Search
 • Follow NativePlanet
Share
ಮುಖಪುಟ » ಸ್ಥಳಗಳು» ಕಾಸರಗೋಡು

ಕಾಸರಗೋಡು - ವೈವಿಧ್ಯಮಯ ಸಂಸ್ಕೃತಿಗಳ ನಾಡು.

15

ಕಾಸರಗೋಡು ಕೇರಳದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ಜಿಲ್ಲೆಯಾಗಿದೆ. ಇದು ಇತಿಹಾಸ ಮತ್ತು ಪ್ರಾಚ್ಯ ವಸ್ತುಗಳ ಕುರಿತು ಆಸಕ್ತಿ ಇರುವವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ನಂಬಿಕೆಗಳ ಪ್ರಕಾರ ಅರಬ್ಬರು ಕ್ರಿ.ಶ.9 ಮತ್ತು 14ನೇ ಶತಮಾನದಲ್ಲಿ ಕಾಸರಗೋಡಿನ ಮೂಲಕ ಕೇರಳ ರಾಜ್ಯವನ್ನು ಪ್ರವೇಶಿಸಿದರಂತೆ. ಕಾಸರಗೋಡಿನ ದಕ್ಷಿಣದ ತುದಿಯಲ್ಲಿರುವ ಕೊಲ್ಲಿಯಲ್ಲಿ ತಲೆ ಎತ್ತಿರುವ ಬೇಕಲ್ ಕೋಟೆಯ ಇಲ್ಲಿನ ಶ್ರೀಮಂತ ಸ್ಮಾರಕವಾಗಿದ್ದು, ಕಡಲಿನ ನೀರಿಗೆ ಚಾಚಿಕೊಂಡು ನಿಂತಿದೆ.

ಕಾಸರಗೋಡು ಎಂಬ ಪದವು "ಕಾಸರ" ಮತ್ತು "ಕ್ರೊಡ" ಎಂಬ ಪದಗಳಿಂದ ಆಗಿದೆ. ಇಲ್ಲಿ ’ಕಾಸರ’ ಎಂದರೆ ಸಂಸ್ಕೃತದಲ್ಲಿ ಕೆರೆ ಎಂದು ಹಾಗು ಕ್ರೊಡ ಎಂದರೆ ಸಂಪತ್ತನ್ನು ಸುರಕ್ಷಿತವಾಗಿಟ್ಟಿರುವ ಸ್ಥಳ ಎಂದರ್ಥ. ಕಾಸರಗೋಡು ಮುಖ್ಯವಾಗಿ ಕಾಸರಕ ಮರಗಳಿಂದ ಆಚ್ಛಾದಿತವಾಗಿದೆ. ಬಹುಶಃ ಆ ಒಂದು ನಿಟ್ಟಿನಲ್ಲಿ ಸಹ ಈ ಹೆಸರು ಬಂದಿರಬಹುದು. ಇವುಗಳ ಜೊತೆಗೆ ಕರಾವಳಿ ಪ್ರಾಂತ್ಯದ ಪ್ರತ್ಯೇಕತೆ ಹೊಂದಿರುವ ಹಲವಾರು ಮರಗಳು ಇಲ್ಲಿ ಬೆಳೆಯುತ್ತವೆ.

ಕಾಸರಗೋಡಿನ ಭೂಪ್ರದೇಶವು ತೆಂಗಿನ ತೋಪುಗಳು ಮತ್ತು ಬೆಟ್ಟ ಪ್ರದೇಶಗಳ ಮೂಲಕ ಧುಮ್ಮಿಕ್ಕಿ ಕಡಲು ಸೇರುವ ಝರಿಗಳಿಂದ ಕೂಡಿವೆ.  ಹೆಂಚಿನ ಮನೆಗಳು ಈ ಪಟ್ಟಣದ  ಇಲ್ಲಿನ ವೈಶಿಷ್ಟ್ಯವಾಗಿದ್ದು, ಅವುಗಳು ಈ ಊರಿನ ಅಂದವನ್ನು ಹೆಚ್ಚಿಸಿವೆ.     

ವೈವಿಧ್ಯಮಯ ಸಂಸ್ಕೃತಿಯ ಹಿರಿಮೆ

ಕಾಸರಗೋಡು ವಿವಿಧ ಸಂಸ್ಕೃತಿ ಮತ್ತು ಸಂಪ್ರದಾಯಗಳ ಶ್ರೀಮಂತಿಕೆಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿರುವ ತೆಯ್ಯಂ ಎಂಬ ದೈವದ ಆರಾಧನೆಗಾಗಿ ಕಂಬಳ (ಕೋಣಗಳ ಓಟ) ಮತ್ತು ಕೋಳಿ ಕಾಳಗಗಳನ್ನು ನಡೆಸಲಾಗುತ್ತದೆ. ಇದು ಇಲ್ಲಿನ ಪ್ರಸಿದ್ಧ ಆಚರಣೆಗಳಾಗಿ ಗುರುತಿಸಿಕೊಂಡಿವೆ.

ಕ್ರಿಶ್ಚಿಯನ್ನರು,ಹಿಂದೂಗಳು ಮತ್ತು ಮಸಲ್ಮಾನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಜಿಲ್ಲೆಯು ತನ್ನಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳಿಗೆ ಎಷ್ಟು ಖ್ಯಾತಿ ಪಡೆದಿದೆಯೊ, ಅಷ್ಟೇ ಖ್ಯಾತಿಯನ್ನು ಇಲ್ಲಿನ ಧಾರ್ಮಿಕ ಸಹಿಷ್ಣುತೆಗು ಸಹ ಪಡೆದುಕೊಂಡಿದೆ. ಕಾಸರಗೋಡಿನಲ್ಲಿ ಮಲಯಾಳಂ, ತುಳು, ಕನ್ನಡ, ಕೊಂಕಣಿ ಮತ್ತು ತಮಿಳು ಭಾಷೆಗಳನ್ನು  ಮಾತನಾಡುತ್ತಾರೆ.

ಹವಾಗುಣ

ಕಾಸರಗೋಡಿನಲ್ಲಿನ ಸಂಸ್ಕೃತಿಯಂತೆ ಇಲ್ಲಿನ ಹವಾಗುಣವು ಸಹ ವೈವಿಧ್ಯಮಯವಾಗಿದೆ. ಕಾಸರಗೋಡಿನಲ್ಲಿ ಒಣ, ಆರ್ದ್ರತೆ, ತಂಪಾದ ಮತ್ತು ಬಿಸಿಲಿನಿಂದ ಕೂಡಿದ ಹವಾಮಾನವನ್ನು ಕಾಣಬಹುದು. ಈ ಊರಿಗೆ ಸಮೀಪದಲ್ಲಿ ಸಮುದ್ರವನ್ನು ಹೊಂದಿರುವುದರಿಂದಾಗಿ ಇಲ್ಲಿ ನವೆಂಬರ್ ನಿಂದ ಜನವರಿಯವರೆಗಿನ ಚಳಿಗಾಲವನ್ನು ಹೊರತುಪಡಿಸಿ  ವರ್ಷದ ಎಲ್ಲಾ ದಿನಗಳು ಆರ್ದ್ರತೆಯಿಂದ ಕೂಡಿರುತ್ತದೆ.

ಕಾಸರಗೋಡು ಪ್ರಸಿದ್ಧವಾಗಿದೆ

ಕಾಸರಗೋಡು ಹವಾಮಾನ

ಕಾಸರಗೋಡು
32oC / 90oF
 • Haze
 • Wind: WNW 11 km/h

ಉತ್ತಮ ಸಮಯ ಕಾಸರಗೋಡು

 • Jan
 • Feb
 • Mar
 • Apr
 • May
 • Jun
 • July
 • Aug
 • Sep
 • Oct
 • Nov
 • Dec

ತಲುಪುವ ಬಗೆ ಕಾಸರಗೋಡು

 • ರಸ್ತೆಯ ಮೂಲಕ
  ಪ್ರವಾಸಿಗರು ಕಾಸರಗೋಡಿಗೆ ರಸ್ತೆಯ ಮೂಲಕ ತಲುಪುವುದು ಉಳಿದೆಲ್ಲ ಪ್ರಯಾಣ ಮಾರ್ಗಗಳಿಗಿಂತ ಅತ್ಯಂತ ಅಗ್ಗದ ಪ್ರಯಾಣವಾಗುತ್ತದೆ. ಕೆ ಎಸ್ ಆರ್ ಟಿ ಸಿ ಮತ್ತು ಖಾಸಗಿ ಸಾರಿಗೆ ಸಂಸ್ಥೆಯ ಬಸ್ಸುಗಳು ಕಾಸರಗೋಡಿಗೆ ಬರುವ ಪ್ರಯಾಣಿಕರಿಗೆ ಸಾರಿಗೆ ಸೌಕರ್ಯವನ್ನು ನೀಡುತ್ತವೆ. ರಸ್ತೆಯ ಮೂಲಕ ಕಾಸರಗೋಡಿಗೆ ಹೋಗುವಾಗ ಇಲ್ಲಿನ ಸುತ್ತ - ಮುತ್ತಲ ನಯನ ಮನೋಹರ ಪರಿಸರವನ್ನು ಕಣ್ತುಂಬಿಕೊಳ್ಳಬಹುದು.
  ಮಾರ್ಗಗಳ ಹುಡುಕಾಟ
 • ರೈಲಿನ ಮೂಲಕ
  ಕಾಸರಗೋಡು ಸುಂದರವಾದ ಪರಿಸರದಿಂದ ಸುತ್ತುವರೆದಿದೆ. ಹಾಗಾಗಿ ಇಲ್ಲಿಗೆ ರೈಲಿನಲ್ಲಿ ಬರುವುದು ಒಂದು ಚೇತೋಹಾರಿಯಾದ ಸ್ಮರಣೀಯ ಪ್ರಯಾಣವಾಗಿರುತ್ತದೆ. ಕಾಸರಗೋಡ್ ರೈಲು ನಿಲ್ದಾಣವು ಉತ್ತರ ಮತ್ತು ದಕ್ಷಿಣ ಭಾರತಗಳ ಪ್ರಮುಖ ರೈಲು ನಿಲ್ದಾಣಗಳೊಂದಿಗೆ ಉತ್ತಮವಾದ ಸಂಪರ್ಕವನ್ನು ಹೊಂದಿದೆ.
  ಮಾರ್ಗಗಳ ಹುಡುಕಾಟ
 • ಆಕಾಶದ ಮೂಲಕ
  ಮಂಗಳೂರು ವಿಮಾನ ನಿಲ್ದಾಣವು ಕಾಸರಗೋಡಿನಿಂದ 50 ಕಿ.ಮೀ ದೂರದಲ್ಲಿದ್ದು, ಇಲ್ಲಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವಾಗಿದೆ. ನೀವು ಇಲ್ಲಿಗೆ ದಕ್ಷಿಣ ಭಾಗದಿಂದ ಬರುವಿರಾದರೆ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸಮೀಪದ ನಿಲ್ದಾಣವಾಗಿರುತ್ತದೆ. ಇದು ಇಲ್ಲಿಂದ 420 ಕಿ.ಮೀ ದೂರದಲ್ಲಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ನಿಮ್ಮ ಕೈಗೆಟುಕುವ ದರದಲ್ಲಿ ಟ್ಯಾಕ್ಸಿ ಸೇವೆಗಳು ಲಭ್ಯವಿವೆ. ಇದರ ಜೊತೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಈ ಪಟ್ಟಣಕ್ಕೆ ರೈಲು ಅಥವಾ ರಸ್ತೆಯ ಮೂಲಕ ಆರಾಮವಾಗಿ ತಲುಪಬಹುದು.
  ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
24 May,Fri
Return On
25 May,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
24 May,Fri
Check Out
25 May,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
24 May,Fri
Return On
25 May,Sat
 • Today
  Kasargode
  32 OC
  90 OF
  UV Index: 7
  Haze
 • Tomorrow
  Kasargode
  27 OC
  81 OF
  UV Index: 6
  Light rain shower
 • Day After
  Kasargode
  26 OC
  79 OF
  UV Index: 6
  Patchy rain possible