ಕೃಷ್ಣನಗರದ ರೋಮನ್ ಕ್ಯಾಥೋಲಿಕ್ ಚರ್ಚ್ ತನ್ನ ಅನುಪಮವಾದ ವಾಸ್ತುಶಿಲ್ಪದಿಂದಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದು ಯಾವುದೇ ಜಾತಿ, ಧರ್ಮ, ಮತ ಬೇಧಗಳಿಲ್ಲದೆ ಎಲ್ಲ ಬಗೆಯ ಪ್ರವಾಸಿಗರನ್ನು ತನ್ನತ್ತ ತೆರೆದ ಬಾಹುಗಳಿಂದ ಸ್ವಾಗತಿಸುತ್ತದೆ. ಇಲ್ಲಿ ಏಸು ಕ್ರಿಸ್ತನ ಕಾಲ ಮತ್ತು ಜೀವನವನ್ನು ವಿವರಿಸುವ ಹಲವಾರು ಕೆತ್ತನೆಗಳು ಮತ್ತು ಭಿತ್ತಿ ಚಿತ್ರಗಳು ಕಂಡು ಬರುತ್ತವೆ. ಇದರ ಆವರಣದಲ್ಲಿಯೇ ಪ್ರೊಟೆಸ್ಟೆಂಟ್ ಚರ್ಚ್ ಸಹ ಇರುವುದು ವಿಶೇಷ.


Click it and Unblock the Notifications