Search
  • Follow NativePlanet
Share
ಮುಖಪುಟ » ಸ್ಥಳಗಳು» ಕೊಲ್ಹಾಪುರ

ಕೊಲ್ಹಾಪುರ - ಪ್ರಸಿದ್ಧ ಶಕ್ತಿ ಪೀಠ

21

ಕೊಲ್ಹಾಪುರನ್ನು ಮಹಾರಾಷ್ಟ್ರ ರಾಜ್ಯದ ಒಂದು ವಿಜಯದ ಚಿಹ್ನೆ ಎಂದು ಹೇಳಬಹುದು. ಪ್ರಾಚೀನ,ಗ್ರಾಮೀಣ ದೇವಾಲಯಗಳು,ಕೌತುಕ್ಯದ ಉದ್ಯಾನವನಗಳು,ಐತಿಹಾಸಿಕ ಕೋಟೆಗಳು ಮತ್ತು ಅರಮನೆಗಳನ್ನೊಳಗೊಂಡ ಈ ಐಶ್ವರ್ಯಯುತ ನಗರವು ದೇಶದ ಒಂದು ಹೆಮ್ಮೆ. ಪಂಚಗಂಗಾ ದಡದ ಮೇಲಿರುವ ಕೊಲ್ಹಾಪುರದ ಇತಿಹಾಸವು ಆಳವಾಗಿದ್ದು ನಮ್ಮ ದೇಶದಲ್ಲಿಯ ಹಲವು ಆಡಳಿತ ಕಾಲಗಳಲ್ಲಿ ಒಂದಾಗಿರುವ ಮರಾಠರ ಆಡಳಿತ ಕಾಲಕ್ಕೆ ಹರಡಿದೆ. ಕೊಲ್ಹಾಸುರ ಎಂಬ ರಾಕ್ಷಸನನ್ನು ದೇವತೆಯಾದ ಮಹಾಲಕ್ಷ್ಮಿಯು ಸಂಹರಿಸಿದ ಪ್ರೇರಕವಾಗಿ, ಈ ಪ್ರದೇಶಕ್ಕೆ ಕೊಲ್ಹಾಪುರ ಎಂಬ ಹೆಸರು ಬಂದಿದೆ.

ಒಂದು ಧಾರ್ಮಿಕ ಕ್ಷೇತ್ರ

ಈ ನಗರವು ಕೆಲವು ಶತಮಾನಗಳಷ್ಟು ಹಳೆಯದಾಗಿದೆ. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಸೌಖ್ಯವಾಗಿ ನೆಲೆಸಿರುವ ಕೊಲ್ಹಾಪುರವು ಛತ್ರಪತಿ ತಾರಾಬಾಯಿ ಅವರಿಂದ ಶೋಧಿಸಲ್ಪಟ್ಟು, ತದನಂತರ ಛತ್ರಪತಿ ಶಾಹು ಮಹಾರಾಜರಿಂದ ಅದ್ಭುತವಾಗಿ ಆಳಲ್ಪಟ್ಟಿತು. ಬ್ರಿಟೀಷರ ಆಡಳಿತದ ನಡುವೆಯೂ ಶಾಹು ರಾಜನು ಈ ಪ್ರದೇಶದಲ್ಲಿ ಸಮಾಜ ಹಾಗು ಶಿಕ್ಷಣಕ್ಕೆ ಪ್ರಾಮುಖ್ಯತೆ ಕೊಟ್ಟನು. ಭೋಂಸ್ಲೆ ಸಾಮ್ರಾಜ್ಯದ ಕಾಲದಲ್ಲಿ, ಕೊಲ್ಹಾಪುರವು ಕೌತುಕಮಯವಾದ 19 ಗನ್(ತುಪಾಕಿ) ರಾಜ್ಯ ಎಂದೂ ಕೂಡ ಕರೆಯಲ್ಪಟ್ಟಿತು.

ಭಗವಾನ್ ವಿಷ್ಣುವು ಕೊಲ್ಹಾಪುರವನ್ನು ತನ್ನ ವಯಕ್ತಿಕ ವಾಸಸ್ಥಾನವನ್ನಾಗಿರಿಸಿ, ಮಹಾಲಕ್ಷ್ಮಿಯ ಜೊತೆ ವಾಸಿಸಿದನೆಂದು ನಂಬಲಾಗಿದೆ. ಅಂಬಾ ದೇವಿ ಹೆಸರಿನಿಂದಲೇ ಪ್ರಸಿದ್ಧಿಯಾದ ಮಹಾಲಕ್ಷ್ಮಿ ದೇವಸ್ಥಾನವು ಕೊಲ್ಹಾಪುರಿನ ಆಧ್ಯಾತ್ಮಿಕ ಕೇಂದ್ರವಾಗಿದೆ.

