Search
  • Follow NativePlanet
Share
ಮುಖಪುಟ » ಸ್ಥಳಗಳು » ಕುರುಕ್ಷೇತ್ರ » ಆಕರ್ಷಣೆಗಳು
  • 01ಬ್ರಹ್ಮ ಸರೋವರ್

    ಬ್ರಹ್ಮ ಸರೋವರ್ ಕಲ್ಯಾಣಿಯು ಥಾನೇಶ್ವರದಲ್ಲಿ ನೆಲೆಗೊಂಡಿದೆ. ಪುರಾಣದ ಪ್ರಕಾರ ಬ್ರಹ್ಮದೇವನು ಒಂದು ದೊಡ್ಡ ಯಾಗವನ್ನು ಮಾಡುವ ಸಲುವಾಗಿ ಕುರುಕ್ಷೇತ್ರವನ್ನು ನಿರ್ಮಿಸಿದನಂತೆ. ಈ ಕಲ್ಯಾಣಿಯಲ್ಲಿ ಈಶ್ವರನ ಮೂರ್ತಿಯಿದೆ. ಒಂದು ಸೇತುವೆಯ ಮೂಲಕ ಮೂರ್ತಿಯ ಬಳಿಗೆ ನಾವು ತಲುಪಬಹುದು. ಪ್ರತಿ ವರ್ಷ ನವೆಂಬರ್ ಕಡೆಯ ವಾರ ಅಥವಾ...

    + ಹೆಚ್ಚಿಗೆ ಓದಿ
  • 02ಸನ್ನಿಹಿತ್ ಸರೋವರ್

    ಸನ್ನಿಹಿತ್ ಸರೋವರ್

    ಸನ್ನಿಹಿತ್ ಸರೋವರವು ಪವಿತ್ರವಾದ ಸಪ್ತಸರಸ್ವತಿಯರ ಸಂಗಮ ಸ್ಥಾನವೆಂದು ಪರಿಗಣಿಸಲ್ಪಟ್ಟಿದೆ. " ಸನ್ನಿಹಿತ್" ಎಂಬ ಪದವೇ ಸಂಗ್ರಹಿಸು ಎಂಬ ಅರ್ಥವನ್ನು ಸೂಚಿಸುತ್ತದೆ. ಇದರ ಅರ್ಥವೇ ಸೂಚಿಸುವಂತೆ ಈ ಸರೋವರವು ಅಮಾವಸ್ಯೆ ಮತ್ತು ಸೂರ್ಯಗ್ರಹಣಗಳಂದು ಎಲ್ಲಾ ಪವಿತ್ರ ನದಿ ತೀರ್ಥಗಳಿಂದ ನೀರನ್ನು ಪಡೆಯುತ್ತದೆಯಂತೆ. ವಿಶೇಷವಾಗಿ ಸಪ್ತ...

    + ಹೆಚ್ಚಿಗೆ ಓದಿ
  • 03ಕೃಷ್ಣ ವಸ್ತು ಸಂಗ್ರಹಾಲಯ

    ಕೃಷ್ಣ ವಸ್ತು ಸಂಗ್ರಹಾಲಯ

    ಶ್ರೀ ಕೃಷ್ಣನ ಸುತ್ತಲು ಮಹಾಭಾರತ ಯುದ್ಧವು ಸುತ್ತುತ್ತದೆ. ಈತನು ಮಹಾಭಾರತದ ಸೂತ್ರಧಾರಿ. ಎಲ್ಲಾ ಪಾತ್ರಗಳನ್ನು ತನ್ನಿಷ್ಟಕ್ಕೆ ತಕ್ಕಂತೆ ಕುಣಿಸುವ ಈ ಕಪಟ ನಾಟಕ ಸೂತ್ರಧಾರಿಗಾಗಿ ನಿರ್ಮಾಣಗೊಂಡಿದೆ ಈ ವಸ್ತು ಸಂಗ್ರಹಾಲಯ. ಮಹಾಯೋಧರು ಮತ್ತು ತಾಪಸಿಗಳಾದ ಕರ್ಣ, ದ್ರೋಣಾಚಾರ್ಯ ಮತ್ತು ಭೀಷ್ಮ ಪಿತಾಮಹರಿಗೆ ಶ್ರೀಕೃಷ್ಣನ ಶಕ್ತಿಯ...

