Search
  • Follow NativePlanet
Share
ಮುಖಪುಟ » ಸ್ಥಳಗಳು » ಖಜುರಾಹೊ » ಹವಾಮಾನ

ಖಜುರಾಹೊ ಹವಾಮಾನ

ಖಜುರಾಹೊಗೆ ಭೇಟಿ ನೀಡಲು ಅಕ್ಟೋಬರಿನಿಂದ ಮಾರ್ಚ್ ನಡುವಿನ ಅವಧಿಯು ಅತ್ಯಂತ ಸೂಕ್ತವಾದ ಕಾಲವಾಗಿದೆ. ವರ್ಷದ ಈ ಅವಧಿಯಲ್ಲಿ ಇಲ್ಲಿ ಆಹ್ಲಾದಕರವಾದ ಹವಾಮಾನವಿರುತ್ತದೆ. ಚಳಿಗಾಲದ ಸಮಯದಲ್ಲಿ ಪ್ರತಿ ವರ್ಷ ವಿಶ್ವ ವಿಖ್ಯಾತ ಖಜುರಾಹೊ ನೃತ್ಯೋತ್ಸವವನ್ನು ಇಲ್ಲಿ ಏರ್ಪಡಿಸಲಾಗಿದೆ. ಹಾಗಾಗಿ ಚಳಿಗಾಲವು ಖಜುರಾಹೊಗೆ ಭೇಟಿ ನೀಡಲು ಉತ್ತಮ ಕಾಲವಾಗಿರುತ್ತದೆ.

ಬೇಸಿಗೆಗಾಲ

ಖಜುರಾಹೊದಲ್ಲಿ ಬೇಸಿಗೆಯು ಅಸಹನೀಯವಾಗಿರುತ್ತದೆ. ಇಲ್ಲಿ ಬೇಸಿಗೆಯು ಏಪ್ರಿಲ್‍ನಿಂದ ಜೂನ್‍ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು 47 ಡಿಗ್ರಿಯಷ್ಟು ಇದ್ದು, ಚರ್ಮ ಸುಡುವಂತಂಹ ಬಿಸಿಲಿನಿಂದ ಕೂಡಿರುತ್ತದೆ. ಇಲ್ಲಿನ ಅಸಹನೀಯ ಬಿಸಿಲು ಪ್ರವಾಸಿಗರಿಗೆ ಅನುಕೂಲಕರವಾಗಿರುವುದಿಲ್ಲ. ಹಾಗಾಗಿ ಖಜುರಾಹೊಗೆ ಬೇಸಿಗೆಯಲ್ಲಿ ಭೇಟಿ ನೀಡಬೇಕೆಂಬ ಯೋಜನೆಯನ್ನು ಹಾಕಿಕೊಳ್ಳದಿರುವುದು ಉತ್ತಮ.

ಮಳೆಗಾಲ

ಮಳೆಗಾಲವು ಮೂರು ತಿಂಗಳ ಬೇಸಿಗೆಯ ಬೇಗೆಯಲ್ಲಿ ಬೆಂದು ಹೋದ ಖಜುರಾಹೊದ ಬಂಡೆಗಳನ್ನು ತಣಿಸಿ ತಂಪನ್ನೆರೆಯುತ್ತದೆ. ಜುಲೈನಿಂದ ಸೆಪ್ಟೆಂಬರ್ ವರೆಗೆ ಇಲ್ಲಿ ಮಳೆಗಾಲವಿರುತ್ತದೆ. ಖಜುರಾಹೊವು ಮಳೆಯು ಅತ್ಯಧಿಕ ಪ್ರಮಾಣದಲ್ಲಿ ಬೀಳುತ್ತದೆ. ಅಲ್ಲದೆ ಈ ಸಮಯದಲ್ಲಿ ಆರ್ದ್ರತೆಯು ಸಹ ಗಣನೀಯವಾಗಿ ಏರಿಕೆಯಾಗುತ್ತದೆ. ಇಲ್ಲಿ ಪ್ರತಿ ವರ್ಷ 45 ಇಂಚು ( 114 ಸೆಂ.ಮೀ) ಮಳೆ ಬೀಳುತ್ತದೆ.

ಚಳಿಗಾಲ

ಚಳಿಗಾಲವು ಖಜುರಾಹೊದಲ್ಲಿ ನವೆಂಬರಿನಲ್ಲಿ ಪ್ರಾರಂಭವಾಗಿ ಫೆಬ್ರವರಿಯವರೆಗೆ ಇರುತ್ತದೆ. ಇಲ್ಲಿನ ಚಳಿಗಾಲವು ಬೆಚ್ಚಗಿನ ಹಗಲನ್ನು ಮತ್ತು ಚಳಿಯಿಂದ ಕೂಡಿದ ರಾತ್ರಿಗಳನ್ನು ಹೊಂದಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಹಗಲಿನಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಶಿಯಸ್ ಇದ್ದರೆ, ರಾತ್ರಿಯ ಸಮಯದಲ್ಲಿ ಕನಿಷ್ಠ 4 ಡಿಗ್ರಿ ಸೆಲ್ಶಿಯಸ್‍ವರೆಗೆ ಕುಸಿಯುವ ಸಂಭವವಿರುತ್ತದೆ.