ಸ್ಥಳೀಯವಾಗಿ ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕೊಲ್ಹಾಪುರವು, ಪೌರಾಣಿಕವಾಗಿ ಮತ್ತು ಸಾಂಪ್ರದಾಯಿಕವಾಗಿ ಒಂದು ಕೊಡುಗೆ ಎಂದರೆ ತಪ್ಪಾಗಲಾರದು. ಆಧುನಿಕತೆ ಮತ್ತು ಆಧ್ಯಾತ್ಮಿಕತೆ ಪರಿಪೂರ್ಣ ಮಿಶ್ರಣವನ್ನು ಇಲ್ಲಿ ಕಾಣಬಹುದು.

ನೀವಲ್ಲಿದ್ದಾಗ ಕಳೆದು ಕೊಳ್ಳಲೇ ಬಾರದ್ದು...

ಕೊಲ್ಹಾಪುರಿನ ಪ್ರತಿ ಕೋಟೆಯು ನಿಮ್ಮ ಮನಸ್ಸು ಬೇಚ್ಚಿ ಬೀಳುವಂತಹ ಒಂದೊಂದು ಐತಿಹಾಸಿಕ ಕಥೆಯನ್ನು ಹೇಳುತ್ತವೆ. ಶಾಹು ಸಂಗ್ರಹಾಲಯವು ಇತಿಹಾಸ ಪ್ರಿಯರಿಗೆ ಅತ್ಯಂತ ಮುಖ್ಯವಾದ ಸ್ಥಳವಾಗಿದೆ. ಖಾಸಬಾಗ ಮೈದಾನವು ಕೊಲ್ಹಾಪುರದಲ್ಲಿರುವ ತನ್ನದೆ ಆದ ಒಂದು ವಿಶೀಷ್ಟ ಸ್ಥಳವಾಗಿದ್ದು, ಸಾಂಪ್ರದಾಯಿಕ ಕಲೆಯಾದ ಕುಸ್ತಿ ಆಟವನ್ನು ಈಗಲೂ ಕೂಡ ಅಲ್ಲಿ ಕಾಣಬಹುದು. ಯಾವುದೇ ಸಮಯದಲ್ಲೂ 30,000 ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಲ್ಲ ಸಾಮರ್ಥ್ಯವಿರುವ ಈ ಮೈದಾನವು ಅದರ ನಿರ್ಮಾತೃ ಹಾಗು ವಿನ್ಯಾಸಗಾರರ ಒಂದು ಸಾಧನೆಯೇ ಸರಿ. ಪ್ರಕೃತಿ ಪ್ರಿಯರು ಹಾಗು ಸಂತೋಷ ಬಯಸುವವರು ಕೊಲ್ಹಾಪುರಿನಲ್ಲಿ ಕಂಡುಬರುವ ಅನೇಕ ಸರೋವರಗಳ ಸುತ್ತಮುತ್ತ ಸಮಯ ಕಳೆಯಬಹುದು. ರಂಕಾಲಾ ಚೌಪಾಟಿಯು ನೀವು ತಪ್ಪಿಸಿಕೊಳ್ಳಲಾರದಂತಹ ಒಂದು ಅದ್ಭುತ ಸ್ಥಳವಾಗಿದ್ದು, ವಿಶೇಷವಾಗಿ ಮಕ್ಕಳು ಜೊತೆಗಿರುವಾಗ ಹೋಗಲೇ ಬೇಕಾದ ಸ್ಥಳವಾಗಿದೆ.

