Search
  • Follow NativePlanet
Share
ಮುಖಪುಟ » ಸ್ಥಳಗಳು» ಲುಧಿಯಾನಾ

ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ

23

ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ ಲೋಧಿ ಆಡಳಿತದ ಹೆಸರನ್ನಿಡಲಾಯಿತು. ಕೆನಡಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯರು ಈ ನಗರದವರಾಗಿದ್ದಾರೆ. ಆತಿಥ್ಯಕ್ಕೆ ಹೆಸರಾಗಿರುವ ಇಲ್ಲಿನ ಜನರನ್ನು ಲುಧಿನವಿಸ್ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಲುಧಿಯಾನ ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಹಲವಾರು ಪ್ರವಾಸಿ ಆಕರ್ಷಣೆಗಳನ್ನು ಹೊಂದಿರುವ ನಗರವು ದಿನಗಳ ಕಾಲ ಪ್ರವಾಸಿಗಳನ್ನು ಮನರಂಜಿಸಲಿದೆ. ಲುಧಿಯಾನ ಪ್ರವಾಸೋದ್ಯಮದ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಗುರುದ್ವಾರ ಮನ್ಜಿ ಸಾಹಿಬ್, ಗುರು ನಾನಕ್ ಭವನ್, ಫಿಲ್ಲೌರ್ ಕೋಟೆ, ಮಹಾರಾಜ ರಂಜಿತ್ ಸಿಂಗ್ ಯುದ್ಧ ಮ್ಯೂಸಿಯಂ, ಗುರು ನಾನಕ್ ಸ್ಟೇಡಿಯಂ ಮತ್ತು ರಾಖ್ ಬಾಗ್ ಪಾರ್ಕ್. ಇವುಗಳನ್ನು ಹೊರತುಪಡಿಸಿ ಬೆಳಿಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್ ಗೆ ಹೋಗುವಂತಹ ಹಲವಾರು ಗಾರ್ಡನ್ ಮತ್ತು ಪಾರ್ಕ್ ಗಳಿವೆ. ವಿರಾಮದ ವೇಳೆ ಲುಧಿಯಾನ ಪ್ರವಾಸೋದ್ಯಮದ ಭಾಗವಾಗಿರುವ ಅಮ್ಯೂಸ್ ಮೆಂಟ್ ಪಾರ್ಕ್ ಗಳು ಮತ್ತು ಮೃಗಾಲಯಗಳಿಗೆ ಭೇಟಿ ನೀಡಬಹುದು.

ಪಂಜಾಬ್ ನಲ್ಲಿ ಲುಧಿಯಾನ ಶಾಪಿಂಗ್ ಗೆ ಅತ್ಯುತ್ತಮ ನಗರವಾಗಿದೆ. ನಗರದಲ್ಲಿ 20ಕ್ಕೂ ಹೆಚ್ಚು ಮಾಲ್ ಗಳಿದ್ದು, ಇದರಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ಬ್ರಾಂಡ್ ಗಳ ಮಳಿಗೆಗಳಿವೆ. ಲುಧಿಯಾನ ಜನರು ಆಹಾರವನ್ನು ಹೆಚ್ಚು ಇಷ್ಟಪಡುವ ಕಾರಣ ನಗರದಲ್ಲಿ ರೆಸ್ಟೋರೆಂಟ್ ಗಳ ಸಂಖ್ಯೆ ಹೆಚ್ಚುತ್ತಲಿದೆ. ಲಸ್ಸಿ ಪಂಜಾಬಿ ಪಾನೀಯದಲ್ಲಿ ಅತ್ಯಂತ ಜನಪ್ರಿಯವಾಗಿದ್ದು, ಇದನ್ನು ಸಿಹಿ ಹಾಗೂ ಉಪ್ಪು ಎರಡು ವಿಧದಲ್ಲಿ ಕುಡಿಯಬಹುದಾಗಿದೆ. ಇಲ್ಲಿಂದ ರಸ್ತೆ ಮೂಲಕ ಕೇವಲ ನಾಲ್ಕು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ತಲುಪಬಹುದಾದ ನಗರಗಳೆಂದರೆ ಚಂದೀಗಢ್, ಕಸೌಲಿ, ಮಕ್ಲೊಡಗಂಜ್, ಧರ್ಮಸಾಲಾ, ಶಿಮ್ಲಾ ಮತ್ತು ಕುಫ್ರಿ.  ಲುಧಿಯಾನದ ಹಬ್ಬಗಳು, ಸಂಪ್ರದಾಯಗಳು ಮತ್ತು ಲವಲವಿಕೆ

