Search
  • Follow NativePlanet
Share
ಮುಖಪುಟ » ಸ್ಥಳಗಳು » ಮಹಾಬಲೇಶ್ವರ » ಹವಾಮಾನ

ಮಹಾಬಲೇಶ್ವರ ಹವಾಮಾನ

ಮಹಾಬಲೇಶ್ವರ ವರ್ಷವಿಡೀ ಮಧುರ, ಮಿತವಾದ ಹವಾಗುಣವನ್ನು ಹೊಂದಿರುತ್ತದೆ. ಚಳಿಗಾಲ ಮತ್ತು ಮುಂಗಾರಿನ ಅವಧಿಯಲ್ಲಿ ಮಹಾಬಲೇಶ್ವರಕ್ಕೆ ಭೇಟಿ ನೀಡುವ ಅತ್ಯಂತ ಸೂಕ್ತ ಸಮಯ.

ಬೇಸಿಗೆಗಾಲ

ಬೇಸಿಗೆ ಮಾರ್ಚ್ ನಿಂದ ಜೂನ್ ವರೆಗೂ ಚಾಚಿಕೊಂಡಿರುತ್ತದೆ ಮತ್ತು ಪರಿಸರವನ್ನು ವೀಕ್ಷಿಸಲು ಆಹ್ಲಾದಕರ ಸಮಯ. ತಾಪಮಾನ 18° C ರಿಂದ 29° C ವರೆಗು ಇರುತ್ತದೆ. ಬೆಚ್ಚಗಿನ ದಿನಗಳನ್ನು ಹೊರತುಪಡಿಸಿದರೆ, ಮಹಾಬಲೇಶ್ವರ 4,400 ಅಡಿ ಎತ್ತರದಲ್ಲಿರುವುದರಿಂದ ಹವಾಮಾನವು ಬಿಸಿಯಾಗುವುದರಿಂದ ತಪ್ಪುತ್ತದೆ ಮತ್ತು ಬದಲಿಗೆ ತಂಪಾದ ತಂಗಾಳಿಯಿಂದ ಈ ಸ್ಥಳವು ಒಳಗೊಂಡಿರುತ್ತದೆ.

ಮಳೆಗಾಲ

ಮುಂಗಾರು ಜೂನ್ ನಿಂದ ಸೆಪ್ಟೆಂಬರ್ ವರೆಗೂ ವಿಸ್ತರಿಸಿರುತ್ತದೆ ಮತ್ತು ಈ ಸ್ಥಳವನ್ನು ಒಂದು ಮರುಳುಗೊಳಿಸುವಂತಹ ದೃಶ್ಯವನ್ನಾಗಿ ರೂಪಾಂತರಿಸುತ್ತದೆ. ಮಧುಚಂದ್ರಕ್ಕೆ ಬರುವ ಜೋಡಿಗಳು ವರ್ಷದ ಈ ಸಮಯದಲ್ಲಿ ಈ ಸ್ಥಳಕ್ಕೆ ಭೇಟಿ ನೀಡುವುದು ಸೂಕ್ತ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ಅವಧಿಯಲ್ಲಿ ತಾಪಮಾನ 5° C ನಿಂದ 24° C ನಡುವೆ ಇದ್ದು, ತಂಪಾದ ಚಳಿಗಾಲವನ್ನು ಸೂಚಿಸುತ್ತದೆ. ಸಮೀಪದ ಪ್ರಮುಖ ನಗರಗಳಲ್ಲಿ ಜನಪ್ರಿಯವಾಗಿರುವ ಈ ಮಹಾಬಲೇಶ್ವರ ಗಿರಿಧಾಮಕ್ಕೆ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಅವಧಿಯಲ್ಲಿ ಪ್ರವಾಸಿ ಚಟುವಟಿಕೆ ಬಹಳಷ್ಟು ಇರುತ್ತದೆ.