Search
  • Follow NativePlanet
Share
ಮುಖಪುಟ » ಸ್ಥಳಗಳು » ಕರ್ಜಾತ್ » ಹವಾಮಾನ

ಕರ್ಜಾತ್ ಹವಾಮಾನ

ಕರ್ಜಾತ್ ಪ್ರದೇಶವು ತಂಪಾದ ಚಳಿಗಾಲ ಹಾಗೂ ಬೆಚ್ಚನೆಯ ಬೇಸಿಗೆಗಾಲದಲ್ಲಿ ಪ್ರವಾಸಿಗರನ್ನು ಆಹ್ವಾನಿಸುತ್ತದೆ. ಜೂನ್ ತಿಂಗಳಿನಿಂದ ಅಕ್ಟೋಬರ್ ತಿಂಗಳಿನವರೆಗೆ ಕೇವಲ ಸ್ಥಳಗಳ ವೀಕ್ಷಣೆಗೆ ಅನುಕೂಲವಾಗುವುದಷ್ಟೇ ಅಲ್ಲದೆ ರಿವರ್ ರಾಫ್ಟಿಂಗ್ ಮತ್ತು ಚಾರಣಕ್ಕೂ ಸೂಕ್ತವಾದ ಸಮಯ.

ಬೇಸಿಗೆಗಾಲ

ಕರ್ಜಾತ್ ನಲ್ಲಿ ಬೇಸಿಗೆ ಕಾಲವು ಮೇ ತಿಂಗಳಿನಿಂದ ಜೂನ್ ತಿಂಗಳಿನವರೆಗೆ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿ ದಾಖಲಾಗುವ ತಾಪಮಾನ ಕನಿಷ್ಠ 27 ಡಿ. ಸೆ ನಿಂದ ಗರಿಷ್ಠ 39 ಡಿ. ಸೆ.ವರೆಗೆ. ಎಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕರ್ಜಾತ್ ವಿಪರೀತ ಶಾಖದಿಂದ ಕೂಡಿದ್ದು ಸಾಮಾನ್ಯವಾಗಿ ಈ ಸಮಯದಲ್ಲಿ ಪ್ರವಾಸಿಗರು ಕರ್ಜಾತ್ ಗೆ ಬರಲು ಹಿಂದೇಟು ಹಾಕುತ್ತಾರೆ.

ಮಳೆಗಾಲ

ಕರ್ಜಾತ್ ನಲ್ಲಿ ಮಳೆಗಾಲವು ಜುಲೈ ತಿಂಗಳಿನಲ್ಲಿ ಆರಂಭವಾಗಿ ಸಪ್ಟೆಂಬರ್ ತಿಂಗಳಿನಲ್ಲಿ ಕೊನೆಗೊಳ್ಳುತ್ತದೆ. ಮಳೆಗಾಲವು ಇಲ್ಲಿ ಹಿತಕರವಾದ ವಾತಾವರಣದ ಅನುಭವವನ್ನು ನೀಡುತ್ತದೆ. ಮಳೆಯಿಂದಾಗಿ ಕರ್ಜಾತ್ ಪ್ರದೇಶವು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು ಸ್ವರ್ಗಕ್ಕೆ ಸಮಾನವಾದ ಸೊಬಗನ್ನು ಹೊಂದಿರುತ್ತದೆ.

ಚಳಿಗಾಲ

ಡಿಸೆಂಬರ್ ತಿಂಗಳಿನಿಂಗ ಫೆಬ್ರವರಿ ತಿಂಗಳವರೆಗೆ ಕರ್ಜಾತ್ ನಲ್ಲಿ ಚಳಿಗಾಲ. ಚಳಿಗಾಲದಲ್ಲಿ ಕರ್ಜಾತ್ ನಲ್ಲಿ ವಾತಾವರಣವು ತಂಪಾಗಿದ್ದು ಉಷ್ಣಾಂಶವು 27 ಡಿ. ಸೆ ನಿಂದ 11 ಡಿ. ಸೆವರೆಗೆ ದಾಖಲಾಗುತ್ತದೆ.