Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾರ್ಗಿಲ್ » ಹವಾಮಾನ

ಕಾರ್ಗಿಲ್ ಹವಾಮಾನ

ಮೇ ತಿಂಗಳಿಂದ ಜೂನ್‌ ನಡುವಿನ ಅವಧಿ ಕಾರ್ಗಿಲ್‌ಗೆ ಭೇಟಿ ನೀಡಲು ಉತ್ತಮ ಸಮಯ. ತಾಪಮಾನವೂ ಕೊಂಚ ಸಹನೀಯವಾಗಿರುತ್ತದೆ. ಇದು ವರ್ಷದ ಇತರೆ ತಿಂಗಳುಗಳಿಗೆ ಹೋಲಿಸಿದಾಗ ಅರಿವಾಗುತ್ತದೆ. ಆದಾಗ್ಯೂ ಈ ಸಂದರ್ಭ ಕೊಂಚ ಚಳಿ ಇದ್ದೇ ಇರುತ್ತದೆ.

ಬೇಸಿಗೆಗಾಲ

(ಏಪ್ರಿಲ್‌ನಿಂದ ಸೆಪ್ಟೆಂಬರ್‌): ಬೇಸಿಗೆಯಲ್ಲಿ ಎಷ್ಟೇ ಚಳಿ ಪ್ರದೇಶವಾಗಿದ್ದರೂ ಕಾರ್ಗಿಲ್‌ ಒಂದು ರೀತಿ ಶುಷ್ಕವಾಗಿರುತ್ತದೆ. ಆದಾಗ್ಯೂ ಈ ಸಂದರ್ಭದಲ್ಲಿ ಉಲ್ಲನ್‌ ಬಟ್ಟೆ ಬಳಕೆ ಅನಿವಾರ್ಯ. ಈ ಸಂದರ್ಭ ಅತಿ ಹೆಚ್ಚು ತಾಪಮಾನ 38 ಡಿಗ್ರಿ ಸೆಲ್ಶಿಯಸ್‌ವರೆಗೆ ದಾಖಲಾಗುತ್ತದೆ. ಉತ್ತಮ ಹಾಗೂ ಸಹನೀಯ ವಾತಾವರಣ ಇರುವುದರಿಂದ ಬೇಸಿಗೆ ಇಲ್ಲಿನ ಪ್ರವಾಸಕ್ಕೆ ಸೂಕ್ತ ಎಂಬ ಅಭಿಪ್ರಾಯ ಇದೆ.

ಮಳೆಗಾಲ

ಚಳಿಗಾಲ

(ಅಕ್ಟೋಬರ್‌ನಿಂದ ಮಾರ್ಚ್): ಚಳಿಗಾಲ ಕಾರ್ಗಿಲ್‌ನಲ್ಲಿ ಅತ್ಯಂತ ಅಸಹನೀಯವಾಗಿರುತ್ತದೆ. ತಾಪಮಾನ -48 ಡಿಗ್ರಿ ಸೆಲ್ಶಿಯಸ್‌ಗಿಂತ ಕೆಳಗೆ ಕುಸಿಯುತ್ತದೆ. ಅತಿಯಾದ ಹಿಮಪಾತದಿಂದಾಗಿ ರಸ್ತೆಗಳೇ ಮುಚ್ಚಿ ಹೋಗುತ್ತವೆ. ಇಲ್ಲಿನ ವಿಚಿತ್ರ ಪರಿಸರದಿಂದಾಗಿ ಈ ಸಂದರ್ಭದಲ್ಲಿ ಇಲ್ಲಿ ಬರದಿರುವುದೇ ಒಳಿತು ಎನ್ನಲಾಗುತ್ತದೆ.