Search
  • Follow NativePlanet
Share
ಮುಖಪುಟ » ಸ್ಥಳಗಳು» ಕರ್ನಾಟಕ

ಕರ್ನಾಟಕ ಪ್ರವಾಸೋದ್ಯಮ - ಒಂದು ಕಿರುಪರಿಚಯ

ಭಾರತದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಇಡೀ ದೇಶದಲ್ಲೇ ಮಾಹಿತಿ ತಂತ್ರಜ್ನ್ಯಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನೂ ಉತ್ತುಂಗಕ್ಕೇರಿಸಿದೆ. ಅಷ್ಟೆ ಅಲ್ಲದೆ, ಪ್ರವಾಸೋದ್ಯಮದ ಕಾಲಕ್ರಮೇಣ ಬೆಳವಣಿಗೆಯಿಂದ ಹಲವಾರು ರಿಸಾರ್ಟಗಳು, ಹೋಮ್ ಸ್ಟೇ ಗಳು ರಾಜ್ಯಾದ್ಯಂತ ನಾಯಿ ಕೊಡೆಗಳಂತೆ ನಿರ್ಮಾಣಗೊಂಡಿದ್ದು ಉತ್ತಮವಾದ ಪ್ರಯಾಣದ ಅನುಭವವನ್ನು ಕೊಡುವಲ್ಲಿ ಸಫಲವಾಗಿವೆ. ಕರ್ನಾಟಕವನ್ನು ಭೌಗೋಳಿಕವಾಗಿ 'ಕರಾವಳಿ' ಹಾಗು 'ಮಲೆನಾಡು' ಎಂದು ವಿಂಗಡಿಸಲಾಗಿದೆ. ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸಿಮೆಯನ್ನು ಉತ್ತರ ಹಾಗು ದಕ್ಷಿಣ ಭಾಗದ ಬಯಲುಸೀಮೆಗಳೆಂದು ವಿಭಜಿಸಲಾಗಿದೆ.

ಹವಾಮಾನ

ಸಮಾನ್ಯವಾಗಿ ಕರ್ನಾಟಕವು ನಾಲ್ಕು ಋತುಗಳನ್ನು ಹೊಂದಿದ್ದು, ಅವುಗಳು ಬೇಸಿಗೆಗಾಲ, ಮುಂಗಾರು ಮಳೆಗಾಲ, ಹಿಂಗಾರು ಮಳೆಗಾಲ ಮತ್ತು ಚಳಿಗಾಲ. ಹಿಂಗಾರು ಮಳೆಗಾಲಾವಧಿಯಾದ ಅಕ್ಟೋಬರ ನಿಂದ ಡಿಸೆಂಬರ ಹಾಗು ಚಳಿಗಾಲದಾವಧಿಯಾದ ಜನವರಿಯಿಂದ ಫೆಬ್ರುವರಿಯು ಇಲ್ಲಿಗೆ ಭೇಟಿ ನೀಡಲು ಅತಿ ಪ್ರಶಸ್ತವಾದ ಸಮಯವಾಗಿದೆ.

ಭಾಷೆಗಳು

ಕನ್ನಡವು ರಾಜ್ಯದ ಅಧಿಕೃತ ಭಾಷೆಯಾಗಿದೆ. ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ ಮತ್ತು ಕೊಂಕಣಿ ಭಾಷೆಗಳನ್ನೂ ಕೇಳಬಹುದು. ರಾಷ್ಟ್ರದ ಜನಪ್ರಿಯ ಭಾಷೆಯಾದ ಹಿಂದಿಯನ್ನೂ ಕೂಡ ಇಲ್ಲಿ ಮಾತನಾಡಬಲ್ಲರು. ಮಾಹಿತಿ ತಂತ್ರಜ್ನ್ಯಾನ ಕ್ಷೇತ್ರದಲ್ಲಾದ ಪ್ರಗತಿಯಿಂದಾಗಿ ದೇಶದ ಹಲವಾರು ರಾಜ್ಯ್ಗಳಿಂದ ಜನರು ಇಲ್ಲಿ ವಲಸೆ ಬಂದಿದ್ದು ಮಲಯಾಳಮ್, ತಮಿಳು ಹಾಗು ತೆಲುಗು ಭಾಷೆಗಳನ್ನೂ ಕಾಣಬಹುದಾಗಿದ್ದು ಇಂಗ್ಲಿಷ ಭಾಷೆಯನ್ನು ಸಾಮಾನ್ಯವಾಗಿ ಬಹು ಜನರು ಮಾತನಾಡಬಲ್ಲವರಾಗಿದ್ದಾರೆ.

