Search
  • Follow NativePlanet
Share
ಮುಖಪುಟ » ಸ್ಥಳಗಳು » ಕಿನ್ನೌರ್ » ಹವಾಮಾನ

ಕಿನ್ನೌರ್ ಹವಾಮಾನ

ವರ್ಷದ ಯಾವುದೇ ಸಂದರ್ಭದಲ್ಲಿ ಪ್ರವಾಸಿಗರು ಇಲ್ಲಿಗೆ ಬರಬಬಹುದಾಗಿದೆ. ಯಾವಾಗ ಇಲ್ಲಿಗೆ ಬರುವುದಿದ್ದರೂ ಉಣ್ಣೆ ದಿರಿಸುಗಳನ್ನು ತರಬೇಕಾಗಿದ್ದು ಮಾತ್ರ ಕಡ್ಡಾಯ. ಹಿಮಾಲಯಯದ ತಪ್ಪಲಿನಲ್ಲಿರುವ ಪ್ರದೇಶ ಇದಾಗಿದ್ದರಿಂದ ವಿಪರೀತ ಚಳಿ ಇಲ್ಲಿರುತ್ತದೆ.

ಬೇಸಿಗೆಗಾಲ

(ಜೂನ್ ನಿಂದ ಸೆಪ್ಟೆಂಬರ್): ಕಿನ್ನೌರ್ ನಲ್ಲಿ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ಬೇಸಿಗೆ ಇರುತ್ತದೆ. ಈ ಸಮಯದಲ್ಲಿ, ಸ್ಥಳದ ಹವಾಗುಣ ಸಾಮಾನ್ಯವಾಗಿ ತಂಪಾದ ಒಣ ಹವೆ ಹೊಂದಿದ್ದರೂ ರಾತ್ರಿಯಲ್ಲಿ ತಾಪಮಾನ ಇಳಿಕೆಯಾಗುತ್ತದೆ. ಸಾಮಾನ್ಯವಾಗಿ ತಾಪಮಾನವು 10 ಡಿಗ್ರಿ ಸೆಂಟಿಗ್ರೇಡ್ ನಿಂದ 20 ಡಿಗ್ರಿ ಸೆಂಟಿಗ್ರೆಡ್ ವರೆಗೆ ಇರುತ್ತದೆ.

ಮಳೆಗಾಲ

ಕಿನ್ನೌರ್ ನಲ್ಲಿ ಮಳೆ ಸಾಮಾನ್ಯವಾಗಿ ಈ ಪ್ರದೇಶದ ಕೆಳ ಭಾಗಗಳಲ್ಲಿ ಆಗುತ್ತದೆ. ವರ್ಷದ ಹೆಚ್ಚಿನ ಸಮಯ ಇಡೀ ಪ್ರದೇಶವು ಶುಷ್ಕತೆಯನ್ನು ಉಳಿಸಿಕೊಂಡಿರುವುದರಿಂದ ಕೆಲವು ಪ್ರದೇಶಗಳಲ್ಲಿ ಮಾತ್ರ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತದೆ.

ಚಳಿಗಾಲ

(ಅಕ್ಟೊಬರ್ - ಮೇ): ಅಕ್ಟೊಬರ್ ಮತ್ತು ಮೇ ತಿಂಗಳ ನಡುವೆ ಚಳಿಗಾಲವಿರುತ್ತದೆ. ಈ ಸಮಯದಲ್ಲಿ ಸ್ಥಳದ ತಾಪಮಾನವು ಶೂನ್ಯ ಮಟ್ಟಕ್ಕೂ ಇಳಿಯುತ್ತದೆ. ಗರಿಷ್ಠ ಉಷ್ಣಾಂಶ 13 ಡಿಗ್ರಿ ಸೆಂಟಿಗ್ರೇಡ್ನಷ್ಟಿರುತ್ತದೆ. ಚಳಿಗಾಲದಲ್ಲಿ ಇಲ್ಲಿಗೆ ಬರುವವರು ಉಣ್ಣೆಯ ಬಟ್ಟೆಗಳನ್ನು ತರಲೇಬೇಕು.