Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಶಿನಗರ » ಹವಾಮಾನ

ಕುಶಿನಗರ ಹವಾಮಾನ

ಕುಶಿ ನಗರಕ್ಕೆ ಪ್ರವಾಸ ಕೈಗೊಳ್ಳಲು ಸೂಕ್ತ ಸಮಯ ನವೆಂಬರ್ ನಿಂದ ಮಾರ್ಚ್. ಆದಾಗ್ಯೂ ಕುಶಿನಗರ ಬೌದ್ಧ ಯಾತ್ರಾ ಸ್ಥಳವಾದುದರಿಂದ ಪ್ರಪಂಚದಾದ್ಯಂತ ಎಲ್ಲಾ ಸಮಯದಲ್ಲೂ ಪ್ರವಾಸಿಗರು ಇಲ್ಲಿ ಬರುತ್ತಾರೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ಇಲ್ಲಿ ಬೇಸಿಗೆ ಕಾಲ. ಉಷ್ಣಾಂಶ 20 ರಿಂದ 40 ಡಿಗ್ರಿಯಷ್ಟಿರುತ್ತದೆ. ಮೇ ತಿಂಗಳು ಇಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುತ್ತದೆ.

ಮಳೆಗಾಲ

ಜುಲೈ ನಿಂದ ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಈ ಸಮಯದಲ್ಲಿ ಕುಶಿನಗರದಲ್ಲಿ ಅತಿ ಹೆಚ್ಚು ಮಳೆ ಸುರಿಯುತ್ತದೆ. ವಾತಾವರಣ ಮೋಡ ಕವಿದು ಮಳೆಯಿಂದ ಒದ್ದೆಯಾಗಿರುತ್ತದೆ.

ಚಳಿಗಾಲ

ಇಲ್ಲಿ ನವೆಂಬರ್ ನಿಂದ ಫೆಬ್ರವರಿ ಚಳಿಗಾಲ. ಈ ಸಮಯದಲ್ಲಿ ವಾತಾವರಣ ಹದವಾಗಿ ಆಹ್ಲಾದಕರವಾಗಿರುತ್ತದೆ. ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ನಿಂದ 20 ಡಿಗ್ರಿ ಸೆಲ್ಸಿಯಸ್ ಅಷ್ಟು ಇರುತ್ತದೆ.