Search
 • Follow NativePlanet
Share
ಮುಖಪುಟ » ಸ್ಥಳಗಳು» ಕೊಲ್ಕತ್ತಾ

ಕೊಲ್ಕತ್ತಾ : ಸಂಸ್ಕೃತಿಯ ಸಂಗಮ

82

ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ ಸ್ಥಳ ಭಾರತೀಯ ಸಂಸ್ಕೃತಿಯ ಕೇಂದ್ರ ಸ್ಥಳವಾಗಿದೆ.

ಜನರು ಮತ್ತು ಸ್ಥಳೀಯ ಸಂಸ್ಕೃತಿ

ಕೊಲ್ಕತ್ತಾ ಜನರು ದಶಕಗಳಿಂದ ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸಿಕೊಂಡು ಬಂದ ಹೆಮ್ಮೆ ಹೊತ್ತಿದ್ದಾರೆ. ಇದನ್ನು ನೋಡಲು ದಸರಾಕ್ಕಿಂತ ಮೊದಲು ಇವರು ಆಚರಿಸುವ ದುರ್ಗಾ ಪೂಜೆ, ದೀಪಾವಳಿ ಮತ್ತು ಕಾಳಿ ಪೂಜೆಯ ಸಂದರ್ಭದಲ್ಲಿ ಪ್ರತಿಯೊಬ್ಬರ ಮನೆಯನ್ನು ಅಲಂಕರಿಸುವುದನ್ನು ನೋಡಬೇಕು.

ಕೊಲ್ಕತ್ತಾ ಸ್ಥಳೀಯ ಜನರಿಂದ ಮಾಡಲಾಗುವ ನಾಟಕ ಮತ್ತು ಬೀದಿ ನಾಟಕಗಳು ಜಗತ್ಪ್ರಸಿದ್ಧಿ ಪಡೆದಿವೆ.ಕೊಲ್ಕತ್ತಾ ಸ್ಥಳೀಯರು ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವ ಕೈಗಾಡಿಗೆ ಜಗತ್ಪ್ರಸಿದ್ಧವಾಗಿದೆ ಮತ್ತು ಕೆಲಸಗಾರರ ಆ ಶ್ರಮವನ್ನು ಎಲ್ಲರೂ ಮೆಚ್ಚುತ್ತಾರೆ.ನಗರದೊಳಗೆ ಇರುವ ಇನ್ನಿತರ ಸಾರಿಗೆ ವ್ಯವಸ್ಥೆ ಎಂದರೆ ಹಳೆಯ ಕಾಲದ ಹಳದಿ ಕಾರುಗಳು ಮತ್ತು ಸದಾ ಜನರಿಂದ ತುಂಬಿ ತುಳುಕುವ ಸ್ಥಳೀಯ ಬಸ್ಸುಗಳು.ಅಟೋ ರಿಕ್ಷಾಗಳು ಕೂಡ ಇಲ್ಲಿ ಚಾಲ್ತಿಯಲ್ಲಿವೆ.ಪುಸ್ತಕ ಓದುವ ಹವ್ಯಾಸಗಳಿದ್ದರೆ ಕಾಲೇಜ್ ಸ್ಟ್ರೀಟ್ ಸೂಕ್ತ ಸ್ಥಳ ಇಲ್ಲಿ ಚೌಕಾಶಿ ಮಾಡಿ ಉತ್ತಮ ಪುಸ್ತಕಗಳನ್ನು ಕೊಂಡುಕೊಳ್ಳಬಹುದು.

