Search
  • Follow NativePlanet
Share

ಲೇಹ್: ಮಧುರ ಮನೋಹರ ವಿಹಾರಿ ತಾಣ

48

ಲೇಹ್ ನಗರ ಕಾರಾಕೋರಂ ಮತ್ತು ಹಿಮಾಲಯ ಪರ್ವತಗಳ ಸಾಲಿನ ನಡುವೆ ಇಂಡಸ್ ನದಿಯ ದಂಡೆಯ ಮೇಲಿದೆ. ವರ್ಷಪೂರ್ತಿ ಇಲ್ಲಿನ ಸೌಂದರ್ಯ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ನಗರದ ಬಹುತೇಕ ಭಾಗ 16 ಮತ್ತು 17 ನೇ ಶತಮಾನದ ಮಸೀದಿ ಮತ್ತು ಭೌದ್ದ ಸ್ಮಾರಕಗಳಿಂದ ತುಂಬಿಕೊಂಡಿದೆ. ನಾಮಗ್ಯಾಲ್ ಮನೆತನದ ರಾಜಾ ಸಿಂಗೆ ನಾಮಗ್ಯಾಲ್ ಅವರ ಪುರಾತನ ಅರಮನೆಯೊಂದಿದ್ದು ಮಧ್ಯಯುಗದ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.

ಲೇಹ್ ನಗರದ ಬಹುತೇಕ ಜನಸಂಖ್ಯೆ ಬೌದ್ದ ಭಿಕ್ಷುಗಳು, ಹಿಂದೂ ಮತ್ತು ಲಾಮಾಗಳದ್ದು. ಶಾಂತಿ ಸ್ತೂಪ ಮತ್ತು ಶಂಕರ ಗೊಂಪಗಳಂತಹ ಅಧ್ಯಯನ ಕೇಂದ್ರಗಳು ಸ್ಥಳದ ಹೊಳಪನ್ನು ಇನ್ನಷ್ಟು ಹೆಚ್ಚಿಸಿವೆ. ಹಲವಾರು ವರ್ಷಗಳಿಂದ ಲೇಹ್ ನಗರವು ಮಧ್ಯ ಏಷಿಯಾದ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿ ಬೆಳೆದಿದ್ದು ಸ್ವಂತ ಉದ್ಯೋಗಿಗಗಳಿಗೆ ಮತ್ತು ಉದ್ಯಮಿಗಳಿಗೆ ಬಹಳ ಅವಕಾಶ ದೊರಕಿಸಿಕೊಟ್ಟಿದೆ. ಇಲ್ಲಿ ದೊರಕುವ ಟಿಬೇಟಿಯನ್ ಕಲಾಕೃತಿಗಳು, ಚಳಿಗಾಲದ ಉಣ್ಣೆಯ ಬಟ್ಟೆಗಳು, ಕೈ ಮತ್ತು ಮಗ್ಗದಲ್ಲಿ ನೇಯ್ದ ಕಾರ್ಪೇಟುಗಳನ್ನು ಪ್ರವಾಸಿಗರು ಹೆಚ್ಚು ಇಷ್ಟ ಪಟ್ಟು ಕೊಳ್ಳುತ್ತಾರೆ. ಹಿಮಾವೃತ ಹಿಮಾಲಯ ಪರ್ವತಗಳು ಪ್ರದೇಶದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ಸಾಹಸದಲ್ಲಿ ಮನಸ್ಸು ಹಾಗೂ ಪ್ರೀತಿ ಉಳ್ಳವರು ಚಾರಣದ ಮೂಲಕ ಹಿಮಾಲಯ ವನ್ನು ಏರುತ್ತ ಸೌಂದರ್ಯವನ್ನು ಸವಿಯಬಹುದು.

ಪುರಾತನ ಇತಿಹಾಸವುಳ್ಳ ಮೊಘಲರ ಕಾಲದಲ್ಲಿ ಕಟ್ಟಿದ ಜಾಮಾ ಮಸೀದಿ, ಶೇ ಅರಮನೆ ಅಥವಾ ಲಡಾಖಿ ದೊರೆಗಳ ಬೇಸಿಗೆ ಅರಮನೆ, ಬೌದ್ದ ಮೂರ್ತಿಗಳು ಹೀಗೆ ಹತ್ತಾರು ಆಕರ್ಷಣೀಯ ತಾಣಗಳನ್ನು ಇಲ್ಲಿ ನೋಡಬಹುದಾಗಿದೆ.

ಲೇಹ್ ನ ವಾತಾವರಣ ಭವಿಷ್ಯ ನುಡಿಯವಂತದ್ದಲ್ಲ. ಹೀಗಾಗಿ ಪ್ರವಾಸಿಗರು ವಾತಾವರಣದ ಏರಿಳಿತವನ್ನು ತಡೆಯೋದಕ್ಕೆ ಉಣ್ಣೆಯ ಬಟ್ಟೆಗಳನ್ನು ಇಟ್ಟುಕೊಂಡಿರುವುದು ಒಳ್ಳೆಯದು.

ಲೇಹ್ ಪ್ರಸಿದ್ಧವಾಗಿದೆ

ಲೇಹ್ ಹವಾಮಾನ

ಉತ್ತಮ ಸಮಯ ಲೇಹ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಲೇಹ್

  • ರಸ್ತೆಯ ಮೂಲಕ
    ಲೇಹ್ ನಿಂದ 700 ಕಿಲೋ ದೂರವಿರುವ ಶ್ರೀನಗರಕ್ಕೆ ಜಮ್ಮು ಕಾಶ್ಮೀರ ಸಾರಿಗೆ ಕಾರ್ಪೋರೇಷನ್ ವತಿಯಿಂದ ನಿರಂತರ ಬಸ್ ಸೌಲಭ್ಯವಿದೆ. ಮನಾಲಿಯಿಂದ ಲೇಹ್ ವರೆಗೆ ಹಿಮಾಚಲ ಪ್ರದೇಶ ಸಾರಿಗೆ ಇಲಾಖೆಯಿಂದಲೂ ಬಸ್ ಸೌಲಭ್ಯಗಳಿವೆ. ಲೇಹ್ ನಿಂದ ಮನಾಲಿಯವರೆಗೆ ರಸ್ತೆಯ ಮೂಲಕ ಪ್ರಯಾಣಿಸಲು 20 ತಾಸು ಬೇಕಾಗುತ್ತದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಲೇಹ್ ನಿಂದ 734 ಕಿಲೋ ಮೀಟರ್ ದೂರವಿರುವ ಜಮ್ಮು ರೈಲ್ವೇ ನಿಲ್ದಾಣ ಹತ್ತಿರದ ರೈಲು ಸಂಪರ್ಕ. ಸುಮಾರು 1000 ರೂಪಾಯಿ ಖರ್ಚಿನಲ್ಲಿ ಜಮ್ಮುವಿನಿಂದ ಶ್ರೀನಗರ ಮಾರ್ಗವಾಗಿ ಲೇಹ್ ತಲುಪಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಲೇಹ್ ವಿಮಾನ ನಿಲ್ದಾಣದಿಂದ ಜಮ್ಮು, ದೆಹಲಿ, ಶ್ರೀನಗರಗಳಿಗೆ ನಿರಂತರ ವಿಮಾನ ಸಂಪರ್ಕವಿದೆ. ದೆಹಲಿ ವಿಮಾನ ನಿಲ್ದಾಣದಿಂದ ಭಾರತದ ಉಳಿದ ನಗರಗಳಿಗೆ ಸಂಪರ್ಕವಿದೆ. ನವದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಲೇಹ್ ಗೆ ಕೊಂಡಿಯಿದೆ. ಲೇಹ್ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಸೌಲಭ್ಯವಿವೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat