Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊವಲಂ » ಹವಾಮಾನ

ಕೊವಲಂ ಹವಾಮಾನ

ಕೊವಲಂ ಕಡಲ ತೀರಗಳಿಗೆ ಭೇಟಿಕೊಡಲು ಔಚಿತ್ಯಪೂರ್ಣ ಸಮಯವೆಂದರೆ ಅಕ್ಟೋಬರ್ ನಿಂದ ಫೆಬ್ರವರಿ ತಿಂಗಳುಗಳ ನಡುವಿನ ವೇಳೆ. ರಜೆ ಅಥವಾ ಬಿಡುವನ್ನು ತೆಗೆದುಕೊಳ್ಳಲು ಇವು ಸರಿಯಾದ ತಿಂಗಳುಗಳು. ಬೇಸಿಗೆ ಕಾಲದಲ್ಲಿ ಮಧ್ಯಾಹ್ನದ ವೇಳೆ ಹೆಚ್ಚು ಸೂರ್ಯನ ಶಾಖ ಇರುವುದರಿಂದ ಕಡಲ ತೀರಗಳ ದೃಶ್ಯಗಳನ್ನು ನೋಡಲು ಸೂಕ್ತವಾದ ಸಮಯವಲ್ಲ. ಇನ್ನು ಮಳೆಗಾಲದಲ್ಲಿ ಕಡಲ ತೀರಗಳಿಗೆ ಹೋಗಲು ಸಾಧ್ಯವೇ ಇಲ್ಲ. ಈ ಸಮಯದಲ್ಲಿ ಕಡಲಿನ ನೀರು ತೀರ ಪ್ರದೇಶಗಳನ್ನು ಆವರಿಸುತ್ತಿದ್ದು ಮರಳಿಸಲ್ಲಿ ಸಮಯ ಕಳೆಯಲು ಆಗುವುದಿಲ್ಲ. ಈ ಸಮಯದಲ್ಲಿ ಕಡಲ ತೀರಗಳಿಗೆ ಹೋಗುವ ನಿರ್ಧಾರವನ್ನು ಮಾಡಲೇ ಬಾರದು.

ಬೇಸಿಗೆಗಾಲ

ಕೊವಲಂ ಪಟ್ಟಣವು ಅದರ ಬೌಗೋಳಿಕ ಸನ್ನಿವೇಶಕ್ಕೆ ಅನುಗುಣವಾಗಿ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಹೀಗಾಗಿ ಯಾವುದೇ ಋತುವನ್ನೂ ನಿಖರವಾಗಿ ಇಲ್ಲಿನ ಕಡಲ ತೀರದಲ್ಲಿ ಕಾಣಲು ಸಾಧ್ಯವಿಲ್ಲ. ಬೇಸಿಗೆ ಕಾಲದಲ್ಲಿ ಇಲ್ಲಿನ ಸರಾಸರಿ ಉಷ್ಣಾಂಶ 30 ಡಿಗ್ರಿ. ಸೆ. ಯಿಂದ 37 ಡಿಗ್ರಿ ಸೆ. ವರೆಗೆ ಇರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಇಲ್ಲಿ ಸಾಕಷ್ಟು ಹೆಚ್ಚು ಉಷ್ಣಾಂಶವನ್ನು ಕಾಣಬಹುದು. ಅಲ್ಲದೇ ಮೇ ಯಿಂದ ಸಪ್ಟೆಂಬರ್ ವರೆಗೆ ಆರ್ದ್ರತೆ ಇನ್ನೂ ಹೆಚ್ಚಾಗಿರುತ್ತದೆ. ಹೀಗಾಗಿ ಹಗಲಿನಲ್ಲಿ ಕೊವಲಂ ಪ್ರಯಾಣ ಸ್ವಲ್ಪ ದಣಿವನ್ನುಂಟುಮಾಡಬಹುದು. ಆದರೆ ರಾತ್ರಿಯ ವೇಳೆ ಸಮುದ್ರ ತೀರಗದಲ್ಲಿ ತಂಪನೆಯ ಗಾಳಿಯಿರುತ್ತದೆ.

ಮಳೆಗಾಲ

ಸಾಮಾನ್ಯವಾಗಿ ನಮ್ಮ ದೇಶದ  ಹವಾವಾನದಂತೆ, ಕೊವಲಂ ನಲ್ಲಿಯೂ ಕೂಡಾ ಮಳೆಯು  ಜೂನ್  ಮಧ್ಯಭಾಗದಲ್ಲಿ ಆರಂಭವಾಗಿ ಸಪ್ಟೆಂಬರ್ ತಿಂಗಳ ಮಧ್ಯದ ವರೆಗೆ ಸುರಿಯುತ್ತದೆ. ಕೊವಲಂ ಪಟ್ಟಣದಲ್ಲಿ ನೈರುತ್ಯ ಮಾನ್ಸೂನ್ ಮಳೆಯಾಗುತ್ತದೆ ಹಾಗೂ ಧಾರಾಕರವಾಗಿ ಮಳೆ ಸುರಿಯುತ್ತದೆ. ಈ ಸಂದರ್ಭದಲ್ಲಿ ಸುರಿಯುವ ಮಳೆಯು ಕಡಲ ತೀರಗಳಲ್ಲಿನ ಜನರ ಜೀವನಕ್ಕೆ ಪ್ರತಿಕೂಲ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಮೀನುಗಾರಿಗೆಯನ್ನು ಮಾಡಲು ಕಷ್ಟ ಸಾಧ್ಯ. ಈ ಸಮಯದಲ್ಲಿ ಬೀಚ್ ಗೆ ಭೇಟಿಕೊಡುವುದೂ ಅಸಾಧ್ಯ. ಅಲ್ಲದೇ ಪ್ರವಾಸಿಗರು ಕಡಲ ತೀರಗಳಿಗೆ ಹೋಗದಂತೆಯೂ ನಿರ್ಬಂಧವಿರುತ್ತದೆ. ಅನೇಕ ಬಾರಿ ಹವಾಮಾನತ ವೈಪರಿತ್ಯದಿಂದಾಗಿ  ಎಪ್ರೀಲ್ ಕೊನೆಯಲ್ಲಿ ಅಥವಾ ಮೇ ತಿಂಗಳಿನ ಆರಂಭದಲ್ಲೇ ಮಳೆ ಬರುವ ಸಾಧ್ಯತೆಗಳಿರುತ್ತವೆ.

ಚಳಿಗಾಲ

ಚಳಿಗಾಲದಲ್ಲಿ ದೇಶದ ಇತರ ಭಾಗಗಳಲ್ಲಿ ಇರುವಂತೆ ಅತಿಯಾದ ಚಳಿ ಕೊವಲಂ ನಲ್ಲಿ ಇರುವುದಿಲ್ಲ. ಆದರೆ ರಾತ್ರಿಯ ವೇಳೆ ಉಷ್ಣತೆಯ ಮಟ್ಟ ಕುಸಿಯುತ್ತಿದ್ದು ಇದಿ 18 ಡಿಗ್ರಿ ಸೆ. ನಷ್ಟಾಗತ್ತದೆ. ಬೆಚ್ಚನೆಯ ಜಾಕೆಟ್ ಗಳನ್ನು ಈ ಸಂದರ್ಭದಲ್ಲಿ ಧರಿಸುವುದು ಉತ್ತಮ.