Search
  • Follow NativePlanet
Share

ಪವಿತ್ರ ನಗರಿ ಮಧುರೈ

57

ದಕ್ಷಿಣ ಭಾರತದ ಅತಿ ದೊಡ್ಡ ಎರಡನೇಯ ನಗರವಾಗಿರುವ ಮಧುರೈ ಒಂದು ಪವಿತ್ರ ಪ್ರಾಚೀನ ನಗರವಾಗಿದೆ. ತಮಿಳುನಾಡು ರಾಜ್ಯದಲ್ಲಿರುವ ಇದು ದೇವಾಲಯಗಳ ನಗರ ಎಂದೇ ಪ್ರಸಿದ್ಧಿ. ಈ ದೇವಾಲಯ ನಗರಿಯು ವೈಗೈ ನದಿಯ ತೀರದಲ್ಲಿ ಪ್ರತಿಷ್ಠಾನವಾಗಿದೆ. ಪ್ರಾಚೀನ ಕಾಲದಲ್ಲಿ ಜನವಾಸ್ತವ್ಯವಿದ್ದ  ಹಳೆಯ ನಗರವಿದು. ಮಧುರೈ ನಗರದ ಉತ್ತರದ ಭಾಗದಲ್ಲಿ ಸಿರುಮಲೈ ಬೆಟ್ಟಗಳು ಕಂಡು ಬಂದರೆ, ಈ ನಗರದ ದಕ್ಷಿಣ ಭಾಗದಲ್ಲಿ ನಾಗಮಲೈ ಬೆಟ್ಟಗಳು ಕಂಡು ಬರುತ್ತವೆ.

ಈ ನಗರಕ್ಕೆ ಮಧುರೈ ಎಂಬ ಹೆಸರು ’ಮಧುರಾ’ ಎಂಬ ಶಬ್ದದಿಂದ ಬಂದಿದೆ. ಈ ಶಬ್ದದ ಅರ್ಥ ಏನು ಅಂತ ಗೊತ್ತೆ?  ’ಅತಿಯಾದ ಸಿಹಿ’ ಎಂಬುದು ಈ ಶಬ್ದದ ಅರ್ಥ. ಈ ಮಧುರವು ದೈವಿಕವಾದ ಅಮೃತದಿಂದ ಜನ್ಮ ತಳೆಯಿತಂತೆ. ಮಹಾದೇವನಾದ ಶಿವನು ಈ ದೈವಿಕ ಅಮೃತವನ್ನು ಈ ನಗರದ ಮೇಲೆ ಸುರಿದಿದ್ದರಿಂದಲೇ ಈ ನಗರವು ಮಧುರವಾಯಿತು. ಸಿಹಿಯಾಯಿತು. ಆದ್ದರಿಂದ ಈ ನಗರಕ್ಕೆ ಮಧುರೈ ಎಂಬ ಹೆಸರು ಬಂದಿತು ಎಂಬ ನಂಬಿಕೆ ಇದೆ.

ಮಧುರೈ ನಗರವನ್ನು ಇನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಪೂರ್ವದ ಅಥೆನ್ಸ,ಹಬ್ಬಗಳ ನಗರ, ಕಮಲದ ನಗರ ಮತ್ತು ನಿದ್ದೆ ಮಾಡದ ನಗರ, ಹೀಗೆ ಅನೇಕ ಹೆಸರುಗಳಿಂದ ಮಧುರೈ ನಗರವನ್ನು ಗುರುತಿಸಲಾಗುತ್ತದೆ. ಮಧುರೈ ನಗರವು ತಾನು ಹೊಂದಿರುವ ವಿಶೇಷ ಲಕ್ಷಣಗಳ ಕಾರಣದಿಂದಲೇ ಅದು ಈ ವಿಶೇಷ ಹೆಸರುಗಳನ್ನು ಪಡೆದುಕೊಂಡಿದೆ.

