Search
  • Follow NativePlanet
Share
ಮುಖಪುಟ » ಸ್ಥಳಗಳು » ಮದುರೈ » ಹವಾಮಾನ

ಮದುರೈ ಹವಾಮಾನ

ಅಕ್ಟೋಬರ ತಿಂಗಳಿನಿಂದ ಮಾರ್ಚ ತಿಂಗಳಿನವರೆಗೂ ಮಧುರೈಗೆ ನೀವು ಪ್ರವಾಸವನ್ನು ಕೈಗೊಳ್ಳಬಹುದು. ಇದು ಭೇಟಿ ನೀಡಲು ಯೋಗ್ಯವಾದ ಸಮಯ . ಈಗ ಮಧುರೈಯಲ್ಲಿ ತಂಪಾದ ಹಿತಕರವಾದ ವಾತಾವರಣ ಮತ್ತು ಆಹ್ಲಾದಕರ ಹವಾಮಾನ ಇರುತ್ತದೆ. ಈ ಸಮಯದಲ್ಲಿ ಕೈಗೊಂಡ ಪ್ರವಾಸವು ಖಂಡಿತವಾಗಿಯೂ ಸಂತೋಷವನ್ನು ನೀಡುತ್ತದೆ. ಈ ಹವಾಮಾನವು ಪ್ರವಾಸಿ ಚಟುವಟಿಕೆಗಳನ್ನು ಹೆಚ್ಚು ಆನಂದಮಯವನ್ನಾಗಿ ಮಾಡುತ್ತದೆ. ನೀವು ಈ ಸಮಯದಲ್ಲಿ ತುಂಬಾ ಆರಾಮದಾಯಕವಾಗಿ ಪ್ರವಾಸವನ್ನು ಕೈಗೊಳ್ಳಬಹುದು. ವರ್ಷದ ಉಳಿದ ತಿಂಗಳುಗಳು ತುಂಬಾ ಉಷ್ಣತೆ ಮತ್ತು ಶುಷ್ಕತೆಯಿಂದ ಕೂಡಿರುತ್ತದೆ. ಈಗ ಆಹ್ಲಾದಕರ ಹವಾಮಾನ ಇರುವುದಿಲ್ಲ. ಈ ಸಮಯವು ಮಧುರೈ ಪ್ರವಾಸಕ್ಕೆ ಖಂಡಿತ ಯೋಗ್ಯವಾದದ್ದು ಅಲ್ಲ. ಏನೇ ಇರಲಿ ಈ ಪವಿತ್ರ ನಗರಿ ಮಧುರೈ ಯನ್ನು ನೋಡಿ ಆನಂದಿಸಲೇಬೇಕು. ಅಲ್ಲವೇ?

ಬೇಸಿಗೆಗಾಲ

ಬೇಸಿಗೆಯ ಕಾಲದಲ್ಲಿ ಇಲ್ಲಿ ತೀವ್ರವಾದ ಉಷ್ಣತೆಯ ತಾಪಮಾನ ಇರುತ್ತದೆ.ಇದು 26 ಡಿಗ್ರಿ ಸೆಲ್ಶಿಯಸ್ ನಿಂದ 41 ಡಿಗ್ರಿ ಸೆಲ್ಶಿಯಸ್ ನವರೆಗೂ ಇರುತ್ತದೆ. ಮಾರ್ಚನಿಂದ ಜೂನ ತಿಂಗಳುವರೆಗೂ ಬೇಸಿಗೆಯ ಕಾಲವಾಗಿರುತ್ತದೆ. ಇವುಗಳನ್ನು ಬೇಸಿಗೆಯ ತಿಂಗಳುಗಳು ಎಂದು ಕರೆಯುತ್ತಾರೆ. ಮೇ ತಿಂಗಳಲ್ಲಿ ಅತ್ಯಂತ ಬಿಸಿ ಇರುತ್ತದೆ. ವರ್ಷದ ಈ ಸಮಯವು ಈ ಪ್ರದೇಶದ ಪ್ರಯಾಣಕ್ಕೆ ಒಳ್ಳೆಯದಲ್ಲ. ಈ ಸಮಯ ಪ್ರವಾಸಕ್ಕೆ ಹಿತಕರವಾಗುವುದಿಲ್ಲ. ಆದ್ದರಿಂದ ಈ ಸಮಯವನ್ನು ಯಾರು ಪ್ರವಾಸಕ್ಕಾಗಿ ಶಿಫಾರಸ್ಸು ಮಾಡುವುದಿಲ್ಲ. ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋದರೆ ಅದು ಹೇಗೆ ತಾನೇ ಇಷ್ಟವಾಗುತ್ತದೆ?

ಮಳೆಗಾಲ

ಮಧುರೈಯಲ್ಲಿ ಜುಲೈ ಮತ್ತು ಅಗಸ್ಟ ತಿಂಗಳಲ್ಲಿ ಮಳೆಗಾಲವು ಕಂಡುಬರುತ್ತದೆ. ಆಗ ಮಧ್ಯಮ ಗಾತ್ರದಿಂದ ಹಿಡಿದು ಭಾರಿ ಮಳೆ ಸಂಭವಿಸುತ್ತದೆ. ಈ ಮಳೆಯಿಂದಾಗಿ ಅಲ್ಲಿನ ಉಷ್ಣತೆಯ ತಾಪಮಾನದ ವಾತಾವರಣ ಕಡಿಮೆಯಾಗಿ ತಂಪಾದ ಹಿತಕರವಾದ ವಾತಾವರಣ ಉಂಟಾಗುತ್ತದೆ. ಇದರಿಂದ ಹವಾಮಾನವು ಆಹ್ಲಾದಕರವಾಗುತ್ತದೆ. ಮಳೆಯ ಪ್ರವಾಸ ಇಷ್ಟಪಡುವ ಪ್ರವಾಸಿಗರು ವರ್ಷದ ಈ ಸಮಯದಲ್ಲಿ ಮಧುರೈ ನಗರಕ್ಕೆ ಭೇಟಿ ನೀಡಿ ಪ್ರವಾಸದ ಖುಷಿಯನ್ನು ಅನುಭವಿಸಬಹುದು.

ಚಳಿಗಾಲ

ಡಿಸೆಂಬರ, ಜನೇವರಿ, ಫೆಬ್ರುವರಿ ತಿಂಗಳುಗಳನ್ನು ಚಳಿಗಾಲದ ತಿಂಗಳುಗಳು ಎಂದು ಕರೆಯಲಾಗುತ್ತದೆ. ಈ ತಿಂಗಳುಗಳಲ್ಲಿ ಮಧುರೈಯಲ್ಲಿ ಚಳಿಗಾಲ ಇರುತ್ತದೆ. ವರ್ಷದ ಈ ಸಮಯ ಪ್ರವಾಸಕ್ಕೆ  ಅತ್ಯಂತ ಯೋಗ್ಯವಾದದ್ದು. ಈಗ ಮಧುರೈಯಲ್ಲಿ ತಂಪಾದ ಹಿತಕರವಾದ ವಾತಾವರಣ ಮತ್ತು ಆಹ್ಲಾದಕರ ಹವಾಮಾನ ಇರುತ್ತದೆ. ತಾಪಮಾನವು  18 ಡಿಗ್ರಿ ಸೆಲ್ಶಿಯಸ್ ನಿಂದ 32 ಡಿಗ್ರಿ ಸೆಲ್ಶಿಯಸ್ ನ ನಡುವೆ ತೂಗಾಡುತ್ತಿರುತ್ತದೆ. ಇವುಗಳನ್ನು ಆಹ್ಲಾದಕರ ತಿಂಗಳುಗಳು ಎಂದು ಕರೆಯುತ್ತಾರೆ. ಈ ಸಮಯವು ಪ್ರವಾಸದ ಎಲ್ಲ ಚಟುವಟಿಕೆಗಳಿಗೆ ಮತ್ತು ನೋಟಗಳಿಗೆ ಒಂದು ಸೂಕ್ತ ಮತ್ತು ಅತ್ಯುತ್ತಮವಾದ ವಾತಾವರಣವನ್ನು ಒದಗಿಸುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ.