Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಂಭಕೋಣಂ » ಹವಾಮಾನ

ಕುಂಭಕೋಣಂ ಹವಾಮಾನ

ಅಕ್ಟೋಬರ್ ನಿಂದ ಫೆಬ್ರವರಿ ಕುಂಬಕೋಣಂ ಸಂದರ್ಶನಕ್ಕೆ ಅತ್ಯಂತ ಸೂಕ್ತವಾಗಿದೆ. ಇದೇ ಅವಧಿಯಲ್ಲಿ ಹಲವು ಉತ್ಸವಗಳು ನಡೆಯುವುದರಿಂದ ನಗರ ಭಕ್ತರಿಂದ ಹಾಗೂ ಪ್ರವಾಸಿಗರಿಂದ ಜಿಗಿಗುಡುತ್ತದೆ. ಹನ್ನೆರಡು ವರ್ಷಗಳಿಗೊಮ್ಮೆ ಬರುವ ಮಹಾಮಹಂ ಉತ್ಸವದ ಕಾಲದಲ್ಲಂತೂ ಭಕ್ತರು ಪ್ರವಾಹದೋಪಾದಿಯಲ್ಲಿ ಈ ನಗರಕ್ಕೆ ಆಗಮಿಸುತ್ತಾರೆ. ಕಳೆದ ಮಹಾಮಹಂ 2004ರ ಮಾರ್ಚ್ 6 ರಂದು ಆಚರಿಸಲಾಗಿತ್ತು. ಮುಂದಿನ ಉತ್ಸವ 2016 ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಆಚರಿಸಲಾಗುತ್ತದೆ. 

ಬೇಸಿಗೆಗಾಲ

ದಕ್ಷಿಣ ಭಾರತದ ಎಲ್ಲಾ ನಗರಗಳಂತೆ ಮಾರ್ಚ್ ನಿಂದ ಮೇ ಕೊನೆಯವರೆಗೆ ಬೇಸಿಗೆಯಾಗಿದ್ದು ವಾತಾವರಣ ಹೆಚ್ಚು ಬಿಸಿಯಾಗಿಯೂ ಹೆಚ್ಚಿನ ಆರ್ದ್ರತೆಯಿಂದಲೂ ಕೂಡಿರುತ್ತದೆ. 32-38 ಡಿಗ್ರಿ ಇರುವ ಒಣಹವೆ ಹಾಗೂ ಪ್ರಖರ ಬಿಸಿಲಿನ ಕಾರಣ ಈ ಸಮಯದಲ್ಲಿ ಭೇಟಿ ಉಚಿತವಲ್ಲ.

ಮಳೆಗಾಲ

ಜೂನ್ ಜುಲೈ ಆಗಸ್ಟ್ ತಿಂಗಳಲ್ಲಿ ಸಾಧಾಣದಿಂದ ಭಾರೀ ಮಳೆಯಾಗುತ್ತದೆ. ವಾತಾವರಣ ತಂಪಾಗಿದ್ದರೂ ಮಳೆಯ ಜಿಟಿಜಿಟಿ, ಕೆಸರಿನ ದಾರಿ ಪ್ರವಾಸಿಗರನ್ನು ದೂರವಿಡುತ್ತವೆ. ಮಳೆಗಾಲದಲ್ಲಿಯೇ ನೋಡಬೇಕು ಎಂಬ ಅನಿವಾರ್ಯ ಕಾರಣದ ಹೊರತಾಗಿ ಈ ದಿನಗಳಲ್ಲಿ ಸಂದರ್ಶನ ಸೂಕ್ತವಲ್ಲ.

ಚಳಿಗಾಲ

ಸೆಪ್ಟೆಂಬರ್ ಬಳಿಕ ಮಳೆ ಕಡಿಮೆಯಾದರೂ ವಾತಾವರಣ ನಿಜವಾಗಿ ತಂಪಾಗುವುದು ಡಿಸೆಂಬರ್ ನಿಂದ ಫೆಬ್ರವರಿ ಅವಧಿಯಲ್ಲಿ. ಈ ದಿನಗಳಲ್ಲಿ ಅತ್ಯಂತ ಅಹ್ಲಾದಕರವಾರ 20-25 ಡಿಗ್ರಿ ಸೆಲ್ಸಿಯಸ್ ತಾಪಮಾನವಿರುವ ಕಾರಣ ಭೇಟಿ ನೀಡಲು ಸೂಕ್ತವಾಗಿದೆ.