Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ನಾಲಾ » ಹವಾಮಾನ

ಕರ್ನಾಲಾ ಹವಾಮಾನ

ಕರ್ನಾಲಾ ವರ್ಷದ ಹೆಚ್ಚಿನ ಅವಧಿಯಲ್ಲಿ ಆಹ್ಲಾದಕರವಾದ ಹವಾಮಾನವನ್ನು ಹೊಂದಿರುತ್ತದೆ. ಪ್ರಕೃತಿ ಪ್ರೇಮಿಗಳು ಕರ್ನಾಲಾವನ್ನು ಸೆಪ್ಟೆಂಬರ್ ನಿಂದ ಮಾರ್ಚ್ ಅವಧಿಯಲ್ಲಿ ಭೇಟಿ ನೀಡಬಹುದು. ಈ ಅವಧಿ ಪಕ್ಷಿಧಾಮ ನೋಡಲು ಅತ್ಯಂತ ಸೂಕ್ತವಾದ ಸಮಯವೂ ಆಗಿದೆ.

ಬೇಸಿಗೆಗಾಲ

ಕರ್ನಾಲಾದಲ್ಲಿ ಬೇಸಿಗೆ ಸಾಮಾನ್ಯವಾಗಿ ಬಹಳ ಬಿಸಿಯಾಗಿರುತ್ತವೆ ಮತ್ತು ಉಷ್ಣತೆ 42 ಡಿಗ್ರಿ ಸೆಲ್ಶಿಯಸ್ ಗೂ ದಾಟಿ ಹೋಗುತ್ತದೆ. ಬೇಸಿಗೆ ಮಾರ್ಚ್ ನಿಂದ ಏಪ್ರಿಲ್ ತನಕ ಇರುತ್ತದೆ.

ಮಳೆಗಾಲ

ಕರ್ನಾಲಾದಲ್ಲಿ ಮಳೆಗಾಲ ಸಾಮಾನ್ಯದಿಂದ ಸ್ವಲ್ಪ ಜೋರಾದ ಮಳೆಯನ್ನು ಪಡೆಯುತ್ತವೆ. ಮಳೆಗಾಲ ಜೂನ್ ನಿಂದ ಸೆಪ್ಟೆಂಬರ್ ತನಕ ಇರುತ್ತದೆ. ಇದು ಕರ್ನಾಲಾ ಭೇಟಿಗೆ ಸೂಕ್ತವಾದ ಸಮಯವಲ್ಲ. ಈ ಸಮಯದಲ್ಲಿ ಪ್ರವಾಸಿ ಚಟುವಟಿಕೆಗಳು ಸ್ವಲ್ಪ ಕಾಲದ ತನಕ ವಿರಾಮ ಪಡೆಯುತ್ತವೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರುವರಿಯ ತನಕ ಇರುವ ಚಳಿಗಾಲ ಅತ್ಯಂತ ಆಹ್ಲಾದಕರ ವಾತಾವರಣವನ್ನು ಹೊಂದಿದ ತಿಂಗಳುಗಳಾಗಿವೆ. ಈ ಸಮಯದಲ್ಲಿ ಉಷ್ಣತೆ 20 ಡಿಗ್ರಿ ಸೆಲ್ಶಿಯಸ್ ನಿಂದ 32 ಡಿಗ್ರಿಯ ತನಕ ಇರುತ್ತದೆ.