Search
  • Follow NativePlanet
Share
ಮುಖಪುಟ » ಸ್ಥಳಗಳು » ಖಮ್ಮಂ » ಹವಾಮಾನ

ಖಮ್ಮಂ ಹವಾಮಾನ

ಖಮ್ಮಂಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರುವರಿ ನಡುವಿನ ಕಾಲ ಉತ್ತಮ. ಈ ಸಂದರ್ಭದಲ್ಲಿ ಸ್ಥಳ ವೀಕ್ಷಣೆ ಹಾಗೂ ಪ್ರವಾಸ ಮಾಡಲು ಉತ್ತಮ ವಾತಾವರಣ ಇಲ್ಲಿರುತ್ತದೆ. ಡಿಸೆಂಬರ್‌ ಹಾಗೂ ಜನವರಿಯಲ್ಲಿ ಸಂಜೆ ಹಾಗೂ ರಾತ್ರಿ ಹೊತ್ತು ಕೊಂಚ ಚಳಿ ಇರುತ್ತದೆ. ಈ ಸಂದರ್ಭದಲ್ಲಿ ಬರುವವರು ಒಂದು ಉಲ್ಲನ್‌ ಬಟ್ಟೆ ಜತೆಗೆ ತಂದರೆ ಉತ್ತಮ.

ಬೇಸಿಗೆಗಾಲ

ಮಾರ್ಚ್ ನಿಂದ ಆರಂಭವಾಗುವ ಬೇಸಿಗೆ ಏಪ್ರಿಲ್‌, ಮೇ ಹಾಗೂ ಜೂನ್‌ವರೆಗೂ ಇರುತ್ತದೆ. ಈ ಭಾಗದಲ್ಲಿ ಜೂನ್‌ ಅತಿ ಸೆಖೆಯಿಂದ ಕೂಡಿರುವ ತಿಂಗಳು. 42 ಡಿಗ್ರಿ ಸೆಲ್ಶಿಯಸ್‌ ವರೆಗೂ ಈ ಸಂದರ್ಭದಲ್ಲಿ ತಾಪಮಾನ ತಲುಪುತ್ತದೆ. ಖಮ್ಮಂಗೆ ಪ್ರವಾಸ ಕೈಗೊಳ್ಳಲು ಬೇಸಿಗೆ ಸರಿಯಾದ ಸಮಯವಲ್ಲ. ಅತ್ಯಂತ ಬಿಸಿ ಗಾಳಿ ಹಾಗೂ ಅಲರ್ಜಿ ಸಮಸ್ಯೆ ಕಾಡಬಹುದು.

ಮಳೆಗಾಲ

ಖಮ್ಮಂನಲ್ಲಿ ಮಳೆಗಾಲ ಆರಂಭವಾಗುವುದು ಜೂನ್‌ ಕೊನೆಯಲ್ಲಿ. ಸೆಪ್ಟೆಂಬರ್‌ವರೆಗೂ ಮಳೆಗಾಲ ಇರುತ್ತದೆ. ತೇವಾಂಶ ಕಡಿಮೆ ಇರುವ ಈ ಭಾಗದಲ್ಲಿ ಮಳೆಯ ಪ್ರಮಾಣವೂ ಕಡಿಮೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಸಾಮಾನ್ಯವಾಗಿ ಇಲ್ಲಿ ಮಳೆ ಆಗುತ್ತದೆ. ಕೆಲವೊಮ್ಮೆ ಇಲ್ಲಿ ಭಾರಿ ಮಳೆ ಬೀಳುತ್ತದೆ. ಉಳಿದಂತೆ ಸಾಮಾನ್ಯ ಮಳೆ ಆಗಿ ವಾತಾವರಣದಲ್ಲಿ ತಾಪಮಾನ ಕಡಿಮೆ ಆಗುತ್ತದೆ. ಆ ಸಂದರ್ಭದಲ್ಲಿ ಉಷ್ಣತೆ 35 ಡಿಗ್ರಿ ಸೆಲ್ಶಿಯಸ್‌ವರೆಗೂ ಇರುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಖಮ್ಮಂನಲ್ಲಿ ಸಾಮಾನ್ಯ ಚಳಿ ಇರುತ್ತದೆ. ದಕ್ಷಿಣ ಭಾರತದ ಇತರೆ ಭಾಗದ ಮಾದರಿಯಲ್ಲಿ ಇಲ್ಲಿ ಅತಿಯಾದ ಚಳಿ ಅಥವಾ ಗಾಳಿ ಇರುವುದಿಲ್ಲ. ಚಳಿಗಾಲ ಹೆಚ್ಚಿರುವುದು ಜನವರಿ ತಿಂಗಳಲ್ಲಿ. ಈ ಕಾಲದಲ್ಲಿ ಇಲ್ಲಿನ ತಾಪಮಾನ 25 ಡಿಗ್ರಿ ಸೆಲ್ಶಿಯಸ್‌ಗೆ ಇಳಿಯುತ್ತದೆ.