಾಲ

ಮಹೇಶ್ವರದಲ್ಲಿ ಮಳೆಗಾಲವು ಜುಲೈ ತಿಂಗಳಿನಿಂದ ಹಿಡಿದು ಸಪ್ಟಂಬರ ತಿಂಗಳಿನಿವರೆಗೂ ಮುಂದುವರೆಯುತ್ತದೆ. ಈ ತಿಂಗಳುಗಳು ಮಹೇಶ್ವರದ ಅತ್ಯಂತ ಅದ್ಭುತ ಅವಧಿಯಾಗಿದೆ.  ಈ ಸ್ಥಳದಲ್ಲಿ ಆಗುವ ಮಳೆಯು ಒಂದು ಮಿತಿಯನ್ನು ಮೀರುವುದಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಳೆಯು ಇಲ್ಲಿನ ಆಕರ್ಷಣೀಯ ದೃಶ್ಯಗಳನ್ನು ನೋಡಲು ಅಡ್ಡಿಯಾಗುವುದಿಲ್ಲ. ಮಳೆಗಾಲದಲ್ಲಿ ಇಲ್ಲಿನ ವಾತಾವರಣವು ತುಂಬಾ ಅಹ್ಲಾದಕತೆಯಿಂದ ಕೂಡಿರುತ್ತದೆ.

ಚಳಿಗಾಲ

ಮಹೇಶ್ವರದಲ್ಲಿ ಚಳಿಗಾಲವು ಸಹ ಅಷ್ಟೊಂದು ತೀವೃತೆಯಿಂದ ಕೂಡಿರುವುದಿಲ್ಲ. ಈ ದಿನಗಳಲ್ಲಿ ಇಲ್ಲಿನ ಸರಾಸರಿ ತಾಪಮಾನವು ಕನಿಷ್ಟ 19 ಡಿಗ್ರಿ ಸೆಲ್ಸಿಯಸನವರೆಗೆ ಇರುತ್ತದೆ. ನವಂಬರನಿಂದ ಫೆಬ್ರುವರಿ ತಿಂಗಳುವರೆಗೂ ಇಲ್ಲಿ ಚಳಿಗಾಲ ಇರುತ್ತದೆ. ಚಳಿಗಾಲದಲ್ಲಿ ಪ್ರವಾಸಿಗರು ಮಹೇಶ್ವರಕ್ಕೆ ಭೇಟಿ ನೀಡಿ ಆನಂದವನ್ನು ಹೊಂದಬಹುದು. ಚಳಿಗಾಲದಲ್ಲಿ ಇಲ್ಲಿನ ಹವಾಮಾನವು ತಂಪು ಮತ್ತು ಹಿತಕರವಾಗಿರುತ್ತದೆ. ಇದಲ್ಲದೇ ಈ ಅವಧಿಯಲ್ಲಿ ಇಲ್ಲಿನ ದೃಶ್ಯಗಳು ತುಂಬಾ ಅಹ್ಲಾದಕರವಾಗಿರುತ್ತದೆ.