ಕರ್ನಾಟಕದಲ್ಲಿಯ ಪ್ರವಾಸೋದ್ಯಮ

ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲುದಾಗಿದೆ. ಪ್ರಯಾಣಿಕನೆ ಇರಲಿ, ಸಾಹಸಗಾರನೆ ಇರಲಿ, ಅನ್ವೇಷಕನೆ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯಬಯಸುವ ಸದಭಿರುಚಿಯ ವ್ಯಕ್ತಿಯೆ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ತಾಣ ಹಾಗು ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ.ಕೊಡಗಿನಲ್ಲಿಯ ಉಬ್ಬು ತಗ್ಗಿನ ಪ್ರದೇಶಗಳು, ಮನಮೋಹಕವಾದ ಕಣಿವೆಗಳು ಅತ್ಯಂತ ಜನಪ್ರಿಯವಾಗಿದ್ದು, ಇದನ್ನು 'ಭಾರತದ ಸ್ಕಾಟ್ ಲ್ಯಾಂಡ್' ಎಂದೇ ಕರೆಯಲಾಗುತ್ತದೆ. ಈ ಗಿರಿಧಾಮವು ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಮಹತ್ತರವಾದ ಭಾಗವಾಗಿದೆ.

ಇದಲ್ಲದೆ, ವೈವಿಧ್ಯಮಯ ಚಿಕ್ಕ ಪುಟ್ಟ ಜಲಪಾತಗಳನ್ನೊಳಗೊಂಡ ಕೆಮ್ಮಣ್ಣಗುಂಡಿ, ಹಚ್ಚ ಹಸಿರಿನ ಕಂಬಳಿ ಹೊದ್ದು ನಿಂತಿರುವ ಕುದುರೆಮುಖ ಕರ್ನಾಟಕದಲ್ಲಿ ಕಾಣಸಿಗುವ ಅನೇಕ ಗಿರಿಧಾಮಗಳಲ್ಲಿ ಮಹತ್ತರವಾಗಿದ್ದು ಕರ್ನಾಟಕದ ಕಾಫಿ ಭೂಮಿಯೆಂದೆ ಪ್ರಸಿದ್ಧವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಣಬಹುದಾಗಿದೆ. ರಜಾ ದಿನಗಳಲ್ಲಿ ಕಡಲ ತೀರಗಳಿಗೆ ಪ್ರವಾಸ ಕೈಗೊಳ್ಳಲು ಮಂಗಳೂರು ತನ್ನ ವಿಸ್ತಾರವಾಗಿ ಚಾಚಿದ ಸಮುದ್ರ ತೀರಗಳಿಂದ ಆಕರ್ಷಿಸುತ್ತ ಕರ್ನಾಟಕ ಪ್ರವಾಸೋದ್ಯಮದ ಪ್ರಮುಖ ತಾಣವಾಗಿದೆ.

ರಾಜ್ಯದ ಇನ್ನಿತರ ಪ್ರಮುಖ ಯಾತ್ರಾ ಸ್ಥಳಗಳಾದ ಕೊಲ್ಲೂರು ಮೂಕಾಂಬಿಕೆ, ಉಡುಪಿಯ ಕೃಷ್ಣ ದೇಗುಲ, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿಯ ಶಾರದಾಂಬೆ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ ಮುಂತಾದವುಗಳು ಮಂಗಳೂರಿನ ಸುತ್ತಮುತ್ತಲಿರುವ ಪ್ರಮುಖ ಕ್ಷೇತ್ರಗಳಾಗಿವೆ. ಶಾಂತ ಹಾಗು ಮೋಹಕ ಸಮುದ್ರ ತೀರಕ್ಕೆ ಮರವಂತೆಯು ಉದಾಹರಣೆಯಾಗಿದ್ದು, ಇನ್ನಿತರ ಬೀಚ್ ಗಳಾದ ಬೈಂದೂರು, ಮಲ್ಪೆ, ಕಾರವಾರ ಮುಂತಾದವುಗಳು ಈ ಪಟ್ಟಿಯಲ್ಲಿ ಸೇರುತ್ತವೆ.

ಐತಿಹಾಸಿಕ ಅಭಿರುಚಿಯುಳ್ಳ ಸ್ಥಳಗಳು ರಾಜ್ಯದಲ್ಲಿ ತುಂಬಿದ್ದು ಕರ್ನಾಟಕ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯನ್ನೆ ನೀಡಿದೆ. ಇಲ್ಲಿರುವ ಮೈಸೂರು, ಬಾದಾಮಿ, ಹಂಪಿ, ಬೇಲೂರು, ಹಳೆಬೀಡು, ಶ್ರವಣಬೆಳಗೊಳ ಮುಂತಾದವು ಕೆತ್ತಲ್ಪಟ್ಟಿರುವ ಶಿಲ್ಪಕಲೆಗಳಿಗೆ ಪ್ರಖ್ಯಾತಿಯಾಗಿದ್ದು ಕಳೆದುಹೋದ ಕಾಲದ ಬಗ್ಗೆ ಸಾವಿರಾರು ಕಥೆಗಳನ್ನು ಹೇಳುತ್ತವೆ. ಇನ್ನು ಸಾಹಸ ಬಯಸುವ ಸಂದರ್ಶಕರು ತಮ್ಮ ಅಭಿರುಚಿಗೆ ತಕ್ಕ ಹಾಗೆ ಅನೇಕಾನೇಕ ಸ್ಥಳಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಕಾವೇರಿ ಮೀನುಗಾರಿಕೆ ಶಿಬಿರ, ಭೀಮೇಶ್ವರಿ, ಗಾಲಿಬೊರೆ ಮತ್ತು ದೊಡ್ಡಮಾಕಳಿ ಮೀನು ಹಿಡಿಯುವ ಉಲ್ಲಾಸಮಯ ಅನುಭವವನ್ನು ಒದಗಿಸುತ್ತವೆ. ಸಾವನದುರ್ಗ, ಅಂತರಗಂಗೆ, ಶಿವಗಿರಿ, ರಾಮನಗರ ಮುಂತಾದವುಗಳು ಪರ್ವತಾರೋಹಣ ಮತ್ತು ಚಾರಣಕ್ಕೆ ಹೇಳಿ ಮಾಡಿಸಿದ ಹಾಗಿವೆ. ಹೊನ್ನೆಮರಡು, ಶಿವಗಂಗೆ, ಶಿವನಸಮುದ್ರ, ಸಂಗಮ ಮುಂತಾದವುಗಳು ದೋಣಿ ವಿಹಾರ, ತೆಪ್ಪ ಸವಾರಿ ಹಾಗು ಇನ್ನಿತರ ಜಲಕ್ರೀಡೆಗಳಿಗೆ ಹೆಸರುವಾಸಿಯಾಗಿವೆ.

ಕರ್ನಾಟಕದಲ್ಲಿ ವನ್ಯಜೀವನವು ಆಕರ್ಷಕವಾಗಿದ್ದು, ಜನಪ್ರಿಯ ಹುಲಿ ಸಂರಕ್ಷಣೆಯ ತಾಣವಾದ ಬಂಡಿಪುರ, ಆನೆಗಳಿಗೆ ಹೆಸರುವಾಸಿಯಾದ ಕಬಿನಿ ಮತ್ತು ನಾಗರಹೊಳೆ ಪ್ರವಾಸಿಗರ ನಡುವೆ ಪ್ರಸಿದ್ಧವಾಗಿವೆ. ಇನ್ನೊಂದೆಡೆ ಬಿಳಗಿರಿ ರಂಗನ ಬೆಟ್ಟ, ದಾಂಡೇಲಿ ಮತ್ತು ಭದ್ರಾ ವನ್ಯಜೀವಿ ಧಾಮವು ನೋಡುಗರಿಗೆ ತನ್ನ ವೈವಿಧ್ಯಮಯ ಜೀವಸಂಕುಲಗಳ ಸೊಬಗನ್ನು ತೋರ್ಪಡಿಸುತ್ತದೆ.ಬೆಂಗಳೂರು, ಮೈಸೂರು, ಮಂಗಳೂರು ಮುಂತಾದವು ರಾಜ್ಯದ ಪ್ರಮುಖ ನಗರಗಳಾಗಿದ್ದು, ಇನ್ನೂ ಹಲವು ಪಟ್ಟಣಗಳು ಈ ದೀಸೆಯಲ್ಲಿ ಬೆಳವಣಿಗೆ ಹೊಂದುತ್ತಿವೆ. ತನ್ನ ವೈವಿಧ್ಯಮಯ ಸಂಸ್ಕೃತಿ, ಐಟಿ-ಬಿಟಿ ಕಂಪನಿಗಳು, ಮಾಲ್ ಗಳು ಮುಂತಾದವುಗಳಿಂದ ಬೆಂಗಳೂರು ನಿಜವಾಗಿಯೂ ಒಂದು 'ಮೆಟ್ರೊಪಾಲಿಟನ್' ನಗರವಾಗಿದ್ದು ಇನ್ನು ಹಲವು ನಗರಗಳು ಇದನ್ನು ಹಿಂಬಾಲಿಸುತ್ತಿವೆ ಎಂದರೆ ತಪ್ಪಾಗಲಾರದು. ಈ ಕೆಳಗಿನವುಗಳು ವಿವಿಧ ರಜಾದಿನಗಳ ಅವಶ್ಯಕತೆಗಳಿಗನುಸಾರವಾಗಿ ವಿಂಗಡಿಸಲಾದ ಕರ್ನಾಟಕದ ವಿವಿಧ ಸ್ಥಳಗಳು.

ಕರ್ನಾಟಕ ಸ್ಥಳಗಳು

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed