Search
  • Follow NativePlanet
Share
ಮುಖಪುಟ » ಸ್ಥಳಗಳು » ಕೊಲ್ಲಿಮಲೈ » ಹವಾಮಾನ

ಕೊಲ್ಲಿಮಲೈ ಹವಾಮಾನ

 ಭೂಕುಸಿತಗಳಾಗುವ ಸಾಧ್ಯತೆ ಇರುವದರಿಂದ ಮಳೆಗಾಲದ ನಂತರದ ದಿನಗಳನ್ನು  ಹೊರತುಪಡಿಸಿ ಯಾವುದೇ ಕಾಲದಲ್ಲಿ ಕೊಲ್ಲಿಮಲೈಗೆ ಭೇಟಿ ನೀಡಬಹುದು. ಮಳೆಗಾಲದಲ್ಲಿ, ಮಳೆಯಿಂದಾಗಿ  ಪ್ರಕೃತಿ ವೀಕ್ಷಣೆ ಮತ್ತು ಇತರ ಪ್ರವಾಸೀ ಚಟುವಟಿಕೆಗಳಿಗೆ ಅಡ್ಡಿ ಉಂಟಾಗುವ ಸಾಧ್ಯತೆಯೂ ಇದೆ.   ಎಲ್ಲಾ ಅಂಶಗಳನ್ನು ಗಮನಿಸಿ, ಕೊಲ್ಲಿಮಲೈ ಪ್ರವಾಸಕ್ಕೆ ಆದರ್ಶ ಸಮಯ, ಬೇಸಿಗೆ  ಎಂದು ಪರಿಗಣಿಸಲಾಗಿದೆ.

ಬೇಸಿಗೆಗಾಲ

ಬೇಸಿಗೆಗಳು ಸಾಮಾನ್ಯವಾಗಿ ತಂಪಾಗಿರುತ್ತಿದ್ದು,  ತಾಪಮಾನವು ಅಪರೂಪವಾಗಿ 30 ° ಸಿ ಮೀರುತ್ತದೆ. ಈ ಸಮಯದಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯವಾಗಿ  18 ° ಸಿನ ಆಸುಪಾಸಿನಲ್ಲಿರುತ್ತದೆ. ಜನರು ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಗಿರಿಧಾಮಗಳಿಗೆ ಭೇಟಿನೀಡುವ ರೂಡಿಯಂತೆ ಕೊಲ್ಲಿಮಲೈ ಬೆಟ್ಟಗಳಲ್ಲಿಯೂ ಬೇಸಿಗೆಯಲ್ಲಿ ಹೆಚ್ಚು ಪ್ರವಾಸಿ ಚಟುವಟಿಕೆಗಳು ಜರುಗುತ್ತವೆ.

ಮಳೆಗಾಲ

ಕೊಲ್ಲಿಮಲೈ ಬೆಟ್ಟಗಳು ಈಶಾನ್ಯ ಮಾರುತಗಳಿಂದ ಅಕ್ಟೋಬರ್ ತಿಂಗಳಲ್ಲಿ ಭಾರೀ ಮಳೆ ಪಡೆಯುತ್ತವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಸಾಂದರ್ಭಿಕವಾಗಿ ಕೆಲವೊಮ್ಮೆ ತುಂತುರು ಮಳೆ ಬೀಳುವುದುಂಟು. ಅನೇಕ ಚಿಕ್ಕ ತೊರೆಗಳು ಮತ್ತು ಜಲಪಾತಗಳು ಈ ಋತುವಿನಲ್ಲಿ ಪುನಶ್ಚೇತನಗೊಳ್ಳುತ್ತವೆ. ಈ ಕಾಲದಲ್ಲಿ ಇಡೀ ತಾಣವು ಭುವಿಗಿಳಿದ ಸ್ವರ್ಗದಂತೆ ತೋರುವುದು.

ಚಳಿಗಾಲ

ಚಳಿಗಾಲದ (ಡಿಸೆಂಬರ್- ಫೆಬ್ರವರಿ) ಚಳಿಗಾಲದಲ್ಲಿ ಇಲ್ಲಿಯ ತಾಪಮಾನ  13 ° ಸಿ ನಿಂದ 18 ° ಸಿ ಒಳಗಿರುತ್ತದೆ., ಇದರಿಂದಾಗಿ ತಮಿಳುನಾಡಿನ ಇತರ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಚಳಿ ಹೆಚ್ಚು.  ಚಳಿಗಾಲದಲ್ಲಿ ಭೇಟಿನೀಡುವ ಪ್ರವಾಸಿಗರು  ರಕ್ಷಣಾ ಬಟ್ಟೆಗಳನ್ನು ಒಯ್ಯುವುದು ಉತ್ತಮ. ಚಳಿಗಾಲದಲ್ಲಿಯೂ ಇಲ್ಲಿ ಆಗಾಗ ತುಂತುರು ಮಳೆಯಾಗುವುದುಂಟು.