    + ಹೆಚ್ಚಿಗೆ ಓದಿ
  • 04ಜ್ಯೋತಿಸರ್

    ಜ್ಯೋತಿಸರ್

    ಬಹುಶಃ ಹಿಂದೂಗಳ ಅತ್ಯಂತ ಪವಿತ್ರ ಶ್ರದ್ಧಾ ಕೇಂದ್ರವಾಗಿ ಇದನ್ನು ಗುರುತಿಸಬಹುದು. ಜ್ಯೋತಿಸರದಲ್ಲಿಯೇ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನಂತೆ. ಇದು ಮಹಾಭಾರತ ಯುದ್ಧದ ಆರಂಭ ಸ್ಥಳವಂತೆ, ಇದೇ ಸ್ಥಳದಲ್ಲಿ ಯುದ್ಧವನ್ನು ಆರಂಭಿಸುವ ರಣಭೇರಿಗಳನ್ನು ಬಾರಿಸಲಾಗಿತ್ತಂತೆ.

    ನಂಬಿಕೆಗಳ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 05ಕುರುಕ್ಷೇತ್ರ ಪನೋರಮಾ ಮತ್ತು ಸೈನ್ಸ್ ಸೆಂಟರ್

    ಕುರುಕ್ಷೇತ್ರ ಪನೋರಮಾ ಮತ್ತು ಸೈನ್ಸ್ ಸೆಂಟರ್

    ಈ ಕೇಂದ್ರವು ಶ್ರೀ ಕೃಷ್ಣ ವಸ್ತು ಸಂಗ್ರಹಾಲಯದ ಒಳಭಾಗದಲ್ಲಿ ನೆಲೆಗೊಂಡಿದೆ. ಇದರ ನೆಲೆಮಹಡಿಯು ಇಂಟರ್ ಆಕ್ಟಿವ್ ಸೈನ್ಸ್ ಎಕ್ಸಿಬಿಷನ್ ಅನ್ನು ಹೊಂದಿದ್ದರೆ, ಮೊದಲನೆ ಮಹಡಿಯಲ್ಲಿ ಮಹಾಭಾರತ ಯುದ್ಧದ ನೈಜ ಅನುಭವವನ್ನು ನೀಡುವ ವಿಶ್ವ ದರ್ಜೆಯ ಪನೋರಮಾವನ್ನು ನಾವು ನೋಡಬಹುದು. ಇವುಗಳ ಬಗ್ಗೆ ಇಲ್ಲಿ ವೈಙ್ಞಾನಿಕ ವಿವರಣೆಗಳನ್ನು ಸಹ...

    + ಹೆಚ್ಚಿಗೆ ಓದಿ
  • 06ಕಲ್ಪನಾ ಚಾವ್ಲಾ ತಾರಾಲಯ

    ಕಲ್ಪನಾ ಚಾವ್ಲಾ ತಾರಾಲಯ

    ಕಲ್ಪನಾ ಚಾವ್ಲಾ ಭಾರತದ ಹೆಮ್ಮೆಯ ಪುತ್ರಿ. ಈಕೆಯು ತನ್ನ ಬಾಹ್ಯಾಕಾಶಯಾನದಿಂದಾಗಿ ದೇಶಕ್ಕೆ ಹೆಮ್ಮೆಯನ್ನು ತಂದು ಕೊಟ್ಟಾಕೆ. ಈಕೆಯು ಕೊಲಂಬಿಯಾ ಬಾಹ್ಯಾಕಾಶ ದುರಂತದಲ್ಲಿ ಮಡಿದ ನಂತರ, ಆಕೆಯ ನೆನಪಿಗಾಗಿ ಹರಿಯಾಣ ರಾಜ್ಯ ಸರ್ಕಾರವು ಒಂದು ತಾರಾಲಯವನ್ನು ನಿರ್ಮಿಸಿದ್ದಾರೆ. ಈ ತಾರಾಲಯವು ಕಲ್ಪನಾ ಚಾವ್ಲಾರ ಬಾಹ್ಯಾಕಾಶ ಯಾತ್ರೆಗಳ...