ಕಮಲದ ಆಕಾರದಲ್ಲಿಯೇ ಈ ಸುಂದರ ನಗರವನ್ನು ಕಟ್ಟಲಾದ್ದರಿಂದ ಇದಕ್ಕೆ ಕಮಲ ನಗರ ಎಂದು ಹೆಸರು ಬಂದಿದೆಯಂತೆ. ಇನ್ನೂ ಈ ನಗರದಲ್ಲಿ 24/7 ಕೆಲಸದ ಸಂಸ್ಕೃತಿ ವಾತಾವರಣ ಇರುವ ಕಾರಣದಿಂದ ಈ ನಗರಕ್ಕೆ ನಿದ್ದೆ ಮಾಡದ ನಗರ ಎಂಬ ನಾಮಧೇಯ ಪ್ರಾಪ್ತವಾಗಿದೆ. ಈ ನಗರದಲ್ಲಿರುವ ಅನೇಕ ರೆಸ್ಟುರೆಂಟಗಳು ದಿನದ ಇಪ್ಪತ್ನಾಲ್ಕು ಗಂಟೆಗಳು ಕಾರ್ಯನಿರ್ವಹಿಸುತ್ತವೆ. ಜೊತೆಗೆ ಈ ನಗರದಲ್ಲಿರುವ ಸಾರಿಗೆ ವ್ಯವಸ್ಥೆಯು ದಿನಪೂರ್ತಿ ಕಾರ್ಯನಿರ್ವಹಿಸುವುದಲ್ಲದೇ, ರಾತ್ರಿಪೂರ್ತಿಯು ಕಾರ್ಯ ನಿರ್ವಹಿಸುತ್ತದೆ.

ಮಧುರೈಯಲ್ಲಿ ಏನು ಮಾಡಬೇಕು?

ಮಧುರೈ ಮತ್ತು ಮಧುರೈ ಸುತ್ತಮುತ್ತಲಿರುವ ಪ್ರವಾಸಿ ಸ್ಥಳಗಳು

ಮದುರೈ ನಗರವು ವಿವಿಧ ಧರ್ಮಗಳಿಗೆ ಸೇರಿದ ಜನರು ಸಾಮರಸ್ಯದಿಂದ ಬದಕುತ್ತಿರುವ ನಗರ ಎಂದೇ ಪ್ರಸಿದ್ಧವಾಗಿದೆ. ಈ ನಗರದಲ್ಲಿ ವಿವಿಧ ಧರ್ಮಗಳು ಮತ್ತು ವಿವಿಧ ಸಂಸ್ಕೃತಿಗಳು ನೆಲೆ ಊರಿರುವದನ್ನು ಕಾಣಬಹುದು. ಇಲ್ಲಿ ಕಂಡು ಬಂದಿರುವ ವಿವಿಧ ಧರ್ಮಗಳಿಗೆ ಸೇರಿದ ಅವಶೇಷಗಳು ಈ ನಗರವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ  ಮಾಡಿವೆ. ಮೀನಾಕ್ಷಿ ಸುಂದ್ರೇಶ್ವರ ದೇವಾಲಯ, ಗೋರಿಪಳ್ಯಂ ದರ್ಗಾ ಮತ್ತು ಸೆಂಟ ಮೇರಿ ಕೆಥೆಡ್ರಲ್ ಇಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ತಾಣಗಳು.

ಗಾಂಧಿ ಮ್ಯೂಜಿಯಂ,ಕೂಡಲ್ ಅಳಗರ್ ದೇವಸ್ಥಾನ,ಕಾಝಿಮರ್ ದೊಡ್ದ ಮಸೀದಿ, ತಿರುಮಲೈ ನಾಯಕ್ಕರ್ ಅರಮನೆ, ವಂಡಿಯೂರ್ ಮಾರಿಯಮ್ಮನ್ ತೆಪ್ಪಾಕುಲಮ್,ತಿರುಪಾರನಕುಂದರಮ, ಪಳ್ಮದಿರಚೋಲೈ, ಅಲಾಗರ್ ಕೋವಿಲ್, ವೈಗೈ ಡ್ಯಾಮ್ ಮತ್ತು ಅತಿಸಯಂ ಥೀಮ್ ಪಾರ್ಕ, ಹೀಗೆ ಮುಂತಾದ ಆಕರ್ಷಿಣೀಯ ಸ್ಥಳಗಳನ್ನು ನೀವು ನೋಡಲು ಮಧುರೈ ನಗರಕ್ಕೆ ಭೇಟಿ ಕೊಡಲೇ ಬೇಕು. ನೀವು ಪ್ರವಾಸಕ್ಕೆಂದು ಹಾಕಿದ ದುಡ್ದಿಗೆ ಖಂಡಿತವಾಗಿಯೂ ಮೋಸವಿಲ್ಲ.

ಮಧುರೈ ನಗರದ ಅತ್ಯಂತ ಪ್ರಸಿಧ್ದವಾದ ಮತ್ತು ಪ್ರಮುಖವಾದ ಹಬ್ಬ ಎಂದರೆ ಚಿಥಿರೈ ಹಬ್ಬ. ಈ ಹಬ್ಬವನ್ನು ಎಪ್ರೀಲ ಮತ್ತು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಪ್ರಸಿದ್ಧ ಹಬ್ಬವನ್ನು ಮೀನಾಕ್ಷಿ ದೇವಸ್ಥಾನದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಸಾವಿರಾರು ಭಕ್ತರು ಗುಂಪು ಗುಂಪಾಗಿ ಮೀನಾಕ್ಷಿ ದೇವಸ್ಥಾನಕ್ಕೆ ಬಂದು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬವನ್ನು ವಿವಿಧ ಸಾಂಪ್ರದಾಯಿಕ ಹಂತಗಳ ಮೂಲಕ ಆಚರಿಸಲಾಗುತ್ತದೆ. ದೇವತೆಯ ಪಟ್ಟಾಭೀಷೇಕ, ರಥೋತ್ಸವ ಮತ್ತು ದೇವತೆಗಳ ಕಲ್ಯಾಣ ಮಹೋತ್ಸವ ಹೀಗೆ ವಿವಿಧ ಸಾಂಪ್ರದಾಯಿಕ ಹಂತಗಳ ಮೂಲಕ ಈ ಹಬ್ಬವನ್ನ ಆಚರಿಸಲಾಗುತ್ತದೆ. ವಿಷ್ಣುವಿನ ಅವತಾರವಾದ ದೇವ ಕಾಲಝ್ ಗ ನನ್ನು ಉತ್ಸವದಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯುವ ಮೂಲಕ ಈ ಹಬ್ಬವು ಮುಕ್ತಾಯದ ಹಂತವನ್ನು ತಲುಪುತ್ತದೆ.

ಥೆಪ್ಪೋರ್ಚವಮ್ ಹಬ್ಬವನ್ನು ಜನೇವರಿ ಮತ್ತು ಫೆಬ್ರುವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ಇದು ಕೂಡ ಒಂದು ಪ್ರಸಿದ್ದ ಹಬ್ಬವಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಅವನಿಮೂಲಮ್ ಎಂಬ ಹಬ್ಬವನ್ನು ಕೂಡ ಇಲ್ಲಿ ಆಚರಿಸಲಾಗುತ್ತದೆ. ಥೆಪ್ಪೋರ್ಚವಮ್ ಮತ್ತು ಅವನಿಮೂಲಮ್ ಮಧುರೈ ನಗರದಲ್ಲಿ ಆಚರಿಸಲಾಗುವ  ಪ್ರಮುಖ ಹಬ್ಬಗಳಾಗಿವೆ.

ಮಧುರೈ ನಗರಕ್ಕೆ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಮತ್ತೊಂದು ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಜಲ್ಲಿಕಟ್ಟು. ಇದೊಂದು ಪ್ರಸಿದ್ಧ ಐತಿಹಾಸಿಕ ಆಟದ ಪ್ರಕಾರವಾಗಿದ್ದು  ಪೊಂಗಲ್ ಹಬ್ಬದ ಸಮಯದಲ್ಲಿ ಇದನ್ನು ಆಚರಿಸಲಾಗುತ್ತದೆ. ನೀವು ಮಧುರೈಯಲ್ಲಿ ರೇಷ್ಮೆ ಸೀರೆಗಳ ಖರೀದಿ, ಪೀಠೋಪಕರಣಗಳ ಖರೀದಿ,ಪ್ರತಿಮೆ,ಖಾದಿ ಬಟ್ಟೆಗಳ ಖರೀದಿ ವ್ಯಾಪಾರವನ್ನು ನೀವು ಮಾಡದಿದ್ದರೆ ನಿಮ್ಮ ಮಧುರೈ ಪ್ರವಾಸ ಅಪೂರ್ಣವಾದಂತೆಯೇ ಸರಿ.

ಇತಿಹಾಸದ ಮೇಲೆ ಇಣುಕು ನೋಟ

ಮಧುರೈ ನಗರದ ಇತಿಹಾಸವು ಕ್ರಿಸ್ತಶಕ ಪೂರ್ವ 1780 ರಷ್ಟು ಹಿಂದಕ್ಕೆ ಹೋಗುತ್ತದೆ. ಈ ಸಮಯದಲ್ಲಿ ಮಧುರೈ ನಗರದಲ್ಲಿ ತಮಿಳುನಾಡಿನ ಅತ್ಯಂತ ಪ್ರಾಚೀನ ಸಾಹಿತ್ಯ ಪ್ರಕಾರಗಳಾದ ಸಂಗಮಗಳು ಜಾರಿಯಲ್ಲಿದ್ದವು. ಮಧುರೈ ನಗರದ ಹೆಸರಿನ ಉಲ್ಲೇಖವು ಅನೇಕ ಪ್ರಮುಖ ಪ್ರಾಚೀನ ಪಾಂಡಿತ್ಯಪೂರ್ಣ ಗ್ರಂಥಗಳಲ್ಲಿ ಕಂಡು ಬರುತ್ತದೆ. ಮೇಗಾಸ್ತನೀಸನ್ ಇಂಡಿಕಾ, ಕೌಟಿಲ್ಯನ ಅರ್ಥಶಾಸ್ತ್ರ ಮುಂತಾದ ಪ್ರಸಿದ್ಧ ಗ್ರಂಥಗಳಲ್ಲಿ ಮಧುರೈ ನಗರದ ಉಲ್ಲೇಖ ಇರುವುದನ್ನು ನೀವು ಕಾಣಬಹುದಾಗಿದೆ. ಆರನೇಯ ಶತಮಾನದವರೆಗೂ ಈ ನಗರವನ್ನು ಖಲಭ್ರರು ಆಳುತ್ತಿದ್ದರು ಎಂಬ ಮಾಹಿತಿ ನಮಗೆ ಇತಿಹಾಸದಿಂದ ದೊರಕುತ್ತದೆ.

ಖಲಭ್ರರಿಗಿಂತ ಮುಂಚೆ ಈ ಮಧುರೈ ನಗರವು ಅನೇಕ ಸಾಮ್ರಾಜ್ಯಗಳ ಏರಿಳಿತವನ್ನು ಕಂಡಿದೆ. ಉದಾಹರಣೆಗೆ ಪೂರ್ವದ ಪಾಂಡ್ಯರು, ನಂತರದ ಪಾಂಡ್ಯರು, ಮಧ್ಯಕಾಲೀನ ಚೋಳರು, ನಂತರದ ಚೋಳರು, ಮಧುರೈ ಸುಲ್ತಾನರು, ಮಧುರೈ ನಾಯಕರು, ಚಾಂದ ಸಾಹಿಬ, ವಿಜಯನಗರ ಸಾಮ್ರಾಜ್ಯ ಮತ್ತು ಕರ್ನಾಟಿಕ್ ಸಾಮ್ರಾಜ್ಯ ಮತ್ತು ಬ್ರಿಟೀಷ ಸಾಮ್ರಾಜ್ಯಗಳ ಆಳ್ವಿಕೆ ಮತ್ತು ಏರಿಳಿತಗಳನ್ನು ಈ ನಗರವು  ಕಂಡಿದೆ. ಈ ನಗರವು 1801 ರಲ್ಲಿ ಬ್ರಿಟೀಷ್ ಆಡಳಿತದ ವ್ಯಾಪ್ತಿಗೆ ಬಂದಿತು. ನಂತರ ಇದು ಮದ್ರಾಸ ಪ್ರಾಂತ್ಯದ ಒಂದು ಭಾಗವಾಗಿ ಸೇರ್ಪಡೆಯಾಯಿತು. ಭಾರತದ ಸ್ವತಂತ್ರ ಚಳುವಳಿಯಲ್ಲಿ ಈ ನಗರವು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದೆ.

ಎನ್.ಎಮ್.ಆರ್ ಸುಬಾರಮಣ್, ಮೀರ ಇಬ್ರಾಹಿಂ ಸಾಹಿಬ್ ಮತ್ತು ಮೊಹಮ್ಮದ್ ಇಸ್ಮೈಲ್ ಸಾಹಿಬ್ ರಂತಹ ಪ್ರಮುಖ ನಾಯಕರು ಮಧುರೈ ನಗರದಲ್ಲಿ ವಾಸಿಸುತ್ತಿದ್ದರು. ಮಹಾತ್ಮ ಗಾಂಧಿ ಈ ನಗರದ ರೈತ ಕಾರ್ಮಿಕರಿಂದ ಎಷ್ಟು ಪ್ರೇರಿತರಾಗಿದ್ದರೆಂದರೆ ಅವರು ತಾವು ಧರಿಸುತ್ತಿದ್ದ ನೈಲಾನ್ ಬಟ್ಟೆ ಮತ್ತು ಪ್ಯಾಂಟನ್ನು ತ್ಯಜಿಸುವ ನಿರ್ಧಾರವನ್ನು ಮಾಡಿದರು.

ಮಧುರೈ ನಗರವನ್ನು ತಲುಪುವುದು ಹೇಗೆ?

ಮಧುರೈ ನಗರದ ಸಾರಿಗೆ ವ್ಯವಸ್ಥೆಯು ಅತ್ಯಂತ ಉತ್ತಮವಾಗಿದ್ದು ದೇಶದ ಎಲ್ಲಾ ಭಾಗಗಳಿಂದಲೂ ಇದು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಮಧುರೈ ವಿಮಾನ ನಿಲ್ದಾಣವು ದೆಹಲಿ, ಚೆನ್ನೈ, ಮುಂಬಯಿ ಮತ್ತು ಬೆಂಗಳೂರು ನಂತಹ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಈ ಮಧುರೈ ನಗರಕ್ಕೆ ಹತ್ತಿರವಾಗುವ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣ ಎಂದರೆ ಚೆನ್ನೈ  ವಿಮಾನ ನಿಲ್ದಾಣ.

ಮಧುರೈ ನಗರವು ಉತ್ತಮ ರೇಲ್ವೆ ಸಂಪರ್ಕವನ್ನು ಸಹ  ಹೊಂದಿದೆ. ಮುಂಬಯಿ, ಕೋಲ್ಕತ್ತ, ಮೈಸೂರು,ಕೊಯಮತ್ತೂರು ಮತ್ತು ಚೆನ್ನೈ ನಂತಹ ನಗರಗಳಿಗೆ ಉತ್ತಮ ರೇಲ್ವೆ ಸಂಪರ್ಕದ ವ್ಯವಸ್ಥೆ ಇದೆ. ಮಧುರೈ ನಗರವು ಉತ್ತಮವಾದ ಬಸ ವ್ಯವಸ್ಥೆಯನ್ನು ಹೊಂದಿದ್ದು ಚೆನ್ನೈ, ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ ಮುಂತಾದ ನಗರಗಳಿಗೆ ನಿಯಮಿತ ಬಸ್ ಸೇವೆಯ ಸೌಲಭ್ಯವಿದೆ.

ಮಧುರೈ ಹವಾಮಾನ:

ಮಧುರೈ ನಗರದ ಹವಾಮಾನವು ಹೆಚ್ಚಾಗಿ  ಉಷ್ಣ ಇಲ್ಲವೇ ಶುಷ್ಕವಾಗಿರುತ್ತದೆ. ಅಕ್ಟೋಬರ ನಿಂದ ಹಿಡಿದು ಮಾರ್ಚ ತಿಂಗಳಿನವರಗೂ ನೀವು ಮಧುರೈ ನಗರಕ್ಕೆ ಭೇಟಿ ನೀಡಬಹುದು. ಇವು ಈ ನಗರಕ್ಕೆ  ಭೇಟಿ ನೀಡಲು ಇರುವ ಪ್ರಶಸ್ತವಾದ ತಿಂಗಳುಗಳು. ವರ್ಷದ ಈ ತಿಂಗಳುಗಳ ಸಮಯದಲ್ಲಿ ಇಲ್ಲಿನ ತಾಪಮಾನವು ತಂಪು ಮತ್ತು ಆಹ್ಲಾದಕರವಾಗಿರುತ್ತದೆ. ಪ್ರವಾಸಿಗರಿಗೆ ಮಧುರೈ ನಗರಕ್ಕೆ ಭೇಟಿ ನೀಡಲು ತುಂಬಾ ಪ್ರಶಸ್ತವಾದ ಸಮಯ. ಈ ಸಮಯವು ಪ್ರವಾಸಿಗರಿಗೆ ತುಂಬ ಸಂತೋಷ ಮತ್ತು ಉಲ್ಲಾಸವನ್ನು ಕೊಡಮಾಡುತ್ತದೆ. ನಗರದ ದೇವಾಲಯಗಳನ್ನು ಮತ್ತು ಪ್ರಮುಖ ಸ್ಥಳಗಳನ್ನು ನೋಡಲು ಸೂಕ್ತ ಸಮಯವಿದು.

ಮದುರೈ ಪ್ರಸಿದ್ಧವಾಗಿದೆ

ಮದುರೈ ಹವಾಮಾನ

ಉತ್ತಮ ಸಮಯ ಮದುರೈ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಮದುರೈ

  • ರಸ್ತೆಯ ಮೂಲಕ
    ಮಧುರೈ ಮೂಲಕ ಅನೇಕ ರಾಷ್ಟ್ರೀಯ ಹೆದ್ದಾರಿಗಳು ಹಾಯ್ದು ಹೋಗುತ್ತವೆ. ಉದಾಹರಣೆಗೆ NH7, NH 45B, NH 49 and NH 208 ಹೆದ್ದಾರಿಗಳನ್ನು ನೀವು ಇಲ್ಲಿ ಕಾಣಬಹುದು.ಹೀಗಾಗಿ ಮಧುರೈ ನಗರದ ರಸ್ತೆ ಸಾರಿಗೆ ಸೌಲಭ್ಯವು ತುಂಬಾ ಉತ್ತಮವಾಗಿದ್ದು ಪ್ರಯಾಣಕ್ಕೆ ಅನುಕೂಲಕರವಾಗಿದೆ. ದಕ್ಷಿಣ ಭಾರತದ ಭಾರತದ ಪ್ರಮುಖ ನಗರಗಳಿಗೆ ಇಲ್ಲಿಂದ ಬಸ್ ಸೌಲಭ್ಯದ ವ್ಯವಸ್ಥೆ ಇದೆ. ಚೆನ್ನೈ, ಬೆಂಗಳೂರು, ಕೊಯಮತ್ತೂರು, ತಿರುವನಂತಪುರಂ, ತಿರುಚ್ಚಿ ಮುಂತಾದ ನಗರಗಳಿಗೆ ನಿಯಮಿತ ಬಸ್ ಸೇವೆಯ ಅನುಕೂಲತೆ ಇದೆ. ಖಾಸಗಿ ಬಸ್ ಸೇವೆಗಳ ಸೌಲಭ್ಯವೂ ಉಂಟು, ಮಧುರೈಯಿಂದ ತಮಿಳುನಾಡಿನ ಸುತ್ತಮುತ್ತಲಿನ ಅನೇಕ ನಗರಗಳಿಗೆ ತಮಿಳುನಾಡು ರಾಜ್ಯ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮಧುರೈ ಜಂಕ್ಷನ್ ದಕ್ಷಿಣ ಭಾರತದಲ್ಲಿರುವ ಒಂದು ಪ್ರಮುಖ ರೇಲ್ವೇ ಸ್ಟೇಷನ ಆಗಿದೆ.ಈ ಸ್ಟೇಷನ ದೇಶದ ಬಹುತೇಕ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಸಾಧಿಸಿದೆ. ಮಧುರೈ ನಗರವು ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದ್ದು ಇಲ್ಲಿ ದೆಹಲಿ,ಚೆನ್ನೈ,ಮುಂಬಯಿ,ಕೋಲ್ಕತ್ತ, ಮೈಸೂರು,ಕೋಯಿಂಬತ್ತೂರು ಮತ್ತು ಕನ್ಯಾಕುಮಾರಿ ಅಂತಹ ಪ್ರಮುಖ ನಗರಗಳಿಗೆ ಉತ್ತಮ ನೇರ ರೇಲ್ವೆ ಸಂಪರ್ಕದ ವ್ಯವಸ್ಥೆ ಇದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಮಧುರೈಯಲ್ಲಿ ಒಂದು ದೇಶಿಯ ವಿಮಾನ ನಿಲ್ದಾಣವಿದ್ದು ಇದು ನಗರದಿಂದ ಹತ್ತು ಕೀ.ಮಿ ದೂರದಲ್ಲಿದೆ. ಮುಂಬಯಿ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಇತರ ಪ್ರಮುಖ ನಗರಗಳಿಗೆ ಪ್ರತಿ ನಿತ್ಯವು ಮಧುರೈಯಿಂದ ಹೊರಡುವ ವಿಮಾನಗಳಿವೆ. ಇದಕ್ಕೆ ಹತ್ತಿರದಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದರೆ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಭಾರತ ಮತ್ತು ಇತರ ದೇಶಗಳ ಪ್ರಮುಖ ನಗರಗಳಿಗೆ ವೈಮಾನಿಕ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat