Search
  • Follow NativePlanet
Share
ಮುಖಪುಟ » ಸ್ಥಳಗಳು » ಕುಮಾವೂನ್ » ಹವಾಮಾನ

ಕುಮಾವೂನ್ ಹವಾಮಾನ

ಕುಮಾವೂನ್ ಗೆ ವರ್ಷದ ಯಾವುದೇ ಅವಧಿಯಲ್ಲಿ ಬೇಕಾದರು ಭೇಟಿಕೊಡಬಹುದು. ವರ್ಷಪೂರ್ತಿ ಇಲ್ಲಿನ ಹವಾಮಾನವು ಆಹ್ಲಾದಕರವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್‍ನಿಂದ ಜೂನ್): ಏಪ್ರಿಲ್ ತಿಂಗಳು ಇಲ್ಲಿ ಬೇಸಿಗೆ ಆರಂಭವಾಗಿ ಜೂನ್‍ವರೆಗೆ ಇರುತ್ತದೆ. ಆಗ ಇಲ್ಲಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶವು ಅನುಕ್ರಮವಾಗಿ 46° ಸೆಲ್ಶಿಯಸ್ ಮತ್ತು 19° ಸೆಲ್ಶಿಯಸ್ ನಡುವೆ ಇರುತ್ತದೆ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್) : ಕುಮಾವೂನ್ ನಲ್ಲಿ ಮಳೆಗಾಲವು ಜುಲೈನಿಂದ ಸೆಪ್ಟೆಂಬರ್ ತಿಂಗಳುಗಳ ನಡುವೆ ಬರುತ್ತದೆ. ಈ ಪ್ರಾಂತ್ಯದಲ್ಲಿ ಸಾಧಾರಣವಾದ ಮಳೆ ಬೀಳುತ್ತದೆ. ಹಾಗಾಗಿ ಪ್ರವಾಸಿಗರು ಈ ಅವಧಿಯಲ್ಲಿ ಇಲ್ಲಿಗೆ ಭೇಟಿಕೊಡಬೇಕಾದರೆ ಮಳೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬೇಕಾಗಿರುವ ಅಗತ್ಯ ವಸ್ತುಗಳನ್ನು ತರಬೇಕಾದುದು ಅನಿವಾರ್ಯವಾಗಿದೆ.

ಚಳಿಗಾಲ

(ಅಕ್ಟೋಬರ್ ನಿಂದ ಫೆಬ್ರವರಿ): ಚಳಿಗಾಲವು ಇಲ್ಲಿ ಅಕ್ಟೋಬರ್ ನಿಂದ ಫೆಬ್ರವರಿಯ ನಡುವೆ ಕಂಡು ಬರುತ್ತದೆ. ಈ ಸಮಯದಲ್ಲಿ ಇಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವೆಂದರೆ 25° ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶವು 4° ಸೆಲ್ಶಿಯಸ್ ಆಗಿದೆ. ಕುಮಾವೂನ್ ಗೆ ಚಳಿಗಾಲದಲ್ಲಿ ಹೋಗಲು ಯೋಚಿಸುವವರು ಉಣ್ಣೆಯ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಅತ್ಯಾವಶ್ಯಕ.