ತನ್ನ ಸಂಸ್ಕೃತಿ ಮತ್ತು ಪರಂಪರೆಗೆ ವ್ಯಾಪಕವಾಗಿ ಹೆಸರುವಾಸಿಯಾಗಿರುವ ಲುಧಿಯಾನದ ಪಂಜಾಬಿ ಭವನ, ಗುರುನಾನಕ್ ಭವನ ಮತ್ತು ನೆಹರೂ ಸಿದ್ಧಾಂತ ಕೇಂದ್ರ ಅಡಿಟೋರಿಯಂನಲ್ಲಿ ಆಯೋಜಿಸಲಾಗುವ ಧಾರ್ಮಿಕ ಉತ್ಸವಗಳನ್ನು ವೀಕ್ಷಿಸಲು ಪ್ರವಾಸಿಗಳು ಆಗಮಿಸುತ್ತಾರೆ. ಸಾಂಸ್ಕೃತಿಕ ಉತ್ಸವವನ್ನು ಹೊರತುಪಡಿಸಿ ಪ್ರವಾಸಿಗಳಿಗೆ ಜಾನಪದ ಸಂಗೀತ, ನೃತ್ಯ, ಆಟ, ರೋಪ್ ಡ್ಯಾನ್ಸ್ ಮತ್ತು ಇತರ ವೈವಿಧ್ಯಮಯ ಚಟುವಟಿಕೆಗಳನ್ನು ನೋಡಬಹುದು. ಪಂಜಾಬ್ ನಲ್ಲಿ ಅತ್ಯಂತ ಜನಪ್ರಿಯವಾಗಿರುವ ಲೊಹ್ರಿಯನ್ನು ಪೊಹ್ ನ ಕೊನೆಯ ದಿನದಂದು ಆಚರಿಸಲಾಗುತ್ತದೆ. ಇತರ ಹಬ್ಬಗಳಾದ ಬಸಂತ ಪಂಚಮಿ, ಹೋಳಿ, ಬೈಸಾಕಿ ಮತ್ತು ಗುರುಪುರಬ್ ಲುಧಿಯಾನ ಪ್ರವಾಸೋದ್ಯಮದಲ್ಲಿ ನಿಜವಾಗಿಯೂ ಆಸಕ್ತಿ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ.

ಲುಧಿಯಾನ ತಲುಪುವುದು ಹೇಗೆ

ಲುಧಿಯಾನ ದೆಹಲಿಯಿಂದ ಸುಮಾರು 320 ಕಿ.ಮೀ. ದೂರದಲ್ಲಿದೆ. ರಸ್ತೆ ಮೂಲಕ ಪ್ರಯಾಣಿಸಿದರೆ 5 ಗಂಟೆಯಲ್ಲಿ ತಲುಪಬಹುದು. ದೇಶದ ವಿವಿಧ ಭಾಗಗಳಿಂದ ಈ ನಗರಕ್ಕೆ ಹಲವಾರು ರೈಲುಗಳು ಸಂಪರ್ಕ ಕಲ್ಪಿಸುತ್ತದೆ. ರಿಕ್ಷಾ ಮತ್ತು ಬಸ್ ಮೂಲಕ ನಗರದಲ್ಲಿ ಪ್ರಯಾಣಿಸುವುದು ತುಂಬಾ ಅನುಕೂಲಕರ.

ಲುಧಿಯಾನಾ ಪ್ರಸಿದ್ಧವಾಗಿದೆ

ಲುಧಿಯಾನಾ ಹವಾಮಾನ

ಉತ್ತಮ ಸಮಯ ಲುಧಿಯಾನಾ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲುಧಿಯಾನಾ

  • ರಸ್ತೆಯ ಮೂಲಕ
    ಪಂಜಾಬ್ ನ ವಿವಿಧ ನಗರಗಳಿಗೆ ಲುಧಿಯಾನದ ಸಂಪರ್ಕವಿದೆ ಮತ್ತು ನೆರೆಯ ರಾಜ್ಯಗಳಿಂದಲೂ ಬಸ್ ವ್ಯವಸ್ಥೆಯಿದೆ. ಅಮೃತಸರ-ದೆಹಲಿ ಗ್ರ್ಯಾಂಡ್ ಟ್ರಂಕ್ ರಸ್ತೆಯಲ್ಲಿರುವ ಲುಧಿಯಾನಕ್ಕೆ ಅಮೃತಸರ, ದೆಹಲಿ ಮತ್ತು ಚಂದೀಗಢ್ ನಿಂದ ಬಸ್ ಮೂಲಕ ಸುಲಭವಾಗಿ ಪ್ರಯಾಣಿಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಫ್ರಾಂಟಿಯರ್ ಮೇಲ್, ಜಮ್ಮು ತಾವಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ದೆಹಲಿ-ಅಮೃತಸರ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಲುಧಿಯಾನದಲ್ಲಿ ನಿಲುಗಡೆಯಿದೆ. ಲುಧಿಯಾನಕ್ಕೆ ಜಮ್ಮು, ಜಲಂಧರ್, ಅಮೃತಸರ, ಪಾಟಿಯಾಲ, ದೆಹಲಿ, ಮುಂಬಯಿ ಮತ್ತು ಕೊಲ್ಕತ್ತಾ ಸಹಿತ ವಿವಿಧ ನಗರಗಳಿಂದ ನಿತ್ಯ ಹಾಗೂ ವಾರಕ್ಕೊಮ್ಮೆ ರೈಲುಗಳಿವೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಹ್ನೆವಾಲ್ ವಿಮಾನ ನಿಲ್ದಾಣ(ಲುಧಿಯಾನ ವಿಮಾನ ನಿಲ್ದಾಣ) ನಗರದಿಂದ 12.3 ಕಿ.ಮೀ. ದೂರದಲ್ಲಿ ಜಿಟಿ ರಸ್ತೆಯಲ್ಲಿದೆ. ಏರ್ ಇಂಡಿಯಾ ಮತ್ತು ಇತರ ವಿಮಾನಯಾನ ಸಂಸ್ಥೆಗಳು ವಿಮಾನ ಸೇವೆ ನೀಡುವ ಕಾರಣ ದೆಹಲಿ ಹಾಗೂ ಭಾರತದ ಇತರ ನಗರಗಳಿಂದ ಲುಧಿಯಾನಗೆ ಅನುಕೂಲಕರವಾಗಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri