Search
  • Follow NativePlanet
Share
ಮುಖಪುಟ » ಸ್ಥಳಗಳು » ಕೃಷ್ಣಗಿರಿ » ಹವಾಮಾನ

ಕೃಷ್ಣಗಿರಿ ಹವಾಮಾನ

ಕೃಷ್ಣಗಿರಿಯಲ್ಲಿ ಪ್ರತಿ ಋತುವು ತನ್ನದೇ ಆದ ಪ್ರತ್ಯೇಕತೆಯನ್ನು ಹೊಂದಿರುತ್ತದೆ. ಹಾಗಾಗಿ ವರ್ಷದ ಯಾವ ದಿನವಾದರು ಇಲ್ಲಿಗೆ ಭೇಟಿಕೊಡಬಹುದು. ಆದರು ಬೇಸಿಗೆ ಇಲ್ಲಿಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಆಗ ಮಾವಿನ ಫಸಲು ಬರುವ ಕಾಲವಾಗಿದೆ. ಆದರೆ ಆಗ ಇಲ್ಲಿನ ಉಷ್ಣಾಂಶವು ಸಹಿಸಲಾಸಾಧ್ಯವಾಗಿರುತ್ತದೆ. ನವೆಂಬರ್ ನಿಂದ ಫೆಬ್ರವರಿ ತಿಂಗಳುಗಳ ನಡುವಿನ ಮಳೆಗಾಲದ ನಂತರದ ಅವಧಿಯು ಇಲ್ಲಿಗೆ ಭೇಟಿಕೊಡಲು ಹೇಳಿ ಮಾಡಿಸಿದ ಸಮಯವಾಗಿದೆ. ಅದೂ ಅಲ್ಲದೆ ಮಳೆಯು ಇಲ್ಲಿನ ಪರಿಸರವನ್ನು ಹಚ್ಚ ಹಸಿರನ್ನಾಗಿ ಮಾಡಿರುತ್ತದೆ.

ಬೇಸಿಗೆಗಾಲ

ಕೃಷ್ಣಗಿರಿಯಲ್ಲಿ ಬೇಸಿಗೆಯು ಸ್ವಲ್ಪ ಸುಡುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 38 ಡಿಗ್ರಿ, ಕನಿಷ್ಠ 32 ಡಿಗ್ರಿ ಸೆಲ್ಶಿಯಸ್ ಇರುತ್ತದೆ. ಬೇಸಿಗೆಯಲ್ಲಿ  ಕೃಷ್ಣಗಿರಿಯಲ್ಲಿ ಸಮಶೀತೋಷ್ಣ ವಲಯದ ಸವನ್ನಾ ಮಾದರಿಯ ಹವಾಗುಣ ಕಂಡುಬರುತ್ತದೆ. ಒಣ ಹವೆಯು ಇಲ್ಲಿ ಬೇಸಿಗೆಯನ್ನು ಅಸಹನೀಯಗೊಳಿಸುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳುಗಳು ಇಲ್ಲಿ ಅತ್ಯಂತ ಬಿಸಿಲಿನ ತಿಂಗಳುಗಳಾಗಿವೆ. ಹಾಗಾಗಿ ಈ ಕಾಲದಲ್ಲಿ ಇಲ್ಲಿಗೆ ಭೇಟಿಕೊಡುವುದು ಅಷ್ಟೇನು ಸೂಕ್ತವಲ್ಲ.

ಮಳೆಗಾಲ

ಕೃಷ್ಣಗಿರಿಯಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಸಮೃದ್ಧವಾಗಿ ಮಳೆ ಬೀಳುತ್ತದೆ. ಸಮಶೀತೋಷ್ಣವಲಯದ ಇನ್ನಿತರ ಪ್ರದೇಶಗಳಂತೆ ಇಲ್ಲಿ ಸಹ ಅನಿಯಮಿತವಾಗಿ ಮಳೆಯಾಗುತ್ತದೆ. ಈ ಅವಧಿಯಲ್ಲಿ ಇಲ್ಲಿನ ಉಷ್ಣಾಂಶವು ಕಡಿಮೆ ಇದ್ದು, ಆಹ್ಲಾದಕರವಾಗಿರುತ್ತದೆ. ಹಾಗಾಗಿ ಇಲ್ಲಿಗೆ ಭೇಟಿಕೊಡಲು ಇದು ಹೇಳಿ ಮಾಡಿಸಿದ ಸಮಯವಾಗಿದೆ. ಏಕೆಂದರೆ ಇಲ್ಲಿನ ಸ್ಥಳಗಳ ವೀಕ್ಷಣೆಗೆ ಮಳೆಯು ಅಂತಹ ಅಡ್ದಿಯನ್ನೇನು ಮಾಡುವುದಿಲ್ಲ.

ಚಳಿಗಾಲ

ಕೃಷ್ಣಗಿರಿಯಲ್ಲಿ ಚಳಿಗಾಲವು ಡಿಸೆಂಬರ್ ನಿಂದ ಫೆಬ್ರವರಿ ತಿಂಗಳುಗಳ ನಡುವೆ ಬರುತ್ತದೆ. ಈ ಅವಧಿಯಲ್ಲಿ ಕೃಷ್ಣಗಿರಿಯು ಸ್ವರ್ಗಕ್ಕಿಂತ ಮಿಗಿಲು ಎಂಬಂತೆ ಕಂಗೊಳಿಸುತ್ತದೆ. ಆಹ್ಲಾದಕರವಾದ ಹವಾಮಾನ, ಬೆಚ್ಚಗಿನ ಸೂರ್ಯನ ಕಿರಣಗಳು, ಈ ಋತುವನ್ನು ಅದ್ಭುತವೆನ್ನುವಷ್ಟರ ಮಟ್ಟಿಗೆ ತಂದು ನಿಲ್ಲಿಸುತ್ತವೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 23 ಡಿಗ್ರಿ ಸೆಲ್ಶಿಯಸ್ ಮತ್ತ್ತು ಕನಿಷ್ಠ 15 ಡಿಗ್ರಿ ಸೆಲ್ಶಿಯಸ್ ಇರುತ್ತದೆ.