ಆಹಾರ

ಬೆಂಗಾಳಿ ಅನ್ನ ಮತ್ತು ಬೇಳೆ ಮಿಶ್ರಿತ ಕರ್ರಿ ಜೊತೆಗೆ ಮೀನಿನ ಖಾದ್ಯಕ್ಕೆ ಹೆಚ್ಚು ಪ್ರಸಿದ್ಧವಾಗಿದೆ. ನಗರದಲ್ಲಿ ಸಾಕಷ್ಟು ರೆಸ್ಟೋರೆಂಟ್ ಗಳಿದ್ದು,ಸ್ಥಳೀಯ ಆಹಾರಗಳು ಕಡಿಮೆ ದರದಲ್ಲಿ ದೊರೆಯುತ್ತವೆ. ಕೊಲ್ಕತ್ತಾಗೆ ಭೇಟಿ ನೀಡಿದರೆ ಅಲ್ಲಿನ ಖಾದ್ಯಗಳನ್ನು ಸವಿಯಲು ಮರೆಯದಿರಿ. ಬೆಂಗಾಲಿ ಸಿಹಿ ತಿಂಡಿಗಳು ದೇಶದಾದ್ಯಂತ ಹೆಸರುವಾಸಿಯಾಗಿದ್ದು ಸಂದೇಶ್, ಮಿಷ್ಟಿ ದಹಿ (ಸಿಹಿ ಮೊಸರು) ಮತ್ತು ರಸ ಮಲೈ ಗಳನ್ನು ತಿನ್ನಲೇಬೇಕು. ನಿಮಗೆ ಸ್ವಲ್ಪ ಬೇರೆ ರೀತಿಯ ಖಾದ್ಯಗಳು ಬೇಕೆಂದಿದ್ದಲ್ಲಿ ಚೀನಾ ಟೌನ್ ನಲ್ಲಿ ಸಾಕಷ್ಟು ಭಾರತೀಯ ಚೈನಾ ನೂಡಲ್ಸ್ ತಿನ್ನಬಹುದು ಜೊತೆಗೆ ಅಲ್ಲಿ ಸಿಗುವ ಮೊಮೊಸ್ ಅನ್ನು ತಿನ್ನಲೇಬೇಕು.

ಚಲನಚಿತ್ರಗಳಲ್ಲಿ ಕೊಲ್ಕತ್ತಾ

ಜಗತ್ಪ್ರಸಿದ್ಧ ಹೌರ ಸೇತುವೆ ಮತ್ತು ಟ್ರಾಮ್ ಸೌಲಭ್ಯ ಇಲ್ಲಿರುವುದರಿಂದ ಹಾಲಿವುಡ್ ಮತ್ತು ಬಾಲಿವುಡ್ ಸಿನೆಮಾಗಳಲ್ಲಿ ಕೊಲ್ಕತ್ತಾ ಸಾಕಷ್ಟು ಬಾರಿ ಚಿತ್ರಣಗೊಂಡಿದೆ. ಕೊಲ್ಕತ್ತಾ ಭಾರತದ ಮೊದಲ ಭೂಗತ ಮೆಟ್ರೋ ರೈಲನ್ನು ಹೊಂದಿದ ಖ್ಯಾತಿಗೆ ಸೇರಿದೆ. ಸ್ಥಳೀಯ ಸಿನೆಮಾಗಳು ಅಲ್ಲಿನ ಫೈನ್ ಆರ್ಟ್ ಅಕಾಡೆಮಿ ಮತ್ತು ಏಷಿಯಾಟಿಕ್ ಸೊಸೈಟಿ ಮತ್ತು ವಿಕ್ಟೋರಿಯಾ ಮೆಮೋರಿಯಲ್ ಗಳಲ್ಲಿ ನಡೆಯುತ್ತದೆ.

ಶಿಕ್ಷಣ

ಕೋಲ್ಕತಾ ಪ್ರವಾಸೋದ್ಯಮ ವಿಶೇಷವಾಗಿ ಮೇರಿಟೈಮ್ ಇನ್ಸ್ಟಿಟ್ಯೂಟ್ ಒಂದು ಶಿಕ್ಷಣ ಕೇಂದ್ರದ ಮೂಲಕ ವಾಸ್ತವವಾಗಿ ವಿಸ್ತಾರಗೊಂಡಿದೆ. ದೇಶದ ಅತಿ ಹಳೆಯ ಮೇರಿಟೈಮ್ ಇನ್ಸ್ಟಿಟ್ಯೂಟ್ ಮೇರಿ ಇರುವುದು ಕೊಲ್ಕತ್ತಾದಲ್ಲಿ.ಮತ್ತು ಅನೇಕ ನೌಕಾಯಾತ್ರಿಕರು ಕೊಲ್ಕತ್ತಾದ ಮೇಲೆ ವಿಶೇಷ ಮೋಹ ಹೊಂದಿದ್ದಾರೆ.

ಕೊಲ್ಕತ್ತಾ ಜನರ ಕ್ರೀಡಾ ಪ್ರೇಮ

ಕೊಲ್ಕತ್ತಾ ಜನರು ವಿಶೇಷವಾಗಿ ಕ್ರಿಕೆಟ್ ಮತ್ತು ಸಾಸರ್ (ಫುಟ್ ಬಾಲ್) ಆಟದ ಮೇಲೆ ಒಲವನ್ನು ಹೊಂದಿದ್ದಾರೆ. ಇಲ್ಲಿನ ಕೆಲವು ಕ್ರೀಡಾಂಗಣಗಳು ಈ ಆಟಗಳಿಗೆ ತರಭೇತಿ ಕೇಂದ್ರವಾಗಿ ಮತ್ತು ರಾಷ್ಟ್ರೀಯ ಮಟ್ಟದ ಆಟಗಳಿಗೆ ಕೂಡ ಬಳಸಲಾಗುತ್ತದೆ. ಐಪಿಎಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಎಂಬ ಟೀಮ್ ಇರುವುದನ್ನು ಕೂಡ ಗಮನಿಸಬಹುದು.

ಕೊಲ್ಕತ್ತಾದ ರಾತ್ರಿ ಜೀವನ

ಕೊಲ್ಕತ್ತಾ ನಗರದ ರಾತ್ರಿ ಜೀವನ ದೇಶದಲ್ಲಿ ಅತ್ಯುತ್ತಮ ಗಣತಿಯಲ್ಲಿದೆ.ನೈಟ್ ಕ್ಲಬ್ ಗಳಲ್ಲಿ ತಕ್ಕ ಮಟ್ಟಿಗೆ ಪ್ರವೇಶ ದರ ನೀಡಬೇಕಾಗುತ್ತದೆ. ಪೊಲೀಸರು ಮತ್ತು ಸ್ಥಳೀಯ ಕಾನೂನು ಜನರ ಸುರಕ್ಷತೆಗೆ ಪ್ರಾಮುಖ್ಯತೆ ನೀಡುತ್ತದೆ. ಇದಲ್ಲದೆ ಸುತ್ತಮುತ್ತಲ ಸ್ಥಳದ ಜನರೂ ಕೂಡ ಮುಂಜಾನೆವರೆಗೆ ಕೂಡ ಇಲ್ಲಿ ಇರುತ್ತಾರೆ.

ಪ್ರವಾಸಿಗರಿಗೆ ಕೊಲ್ಕತ್ತಾ ನಗರ ತೋರಿಸಲು ಸಾಕಷ್ಟು ಸ್ಥಳಗಳನ್ನು ಹೊಂದಿದೆ. ಇಲ್ಲಿನ ಕಲೆ,ಖಾದ್ಯಗಳು, ಸಮಕಾಲೀನ ಜೀವನ ಮತ್ತು ಒಂದು ಪರಿಪೂರ್ಣ ರಾತ್ರಿಯ ಮಿಶ್ರಣ ಪ್ರವಾಸಿಗರಿಗೆ ಕುಶಿ ನೀಡುವುದು ಖಂಡಿತ. ಈ ನಗರವು ಅಂತರಾಷ್ಟ್ರೀಯ ವಾಣಿಜ್ಯದಲ್ಲಿ ಅತ್ಯುತ್ತಮ ಸಂವಹನ ಸಂಪರ್ಕವನ್ನು ಹೊಂದಿದೆ.

ಕೊಲ್ಕತ್ತಾ ಮತ್ತು ಸುತ್ತಮುತ್ತಲು ಸಾಕಷ್ಟು ಪ್ರವಾಸಿ ತಾಣಗಳಿವೆ, ವಿಕ್ಟೋರಿಯಾ ಮೆಮೋರಿಯಲ್, ಇಂಡಿಯನ್ ಮ್ಯೂಸಿಯಂ, ಇಡನ್ ಗಾರ್ಡನ್, ಸೈನ್ಸ್ ಸಿಟಿ ಇವುಗಳಲ್ಲಿ ಕೆಲವು. ಇಲ್ಲಿ ಕೆಲವು ಪಾರಂಪರಿಕ ಕಟ್ಟಡಗಳಾದ GPO ಮತ್ತು ಕಲ್ಕತ್ತಾ ಹೈ ಕೋರ್ಟ್ ಇವುಗಳು ಕೂಡ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಕೊಲ್ಕತ್ತಾ ತಲುಪುವುದು ಹೇಗೆ?

ಪಶ್ಚಿಮ ಬಂಗಾಳದ ರಾಜಧಾನಿಯಾದ ಕೊಲ್ಕತ್ತಾ ಗೆ ರಸ್ತೆ, ರೈಲು ಮತ್ತು ವಿಮಾನ ಮಾರ್ಗಗಳಿವೆ.

ಕೊಲ್ಕತ್ತಾ ಪ್ರಸಿದ್ಧವಾಗಿದೆ

ಕೊಲ್ಕತ್ತಾ ಹವಾಮಾನ

ಕೊಲ್ಕತ್ತಾ
33oC / 91oF
 • Haze
 • Wind: WSW 11 km/h

ಉತ್ತಮ ಸಮಯ ಕೊಲ್ಕತ್ತಾ

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕೊಲ್ಕತ್ತಾ

 • ರಸ್ತೆಯ ಮೂಲಕ
  ಕೊಲ್ಕತ್ತಾ ದೇಶದ ಉಳಿದ ಭಾಗಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ 6 ಮತ್ತು 2 ರ ಮೂಲಕ ಸಂಪರ್ಕ ಹೊಂದಿದೆ. ರಸ್ತೆಯ ಮೂಲಕ ಇತರ ನಗರಗಳಾದ ದಾರ್ಜೀಲಿಂಗ್, ಸಿಲಿಗುರಿ, ಜೆಮ್ಷೆಡ್ ಪುರಗಳಿಗೆ ಸಂಪರ್ಕ ಹೊಂದಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕೊಲ್ಕತ್ತಾ ರೈಲು ನಿಗದಿತ ರೈಲುಗಳ ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕ ಹೊಂದಿದೆ. ಮುಂಬೈ ಮತ್ತು ದೆಹಲಿ ಮಾರ್ಗವಾಗಿ ಹೋಗುವ ರೈಲುಗಳು ಲಭ್ಯವಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಕೊಲ್ಕತ್ತಾದ ನೇತಾಜಿ ಸುಭಾಶ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದೇಶದ ಇತರ ಭಾಗಗಳಿಂದ ಮತ್ತು ಮುಂಬೈ,ದೆಹಲಿ, ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಂಪರ್ಕ ಹೊಂದಿದೆ.
  ಮಾರ್ಗಗಳ ಹುಡುಕಾಟ

ಕೊಲ್ಕತ್ತಾ ಲೇಖನಗಳು

One Way
Return
From (Departure City)
To (Destination City)
Depart On
03 Dec,Thu
Return On
04 Dec,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
03 Dec,Thu
Check Out
04 Dec,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
03 Dec,Thu
Return On
04 Dec,Fri
 • Today
  Kolkata
  33 OC
  91 OF
  UV Index: 9
  Haze
 • Tomorrow
  Kolkata
  30 OC
  85 OF
  UV Index: 9
  Sunny
 • Day After
  Kolkata
  29 OC
  84 OF
  UV Index: 9
  Sunny