Search
  • Follow NativePlanet
Share
ಮುಖಪುಟ » ಸ್ಥಳಗಳು » ಕೋಲಾರ » ಹವಾಮಾನ

ಕೋಲಾರ ಹವಾಮಾನ

ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳುಗಳಲ್ಲಿ ಕೋಲಾರದಲ್ಲಿ ಆರ್ದ್ರತೆ ಕಡಿಮೆ ಮತ್ತು ಹಿತಕರವಾದ ವಾತಾವರಣವಿರುವುದರಿಂದ  ಭೇಟಿಕೊಡಲು ಸೂಕ್ತಕಾಲವಾಗಿದೆ.

ಬೇಸಿಗೆಗಾಲ

 (ಮಾರ್ಚ್ ನಿಂದ ಮೇ) : ಬೇಸಿಗೆಯಲ್ಲಿ ಕೋಲಾರವು ಬಿಸಿಲ ಬೇಗೆಯಿಂದ ,ಆರ್ದ್ರತೆಯಿಂದ ಮತ್ತು ಅಹಿತಕರ ವಾತಾವರಣದಿಂದ ಕೂಡಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಹಗಲಿನಲ್ಲಿ 35°ಸೆಲ್ಶಿಯಸ್ ವರೆಗು ಹೆಚ್ಚುತ್ತದೆ. ಇರುಳಿನಲ್ಲಿ 30° ಸೆಲ್ಶಿಯಸ್ ವರೆಗೆ ಉಷ್ಣಾಂಶ ದಾಖಲಾಗುತ್ತದೆ.ಪ್ರವಾಸಿಗರು ಇಲ್ಲಿನ ಅಸೌಕರ್ಯಕರ ವಾತಾವರಣದಿಂದಾಗಿ ಇಲ್ಲಿಗೆ ಬೇಸಿಗೆಯಲ್ಲಿ ಭೇಟಿಕೊಡದಿರುವುದು ಉತ್ತಮ.

ಮಳೆಗಾಲ

(ಅಕ್ಟೋಬರ್ ನಿಂದ ಡಿಸೆಂಬರ್) : ಕೋಲಾರದಲ್ಲಿ ಈಶಾನ್ಯ ಮಾರುತಗಳ ಪ್ರಭಾವ ಅಧಿಕವಾಗಿರುತ್ತದೆ. ಈ ಕಾಲದಲ್ಲಿ ಮಳೆ ಅಧಿಕವಾಗಿರುತ್ತದೆ. ಪ್ರವಾಸಿಗರು ಮಳೆಗಾಲದಲ್ಲಿ ಕೋಲಾರಕ್ಕೆ ಭೇಟಿಕೊಡದಿರುವುದು ಉತ್ತಮ.

ಚಳಿಗಾಲ

(ಡಿಸೆಂಬರ್ ನಿಂದ ಫೆಬ್ರವರಿ) : ಈ ಕಾಲದಲ್ಲಿ ಇಲ್ಲಿ ಹಿತಕರವಾದ ವಾತಾವರಣವಿರುತ್ತದೆ. ಚಳಿಗಾಲದಲ್ಲಿ ಇಲ್ಲಿ ಗರಿಷ್ಟ ಉಷ್ಣಾಂಶವು 30°ಸೆಲ್ಶಿಯಸ್ ಇದ್ದು , ಕನಿಷ್ಟ 25° ಸೆಲ್ಶಿಯಸ್ ಇರುತ್ತದೆ. ಚಳಿಗಾಲವು ಕೋಲಾರಕ್ಕೆ ಭೇಟಿ ಕೊಡಲು ಅತ್ಯುತ್ತಮ ಕಾಲವಾಗಿದೆ. ಆಗ ಇಲ್ಲಿ ಆರ್ದ್ರತೆಯು ಕಡಿಮೆ ಇರುತ್ತದೆ.