ಕೊಲ್ಹಾಪುರಿನಲ್ಲಿದ್ದಾಗ, ಅಲ್ಲಿಯ ಕೊಲ್ಹಾಪುರಿ ಚಪ್ಪಲಿಗಳನ್ನು ಧರಿಸದೆ ಇದ್ದರೆ ಅಥವಾ ಕೊಲ್ಹಾಪುರಿ ಮಿಸಳವನ್ನು ಸವಿಯದೆ ಇದ್ದರೆ ನಿಜವಾಗಿಯೂ ನೀವು ನಾಚಿಕೆ ಪಡಬೇಕಾದ ವಿಷಯ. ಖರೀದಿಗೆ ಹೋದಾಗ ಅಲ್ಲಿಯ ವ್ಯಾಪಾರಿಗಳು ತೋರ್ಪಡಿಸುವ ಪ್ರೀತಿಯ ಸ್ವಾಗತದಿಂದ ಖಂಡಿತವಾಗಿಯೂ ವಿಸ್ಮಿತರಾಗುತ್ತಿರಿ. ನೀವು ಕೊಳ್ಳ ಬಯಸುವ ಅಥವಾ ಉಡುಗೊರೆಯಾಗಿ ನೀಡ ಬಯಸುವ ಅನೇಕ ಬಗೆಯ ಕಲಾಕೃತಿಗಳು, ಚರ್ಮದ ಉತ್ಪನ್ನಗಳನ್ನು ಇಲ್ಲಿ ಕಾಣಬಹುದು. ನೀವು ಖಾರ ಇಷ್ಟಪಡುವವರಾಗಿದ್ದರೆ, ಇಲ್ಲಿಯ "ತಾಮ್ಡಾ ರಸಾ" ಒಂದು ಬಗೆಯ ಖಾರದ ಊಟ ವನ್ನು ಸವಿಯಲೇ ಬೇಕು. ಇಲ್ಲಿ ದೊರಕುವ ವಿಶೀಷ್ಟವಾದ ಕೊಲ್ಹಾಪುರಿ ಮಸಾಲವನ್ನು ಸಾಮಾನ್ಯವಾಗಿ ಇಲ್ಲಿ ತಯಾರಾಗುವ ಪ್ರತಿ ಅಡುಗೆಯಲ್ಲೂ ಬಳಸಲಾಗುತ್ತದೆ.

ಕೊಲ್ಹಾಪುರಿನ ಬಗ್ಗೆ ಇನ್ನೊಂದು ಚಿಕ್ಕದಾದರೂ ಕೌತುಕಮಯವಾದ ಸತ್ಯವೆನೆಂದರೆ, ಭಾರತದಲ್ಲೇ ಮೊದಲಬಾರಿಗೆ ನಿರ್ಮಿಸಲಾದ ಚಲನಚಿತ್ರ ರಾಜಾ ಹರಿಶ್ಚಂದ್ರ ವನ್ನು ಇಲ್ಲೆ ಮಾಡಲಾಗಿತ್ತು. ಇಲ್ಲಿನ ಬಹುಜನರು ಮರಾಠಿ ಭಾಷಿಕರಾಗಿದ್ದು, ಸ್ವಲ್ಪ ಪ್ರಮಾಣದಲ್ಲಿ ಗುಜರಾತಿ ಹಾಗು ಮಾರ್ವಾಡಿಗಳನ್ನೂ ಕಾಣಬಹುದು.

ಯಾವಾಗ ಮತ್ತು ಹೇಗೆ ಹೋಗಬಹುದು

ಕೊಲ್ಹಾಪುರವು ತೀರ ಪ್ರದೇಶ ಹವಾಮಾನ ಮತ್ತು ಒಳನಾಡು ಪ್ರದೇಶ ಹವಾಮಾನಗಳ ಪರಿಪೂರ್ಣ ಮಿಶ್ರಣವನ್ನು ಹೊಂದಿದೆ. ಪರಿಣಾಮವಾಗಿ, ಇಲ್ಲಿಯ ತಾಪಮಾನವು ಇತ್ತ ಬಿಸಿಯು ಇಲ್ಲ, ಅತ್ತ ತಂಪೂ ಅಲ್ಲ ಅನ್ನುವ ಹಾಗಿರುತ್ತದೆ. ಬೇಸಿಗೆ ದಿನಗಳಲ್ಲಿ ಉಷ್ಣಾಂಶವು 35 ಡಿಗ್ರಿವರೆಗಿದ್ದು, ವಾತಾವರಣದಲ್ಲಿ ತೇವಾಂಶವಿದ್ದರೂ ಸಾಮಾನ್ಯವಾಗಿ ತಂಪಾಗಿರುತ್ತದೆ. ಚಳಿಗಾಲವು ಆಹ್ಲಾದಕರವಾಗಿದ್ದು ಆಹ್ವಾನಿಸುತ್ತದೆ. ಹೀಗಾಗಿ ನಗರಕ್ಕೆ ವರ್ಷದ ಯಾವುದೆ ಸಮಯದಲ್ಲಿ ಬರಬಹುದಾದರೂ, ಮಳೆಗಾಲದಲ್ಲಿ ಪ್ರವಾಹದ ಭೀತಿಯಿರುವದರಿಂದ ಭೇಟಿ ನೀಡದಿರುವುದು ಕ್ಷೇಮ. ತಾಪಮಾನವು ಯಾವಾಗಲೂ 15 ಡಿಗ್ರಿ ಮತ್ತು 35 ಡಿಗ್ರಿಗಳ ಮಧ್ಯೆ ಆಟವಾಡುತ್ತಿರುತ್ತದೆ.

ಕೊಲ್ಹಾಪುರವು ಮುಂಬೈನಿಂದ 400 ಕಿ.ಮೀ. ಅಂತರದಲ್ಲಿದ್ದು, ಪುಣೆಯಿಂದ ಕೇವಲ 240 ಕಿ.ಮೀ ದೂರದಲ್ಲಿದೆ. ಅಭಿವೃದ್ಧಿ ಹೊಂದಿದ ವಾಯು, ರೈಲು ಮತ್ತು ರಸ್ತೆಗಳ ಮೂಲಕ ನಗರವು ಭಾರತದ ಪ್ರಮುಖ ನಗರಗಳೊಂದಿಗೆ ಸಂಪರ್ಕವನ್ನು ಹೊಂದಿದೆ. ವಿಮಾನದ ಮೂಲಕ ಉಜಲೈವಾಡಿ ವಿಮಾನ ನಿಲ್ದಾಣದಲ್ಲಿ ಇಳಿಯಬಹುದು. ರೈಲಿನಲ್ಲಾದರೆ ಮುಂಬೈ-ಪುಣೆ ಮಧ್ಯೆ ಸಂಚರಿಸುವ ಬಹುಸಂಖ್ಯೆಯಲ್ಲಿರುವ ರೈಲುಗಳ ಸೇವೆ ಪಡೆಯಬಹುದು. ರಸ್ತೆಯ ಮೂಲಕ ಸ್ವಂತವಾಗಿ ಕೊಲ್ಹಾಪುರಿಗೆ ಹೋಗುವುದು ಕೂಡ ಒಂದು ಉತ್ತಮ ಆಯ್ಕೆಯಾಗಿದ್ದು, ಸುಮಾರು 8 ಘಂಟೆಗಳ ಕಾಲ ಪ್ರಯಾಣ ಮಾಡಬೇಕಾಗುತ್ತದೆ. ಇಲ್ಲವಾದರೆ, ಹಲವು ರಾಜ್ಯ ಮತ್ತು ಖಾಸಗಿ ಚಾಲಿತ ಬಸ್ಸುಗಳಿದ್ದು ಅದರ ಮೂಲಕವು ಪ್ರಯಾಣ ಮಾಡಬಹುದು.

ಆಧುನಿಕ ಕಾರುಗಳು, ಶೈಕ್ಷಣಿಕ ಕೇಂದ್ರಗಳು, ಮಲ್ಟಿಪ್ಲೆಕ್ಸ್ ಗಳು, ಮಸಾಲೆಗಳು, ವಿನೋದಭರಿತ ಉದ್ಯಾನವನಗಳು, ಐ.ಟಿ ಕ್ಷೇತ್ರ - ನೀವು ಏನೆ ಕೇಳಿದರೂ, ಕೊಲ್ಹಾಪುರಿನಲ್ಲಿ ಕಾಣದೆ ಇರಲಾರದು. "ಶುಗರ್ ಬಾವ್ಲ್ ಆಫ್ ಇಂಡಿಯಾ" ಎಂದೆ ಖ್ಯಾತಿಯಾದ ಈ ನಗರವು ಕ್ಷೀಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಬಹು ಬೇಡಿಕೆಯುಳ್ಳ ಸ್ಥಳವಾಗುತ್ತಿದೆ. ಇಂದು ಭಾರತವು ತಾನು ಗುರುತಿಸಿಕೊಳ್ಳುವ ಪ್ರಕೃತಿ, ಆಧ್ಯಾತ್ಮ ಮತ್ತು ಸಂಸ್ಕೃತಿ ಈ ಮೂರು ಅಂಶಗಳ ಪರಿಪೂರ್ಣ ಮಿಶ್ರಣವನ್ನು ಕೊಲ್ಹಾಪುರಿನಲ್ಲಿ ಕಾಣಬಹುದಾಗಿದೆ. ಯಾವಾಗಲೂ ತನ್ನ ಸಂಪ್ರದಾಯವನ್ನು ಕಳೆದುಕೊಳ್ಳದಿರುವ ಈ ಸ್ಥಾನಕ್ಕೆ ಭೇಟಿ ನೀಡಲು ಕಾಯದಿರಿ.

ಕೊಲ್ಹಾಪುರ ಪ್ರಸಿದ್ಧವಾಗಿದೆ

ಕೊಲ್ಹಾಪುರ ಹವಾಮಾನ

ಉತ್ತಮ ಸಮಯ ಕೊಲ್ಹಾಪುರ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಕೊಲ್ಹಾಪುರ

  • ರಸ್ತೆಯ ಮೂಲಕ
    ನೀವಾಗೆ ಖುದ್ದು ಪ್ರಯಾಣಿಸಬೇಕೆಂದಿದ್ದರೆ, ಮುಂಬೈ ಅಥವಾ ಬೆಂಗಳೂರಿನಿಂದ 450 ಕಿ.ಮೀ ದೂರವು ಏನಿಲ್ಲವೆಂದರೂ 8-10 ಘಂಟೆಗಳ ಕಾಲ ತೆಗೆದುಕೊಳ್ಳಬಹುದು. ಪುಣೆಯಿಂದ ಕೊಲ್ಹಾಪುರವು 225 ಕಿ.ಮೀ ದೂರದಲ್ಲಿದೆ. ಇದರ ಹೊರತಾಗಿ, ಮಹಾರಾಷ್ಟ್ರ ಸ್ಟೇಟ್ ಕಾರ್ಪೋರೆಷನ್(ಎಮ.ಎಸ.ಟಿ.ಸಿ)ನ ಹಲವಾರು ಬಸ್ಸುಗಳ ಆಯ್ಕೆ ಕೂಡ ಇದೆ. ಕೊಲ್ಹಾಪುರಕ್ಕೆ ತಲುಪಲು ಮುಂಬೈ, ಪುಣೆ, ಗೋವಾ, ಸೋಲಾಪುರ ಮತ್ತು ಬೆಂಗಳೂರಿನಿಂದ ಹಲವು ಸೆಮಿ ಲಕ್ಸುರಿ ಹಾಗು ಖಾಸಗಿ ವಾಹನಗಳು ಕೂಡ ಇವೆ. ಈ ಖಾಸಗಿ ಬಸ್ಸುಗಳ ಶುಲ್ಕವು ಪ್ರತಿ ಕಿಲೊಮೀಟರಗೆ 3 ರಿಂದ 4 ರೂ ಆಗಬಹುದು.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಕೊಲ್ಹಾಪುರಿಗೆ ಮುಂಬೈ ಅಥವಾ ಬೆಂಗಳೂರಿನಿಂದ 10-11 ಘಂಟೆ ಪ್ರಯಾಣಾವಧಿಯು ಬೇಕಾಗುತ್ತದೆ. ದಾದರ್ ಅಥವಾ ಸಿ.ಎಸ.ಟಿ(ಮುಂಬೈ)ಯಿಂದ ಕೊಲ್ಹಾಪುರಿಗೆ ಹಲವು ದಿನ ಹಾಗು ರಾತ್ರಿ ರೈಲುಗಳು ಲಭ್ಯವಿದ್ದು ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು. ಕೊಲ್ಹಾಪುರಿನ ಛತ್ರಪತಿ ಶಾಹು ಮಹಾರಾಜ ಟರ್ಮಿನಸ್ ನಿಲ್ದಾಣವು ದೆಹಲಿ, ಪುಣೆ, ಬೆಂಗಳೂರು ಮತ್ತು ಅಹ್ಮದಾಬಾದ ಜೊತೆ ಭಾರತದ ಹಲವು ಪ್ರಮುಖ ನಗರಗಳ ಉತ್ತಮ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಕೊಲ್ಹಾಪುರಿನ ಉಜಲೈವಾಡಿ ವಿಮಾನ ನಿಲ್ದಾಣವು ದೇಶದ ವಿವಿಧ ರಾಜ್ಯಗಳ ಪ್ರಮುಖ ನಗರಗಳೊಡನೆ ಉತ್ತಮ ಸಂಪರ್ಕವನ್ನು ಹೊಂದಿದೆ. ಇದು ನಗರದಿಂದ 10 ಕಿ.ಮೀ ದೂರವಿದ್ದು, ಟ್ಯಾಕ್ಸಿ, ಕ್ಯಾಬುಗಳಿಗೆ ರೂ 300 ಪಾವತಿಸಿ ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat