Search
  • Follow NativePlanet
Share
ಮುಖಪುಟ » ಸ್ಥಳಗಳು» ಲೇಪಾಕ್ಷಿ

ಲೇಪಾಕ್ಷಿ: ದೇವಸ್ಥಾನಗಳ ಹಳ್ಳಿ

19

ಲೇಪಾಕ್ಷಿ ಒಂದು ಧಾರ್ಮಿಕತೆಯ ಬೀಡಾಗಿದ್ದು, ಪ್ರಕಾಶಮಾನ ಪ್ರದೇಶವಾಗಿ ಗೋಚರಿಸುತ್ತದೆ. ದಕ್ಷಿಣದ ಭಾರತದ ಒಂದು ರಾಜ್ಯವಾದ ಆಂಧ್ರಪ್ರದೇಶದಲ್ಲಿ ಬರುವ ಈ ಸ್ಥಳ ಅನಂತಪುರ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಕರ್ನಾಟಕದ ಬೆಂಗಳೂರು ಮಹಾನಗರಿಯಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಆಂಧ್ರಪ್ರದೇಶದ ಹಿಂದುಪುರ ಪಟ್ಟಣದಿಂದ 15 ಕಿ.ಮೀ. ದೂರದಲ್ಲಿದೆ. ತುಂಬಾ ಚಿಕ್ಕ ಹಳ್ಳಿಯಾದರೂ ಹೇರಳ ಪ್ರಮಾಣದ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳವನ್ನು ಹೊಂದಿದೆ. ಸ್ಥಳೀಯರ ಪಾಲಿಗೆ ಇದು ಅತ್ಯಂತ ಪವಿತ್ರ ಸ್ಥಳ. ಈ ಪ್ರದೇಶವು ದಕ್ಷಿಣ ಭಾರತದಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿದೆ. ಇಲ್ಲಿ ಮೂರು ಪ್ರಮುಖ ದೇವಾಲಯಗಳು ಇವೆ. ಅವು ಶಿವ, ವಿಷ್ಣು ಹಾಗೂ ವೀರಭದ್ರನಿಗೆ ಮುಡಿಪಾಗಿವೆ.

ಈ ಪ್ರದೇಶದ ಇನ್ನೊಂದು ಆಕರ್ಷಣೆ ಅಂದರೆ ಅದು ಚಿಕ್ಕ ಗುಡ್ಡ. ಇದು ಆಮೆಯ ಬೆನ್ನಿನಂತೆ ಇದೆ. ಈ ಗುಡ್ಡಕ್ಕೆ ಕೂರ್ಮ ಶಿಲೆ ಅಂತಲೇ ಕರೆಯಲಾಗುತ್ತದೆ. ಈ ಗುಡ್ಡದ ಮೇಲೆ ಶ್ರೀರಾಮ, ರಘುನಾಥ, ವೀರಭದ್ರ, ಪಾಪನಾಥೇಶ್ವರ ಹಾಗೂ ದೇವಿ ದುರ್ಗಾ ಮಾತೆಯ ಮಂದಿರಗಳು ಇವೆ. ಈ ಎಲ್ಲಾ ದೇವಾಲಯಗಳೂ ಅತ್ಯಾಕರ್ಷಕ ಕರಕುಶಲ ಪ್ರೌಢಿಮೆಗೆ ಉದಾಹರಣೆಯಾಗಿ ನಿಂತಿವೆ. ಇದನ್ನು ವಿಶ್ವಕರ್ಮ ಬ್ರಾಹ್ಮಣರು ಪ್ರಚುರಪಡಿಸಿದ್ದಾರೆ. ಇವರು ದೇವಾಲಯದ ಗಟ್ಟಿ ಗೋಡೆಯಯನ್ನು ಸುಂದರ ಶಿಲ್ಪವಾಗಿ ಕೆತ್ತಿ ಸಿದ್ಧಪಡಿಸಿದ ಕರಕುಶಲಕರ್ಮಿಗಳು ಇವರಾಗಿದ್ದಾರೆ. ಈ ದೇವಾಲಯದ ವಿನ್ಯಾಸ ಹಾಗೂ ಮಾದರಿಯನ್ನು ಸಿದ್ಧಪಡಿಸುವಲ್ಲಿ  ಅತ್ಯಂತ ಜನಪ್ರಿಯ ವಿಶ್ವಕರ್ಮ ಜನಾಂಗದ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸಾಕಷ್ಟು ಸಹಕಾರ ನೀಡಿದ್ದಾನೆ ಎಂದು ಹಲವರು ನಂಬಿದ್ದಾರೆ. ಇದಲ್ಲದೇ ಈ ಸಂದರ್ಭದ ಜನಪ್ರಿಯ ಶಿಲ್ಪಗಳಾದ ಕಾಕೋಜು ಹಾಗೂ ಮೊರೋಜು ಕೂಡ ಇಲ್ಲಿನ ದೇವಾಲಯ ಗೋಡೆಯ ಮೇಲೆ ಶಿಲ್ಪಗಳನ್ನು ಸಿದ್ಧಪಡಿಸಲು ಸಹಕಾರ ನೀಡಿದ್ದಾರೆ ಎನ್ನಲಾಗುತ್ತದೆ.

ಈ ದೇವಾಲಯದ ಗೋಡೆಯ ಮೇಲೆ ಹಿಂದು ಧರ್ಮದ ಮಹಾಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತದ ಅನೇಕ ದೃಶ್ಯಗಳನ್ನು ಕೆತ್ತಲಾಗಿದೆ. ಅಚ್ಚರಿಯ ಸಂಗತಿಯೇನೆಂದರೆ, ಈ ದೇವಾಲಯಗಳಲ್ಲಿ ರೂಪುಗೊಂಡಿರುವ ಶಿಲ್ಪಗಳ ಕಲಾತ್ಮಕತೆಯನ್ನು ಆಧರಿಸಿಯೇ ಅತ್ಯಂತ ಜನಪ್ರಿಯ ಲೇಪಾಕ್ಷಿ ಸೀರೆಗಳನ್ನು ವಿನ್ಯಾಸಪಡಿಸಲಾಗಿದೆ. ಈ ದೇವಾಲಯಗಳಲ್ಲಿ ಸಾಕಷ್ಟು ವೈವಿಧ್ಯತೆಗಳು ಇವೆ. ಅಲ್ಲದೇ ಜನ ಅಪಾರವಾಗಿ ಇತ್ತ ಬರಲು ಇಲ್ಲಿ ವಿಶೇಷ ಆಕರ್ಷಣೆಗಳೂ ಇವೆ. ನೇತಾಡುವ ಕಂಬ, ಕಲ್ಲಿನ ಸರಪಣಿ, ದುರ್ಗಾಪಾದ, ವಾಸ್ತು ಪುರುಷ, ನರ್ತಿಸುತ್ತಿರುವ ಮಹಿಳೆ ಸೇರಿದಂತೆ ಹಲವಾರು ಆಕರ್ಷಣೆಗಳಿವೆ. ದೇವಾಲಯದ ಒಳ ಛಾವಣಿ ಸುಂದರ ಪೇಂಟಿಂಗ್‌ಗಳಿಂದ ತುಂಬಿವೆ. ಇದಕ್ಕೆ ನೈಸರ್ಗಿಕ ಬಣ್ಣವನ್ನು ಬಳಸಿರುವುದು ಇನ್ನೊಂದು ವಿಶೇಷ. ಇಲ್ಲಿನ ಮುಖ್ಯ ಆಕರ್ಷಣೆ ವೀರಭದ್ರ ದೇವಾಲಯ. ಇದು ದೇವ ವೀರಭದ್ರನಿಗೆ ಮುಡಿಪಾಗಿದೆ. ಈ ದೇವರ ದರ್ಶನಕ್ಕೆ ದಕ್ಷಿಣ ಭಾರತದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಾರೆ.

ವರ್ಷದ ಎಲ್ಲಾ ಅವಧಿಯಲ್ಲೂ ಇಲ್ಲಿನ ವಾತಾವರಣ ಸಾಮಾನ್ಯವಾಗಿ ಇರುತ್ತದೆ. ಬೇಸಿಗೆಯಲ್ಲಿ ಮಾತ್ರ ವಿಪರೀತ ಸೆಖೆ ಇರುತ್ತದೆ. ಲೇಪಾಕ್ಷಿಗೆ ತಲುಪಲು ಇರುವ ಉತ್ತಮ ಸಂಪರ್ಕ ಕೊಂಡಿ ರಸ್ತೆ ಮಾರ್ಗ. ಈ ಸ್ಥಳ ಯಾವುದೇ ರೈಲು ಅಥವಾ ವಿಮಾನ ನಿಲ್ದಾಣವನ್ನು ಹೊಂದಿಲ್ಲ. ಇಲ್ಲಿನ ಅತ್ಯಾಕರ್ಷಕ ವಾಸ್ತುಶಿಲ್ಪ ಹಾಗೂ ಮನೆಗಳು ಸದಾ ಆಗಮಿಸಿದ ಪ್ರವಾಸಿಗರ ಮನದಲ್ಲಿ ಉಳಿದುಕೊಳ್ಳುತ್ತವೆ. ಸ್ಥಳದಿಂದ ತೆರಳಿ ವರ್ಷಗಳವರೆಗೂ ಇದರ ನೆನಪು ಮನದಲ್ಲಿ ಹಚ್ಚ ಹಸಿರಾಗಿ ಉಳಿಯುತ್ತದೆ. ಇದು ಈ ಪ್ರದೇಶದ ವೈಶಿಷ್ಟ್ಯ.

ಲೇಪಾಕ್ಷಿ ಪ್ರಸಿದ್ಧವಾಗಿದೆ

ಲೇಪಾಕ್ಷಿ ಹವಾಮಾನ

ಉತ್ತಮ ಸಮಯ ಲೇಪಾಕ್ಷಿ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲೇಪಾಕ್ಷಿ

  • ರಸ್ತೆಯ ಮೂಲಕ
    ಲೇಪಾಕ್ಷಿ ತಲುಪಲು ಇರುವ ಉತ್ತಮವಾದುದು ರಸ್ತೆ ಮಾರ್ಗ. ರಾಷ್ಟ್ರೀಯ ಹೆದ್ದಾರಿ 7 ಈ ಮೂಲಕವೇ ಹಾದು ಹೋಗಿದೆ. ಇದು ಬೆಂಗಳೂರಿನಿಂದ ಆಗಮಿಸುವ ಮಾರ್ಗ. ಅನಂತಪುರಂನಿಂದ ಕೇವಲ 15 ಕಿ.ಮೀ. ದೂರದಲ್ಲಿ ಈ ಊರಿದೆ. ಹೈದ್ರಾಬಾದ್‌ನಿಂದ 476 ಕಿ.ಮೀ. ಹಾಗೂ ಬೆಂಗಳೂರಿನಿಂದ ಕೇವಲ 120 ಕಿ.ಮೀ. ದೂರದಲ್ಲಿದೆ. ಈ ಎಲ್ಲಾ ಕಡೆಗಳಿಂದ ಲೇಪಾಕ್ಷಿಗೆ ಹೇರಳ ಬಸ್‌ ಸಂಪರ್ಕ ಇದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಲೇಪಾಕ್ಷಿಗೆ ಸ್ವಂತ ರೈಲು ನಿಲ್ದಾಣ ಇಲ್ಲ. ಅನಂತಪುರಂ ತಲುಪಿ ಅಲ್ಲಿಂದ ಲೇಪಾಕ್ಷಿಗೆ ಅನ್ಯ ವಾಹನಗಳ ಮೂಲಕ ಬರಬಹುದು. ಅನಂತಪುರಂ ಸಾಕಷ್ಟು ಭಾಗಗಳಿಂದ ತಲುಪುವ ರೈಲುಗಳ ಸಂಪರ್ಕ ಹೊಂದಿದೆ. ಇಲ್ಲಿಗೆ ಬೆಂಗಳೂರು, ಹೈದ್ರಾಬಾದ್‌, ಚೆನ್ನೈ, ದಿಲ್ಲಿ ಸೇರಿದಂತೆ ರಾಷ್ಟ್ರದ ಹಲವೆಡೆಯಿಂದ ರೈಲುಗಳು ಆಗಮಿಸುತ್ತವೆ. ಅನಂತಪುರಂನಿಂದ ಟ್ಯಾಕ್ಸಿ ಅಥವಾ ಬಸ್‌ ಮೂಲಕ ಲೇಪಾಕ್ಷಿ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲೇಪಾಕ್ಷಿಗೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ ಹೈದ್ರಾಬಾದ್‌ ಆಗಿದೆ. ಇದು ಡೊಮೆಸ್ಟಿಕ್‌ ಹಾಗೂ ಅಂತಾರಾಷ್ಟ್ರೀಯ ವಿಮಾನಗಳ ಆಗಮನ, ನಿರ್ಗಮನ ಸೌಲಭ್ಯ ಹೊಂದಿದೆ. ದೇಶದ ಹಾಗೂ ಅನ್ಯ ರಾಷ್ಟ್ರದ ಹಲವು ಭಾಗಗಳಿಂದ ಇಲ್ಲಿಗೆ ವಿಮಾನ ಸಂಪರ್ಕ ಉತ್ತಮವಾಗಿದೆ. ವಿಮಾನ ನಿಲ್ದಾಣಕ್ಕೆ ತಲುಪಿದ ಮೇಲೆ ಅಲ್ಲಿಂದ ಟ್ಯಾಕ್ಸಿ ಪಡೆದು ಲೇಪಾಕ್ಷಿ ತಲುಪಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed

Near by City