Search
  • Follow NativePlanet
Share
ಮುಖಪುಟ » ಸ್ಥಳಗಳು » ಲಡಾಖ್ » ಹವಾಮಾನ

ಲಡಾಖ್ ಹವಾಮಾನ

ಬೇಸಿಗೆಯಲ್ಲಿ ವಾತಾವರಣವು ಹಿತಮಯವಾಗಿರುವುದರಿಂದ ಲಡಾಖ್ ಭೇಟಿಗೆ ಬೇಸಿಗೆಯೆ ಉತ್ತಮ ಸಮಯ.

ಬೇಸಿಗೆಗಾಲ

(ಜೂನ್-ಸೆಪ್ಟಂಬರ್): ಲಡಾಖ್ ನಲ್ಲಿ ಜೂನ್ ನಿಂದ ಪ್ರಾರಂಭವಾಗುವ ಬೇಸಿಗೆ ಸೆಪ್ಟಂಬರ್ ತನಕ ಇರುತ್ತದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಇಲ್ಲಿ ದಾಖಲಾಗುವ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 C ಹಾಗು 20 C

ಮಳೆಗಾಲ

ಲಡಾಖ್ ಮಳೆಗಾಲದ ಸಮಯದಲ್ಲಿ ಸರಾಸರಿ 90 mm ಗಳಷ್ಟು ಮಳೆಯನ್ನು ಪಡೆಯುತ್ತದೆ. ಆದರೆ ಗಮನಿಸಬೇಕಾದ ಅಂಶವೆಂದರೆ ಈ ಸಂದರ್ಭದಲ್ಲಿ ಇಲ್ಲಿಗೆ ತಲುಪಲು ಇರುವ ಪಾಸ್(ಮಾರ್ಗ)ಗಳು ಭೂಕುಸಿತ ಉಂಟಾಗುವುದರಿಂದ ಮುಚ್ಚಲ್ಪಟ್ಟಿರುತ್ತವೆ.

ಚಳಿಗಾಲ

(ಅಕ್ಟೋಬರ್-ಮೇ): ಅಕ್ಟೋಬರ್ ನಲ್ಲಿ ಪ್ರಾರಂಭವಾಗುವ ಚಳಿಗಾಲ ಮೇ ತನಕ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಲಡಾಖ್ ಅತಿರೇಕವಾದ ಹಾಗು ಮೈಕೊರೆಯುವಂತಹ ಚಳಿಯನ್ನು ಅನುಭವಿಸುತ್ತದೆ. ಕನಿಷ್ಠ ತಾಪಮಾನವು -28 C ಗಳಷ್ಟು ಕುಸಿಯುತ್ತದೆ. ಒಮ್ಮೊಮ್ಮೆ ಹಿಮಪಾತವೂ ಆಗುವುದುಂಟು. ಒಟ್ಟಾರೆಯಾಗಿ ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಅಷ್ಟೊಂದು ಸಮಂಜಸವಲ್ಲ.