    + ಹೆಚ್ಚಿಗೆ ಓದಿ
  • 07ಕೆಸ್ಸೆಲ್ ಮಾಲ್

    ಕೆಸ್ಸೆಲ್ ಮಾಲ್

    ಕೆಸ್ಸೆಲ್ ಮಾಲ್ ಕುರುಕ್ಷೇತ್ರದ ಆಧುನಿಕ ಮಾಲ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದು ಸುಂದರವಾದ ಮತ್ತು ಪ್ರಶಾಂತವಾದ ವಾತಾವರಣದಲ್ಲಿ ನೆಲೆಗೊಂಡಿದೆ. 1.00.000 ಚದರಿ ಅಡಿ ಜಾಗದಲ್ಲಿ ನೆಲೆಗೊಂಡಿರುವ  ಈ ಮಾಲ್ ಅಂಬಾಲಾ, ಕರ್ನಾಲ್ ಮತ್ತು ಯಮುನಾನಗರಗಳು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಕುರುಕ್ಷೇತ್ರದ ಹೊರತಾಗಿ ಇದು...

    + ಹೆಚ್ಚಿಗೆ ಓದಿ
  • 08ಧ್ವನಿ ಮತ್ತು ಬೆಳಕಿನ ಪ್ರದರ್ಶನ

    ಧ್ವನಿ ಮತ್ತು ಬೆಳಕಿನ ಪ್ರದರ್ಶನ

    ಹರಿಯಾಣ ರಾಜ್ಯ ಸರ್ಕಾರವು ಕುರುಕ್ಷೇತ್ರ ಪ್ರಾಂತ್ಯದಲ್ಲಿ ಹಲವಾರು ಧ್ವನಿ ಮತ್ತು ಬೆಳಕಿನ ಪ್ರದರ್ಶನಗಳನ್ನು ನಡೆಸುತ್ತದೆ. ಇವು ಆ ಪ್ರವಾಸಿ ತಾಣಗಳ ಮಹತ್ವವನ್ನು ಸಾರಿ ಹೇಳುತ್ತವೆ. ಶ್ರೀ ಕೃಷ್ಣ ವಸ್ತು ಸಂಗ್ರಹಾಲಯ ಮತ್ತು ಜ್ಯೋತಿಸರದಲ್ಲಿ ಗೀತಾ ಗ್ಯಾನ್ ಎಂಬ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ನಂಬಿಕೆಗಳ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 09ಭೀಷ್ಮ ಕುಂಡ್

    ಭೀಷ್ಮ ಕುಂಡ್

    ಭೀಷ್ಮ ಕುಂಡ್ ಥಾನೇಶ್ವರದಲ್ಲಿರುವ ನರ್ಕತರಿಯಲ್ಲಿ ನೆಲೆಗೊಂಡಿದೆ. ಭೀಷ್ಮ ಪಿತಾಮಹನು ಕೌರವ ಮತ್ತು ಪಾಂಡವರಿಬ್ಬರನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಬೆಳೆಸಿದ ಮಹಾನುಭಾವ. ಉಪ್ಪಿನ ಋಣಕ್ಕಾಗಿ ಈತ ಕೌರವರ ಕಡೆ ಸೇನಾಧಿಪತಿಯಾಗಿ ಮಹಾಭಾರತ ಯುದ್ಧದಲ್ಲಿ ಪಾಲ್ಗೊಂಡನು.

    ದಂತಕತೆಗಳ ಪ್ರಕಾರ ಈತ ಇಚ್ಛಾ ಮರಣವನ್ನು ಪಡೆಯಲು...

    + ಹೆಚ್ಚಿಗೆ ಓದಿ
  • 10ದರೋಹರ್

    ದರೋಹರ್

    ದರೋಹರ್ ಹರಿಯಾಣ ವಸ್ತು ಸಂಗ್ರಹಾಲಯವು ಹರ್ಯಾಣವಿ ಜನಪದ ಸಂಸ್ಕೃತಿ ಮತ್ತು ಪರಂಪರೆಯ ಕೇಂದ್ರದ ಆಡಳಿತಕ್ಕೆ ಒಳಪಟ್ಟಿದೆ. ಈ ಕೇಂದ್ರವು ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇಂದಿನವರೆಗು ಈ ಕೇಂದ್ರಕ್ಕೆ ಜರ್ಮನಿ, ಅಮೆರಿಕಾ, ಆಸ್ಟ್ರೇಲಿಯಾ, ನಾರ್ವೆ, ರಷ್ಯಾ, ಚಿಲಿ, ಮಲೇಶಿಯಾ, ಮಾರಿಷಸ್,...

    + ಹೆಚ್ಚಿಗೆ ಓದಿ
  • 11ಸರಸ್ವತಿ ವನ್ಯಧಾಮ

    ಸರಸ್ವತಿ ವನ್ಯಧಾಮ

    ಸರಸ್ವತಿ ವನ್ಯಧಾಮವು ಹೆಸರೇ ಸೂಚಿಸುವಂತೆ ಒಂದು ದೊಡ್ಡ ಮೀಸಲು ಅರಣ್ಯ ಪ್ರದೇಶವಾಗಿದೆ. ಈ ಕಾಡು ತನ್ನಲ್ಲಿರುವ ವಿಪುಲ ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಗಮನ ಸೆಳೆಯುತ್ತಿದೆ. ಇಲ್ಲಿ ದೇಶೀಯ ಮತ್ತು ವಿದೇಶಿಯ ಹಕ್ಕಿಗಳನ್ನು ಅಪಾರ ಸಂಖ್ಯೆಯಲ್ಲಿ ನಾವು ಕಾಣಬಹುದು. ಈ ವನ್ಯಧಾಮವು ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದ್ದು,...

    + ಹೆಚ್ಚಿಗೆ ಓದಿ
  • 12ಶೇಖ್ ಚೆಹ್ಲಿ ಕಾ ಮಕ್ಬರ

    ಶೇಖ್ ಚೆಹ್ಲಿ ಕಾ ಮಕ್ಬರವನ್ನು ಘನ ವಿದ್ವಾಂಸ, ಪ್ರಸಿದ್ಧ ಸೂಫಿ ಸಂತ ಮತ್ತು ಧಾರ್ಮಿಕ ಗುರುವಾದ ದಾರಾ ಶಿಖೋಹ್‍ನ ಸಮಾಧಿ. ಮೊಘಲ್ ಚಕ್ರವರ್ತಿ ಶಹ ಜಹಾನ್ ಈತನ ಕಟ್ಟಾನುಯಾಯಿ ಮತ್ತು ನಿಷ್ಟಾವಂತ ಭಕ್ತನಾಗಿದ್ದ.

    ಶೇಖ್ ಚೆಹ್ಲಿಯ ಗೋರಿಯನ್ನು ಕುರುಕ್ಷೇತ್ರದ ಹೊರಭಾಗದಲ್ಲಿ ನಿರ್ಮಿಸಲಾಗಿದೆ. ಇದನ್ನು ಮಾಸಲು ಹಳದಿ...

    + ಹೆಚ್ಚಿಗೆ ಓದಿ
  • 13ಸ್ಥಾನೇಶ್ವರ್ ಮಹಾದೇವ್

    ಸ್ಥಾನೇಶ್ವರ್ ಮಹಾದೇವ್

    ಮಹಾದೇವ್ ಶಿವನ ಮತ್ತೊಂದು ಹೆಸರು. ಸ್ಥಾನೇಶ್ವರ್ ಮಹಾದೇವ್ ದೇವಾಲಯದಲ್ಲಿ ಒಂದು ಲಿಂಗವಿದೆ. ಕುರುಕ್ಷೇತ್ರದ ಥಾನೇಶ್ವರದಲ್ಲಿರುವ ಈ ದೇವಾಲಯವು ಪಾಂಡವರ ಕಾಲದ್ದು ಎಂದು ಹೇಳಲಾಗುತ್ತದೆ. ಮಹಾಭಾರತ ಯುದ್ಧಕ್ಕಿಂತ ಮೊದಲು ಪಾಂಡವರು ಕೌರವರ ಮೇಲೆ ಯುದ್ಧದಲ್ಲಿ ಜಯಸಿಗಲೆಂದು ಇಲ್ಲಿನ ದೇವರನ್ನು ಪ್ರಾರ್ಥಿಸಿದ್ದರು ಮತ್ತು ಅದಕ್ಕಾಗಿ...

    + ಹೆಚ್ಚಿಗೆ ಓದಿ
  • 14ನಾಭಿ ಕಮಲ್

    ನಾಭಿ ಕಮಲ್

    ನಾಭಿ ಎಂದರೆ ಹೊಕ್ಕಳು, ಕಮಲ ಎಂದರೆ ತಾವರೆ ನಾಭಿ ಕಮಲ್ ಎಂಬ ಹೆಸರಿಗೆ ತಾರ್ಕಿಕವಾಗಿ ಯಾವುದೇ ಅರ್ಥವಿಲ್ಲ. ಆದರೆ ಆಧ್ಯಾತ್ಮಿಕವಾಗಿ ಇದು ಬ್ರಹ್ಮನ ಹುಟ್ಟನ್ನು ಸಾರುತ್ತವೆ. ಪುರಾಣಗಳ ಪ್ರಕಾರ ಬ್ರಹ್ಮನು ವಿಷ್ಣುವಿನ ನಾಭಿಯಲ್ಲಿ ಬೆಳೆಯುವ ಕಮಲದಿಂದ ಜನಿಸಿದನಂತೆ.

    ಕುರುಕ್ಷೇತ್ರದಲ್ಲಿರುವ ನಾಭಿ ಕಮಲವು ಬ್ರಹ್ಮನ...

    + ಹೆಚ್ಚಿಗೆ ಓದಿ
  • 15ವಾಲ್ಮೀಕಿ ಆಶ್ರಮ

    ವಾಲ್ಮೀಕಿ ಆಶ್ರಮ

    ವಾಲ್ಮೀಕಿ ಆಶ್ರಮವು ರಾಮಾಯಣವನ್ನು ರಚಿಸಿದ ವಾಲ್ಮೀಕಿಯವರಿಗೆ ಸೇರಿದ ಆಶ್ರಮವಾಗಿದೆ. ಇದರ ಇಡೀ ಕಟ್ಟಡವನ್ನು ಬಿಳಿಯ ಸಿಮೆಂಟ್ ಮತ್ತು ಬಿಳಿಯ ಅಮೃತಶಿಲೆಯನ್ನು ಬಳಸಿ ನಿರ್ಮಿಸಲಾಗಿದೆ. ಹಾಗಾಗಿ ಈ ಧಾರ್ಮಿಕ ಕೇಂದ್ರವು ಬಿಳಿಯ ಬಣ್ಣದಲ್ಲಿ ಕಂಗೊಳಿಸುತ್ತಿದ್ದು, ಶಾಂತಿಯನ್ನು ಸೂಚಿಸುತ್ತಿದೆ. ಇಲ್ಲಿನ ಗುರುಗಳು ರಾಮಾಯಣದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat