Search
  • Follow NativePlanet
Share
ಮುಖಪುಟ » ಸ್ಥಳಗಳು » ಕಾನ್ಪುರ್ » ಹವಾಮಾನ

ಕಾನ್ಪುರ್ ಹವಾಮಾನ

ಕಾನ್ಪುರಕ್ಕೆ ಭೇಟಿ ಕೊಡಲು ಸೂಕ್ತ ಸಮಯವೆಂದರೆ ಅಕ್ಟೋಬರ್ ನಿಂದ ಮಾರ್ಚ್ ವರೆಗೆ. ಇತರ ಉತ್ತರಪ್ರದೇಶದ ನಗರಗಳಂತೆ ಕಾನ್ಪುರ ಕೂಡ ಬೇಸಿಗೆ ಕಾಲದಲ್ಲಿ ವಿಪರೀತ ಬಿಸಿಲು, ಒಣಹವೆ ಮತ್ತು ಧೂಳಿನಿಂದ ಕೂಡಿರುತ್ತದೆ.

ಬೇಸಿಗೆಗಾಲ

ಬೇಸಿಗೆ ಕಾಲವು ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ತಾಪಮಾನ ತೀವ್ರವಾದ ಉಷ್ಣಾಂಶ ಹೊಂದಿರುತ್ತದೆ. ವಾತಾವರಣ ಬಿಸಿ ಮತ್ತು ಒಣಹವೆಯಿಂದ ಕೂಡಿರುತ್ತದೆ. ಉಷ್ಣಾಂಶ ಗರಿಷ್ಠ 45 ಡಿಗ್ರಿವರೆಗೆ ತಲುಪುತ್ತದೆ.

ಮಳೆಗಾಲ

ಮಳೆಗಾಲ ಜುಲೈನಿಂದ ಸೆಪ್ಟೆಂಬರ್ ವರೆಗೆ ಇದ್ದು, ಹೆಚ್ಚು ಮಳೆ ಸುರಿಯುತ್ತಿರುತ್ತದೆ. ಈ ಸಮಯದಲ್ಲಿ ವಾತಾವರಣ ತೇವಾಂಶದಿಂದ ಕೂಡಿರುತ್ತದೆ.

ಚಳಿಗಾಲ

ಚಳಿಗಾಲ ಡಿಸೆಂಬರ್ ನಿಂದ ಫೆಬ್ರವರಿವರೆಗೆ ಇರುತ್ತದೆ. ಈ ಸಮಯದಲ್ಲಿ ವಾತಾವರಣ ಆಹ್ಲಾದಕರವಾಗಿ ಇರುತ್ತದೆ. ತಾಪಮಾನ ಸುಮಾರು 12 ಡಿಗ್ರಿಯಿಂದ 20ರವರೆಗೆ ಇರುತ್ತದೆ. ಜನವರಿ ತಿಂಗಳಿನಲ್ಲಿ ಅತಿಯಾದ ಮಂಜು ಇರುವುದರಿಂದ ಅನೇಕ ವಿಮಾನಗಳು ರದ್ದಾಗಿರುತ್ತವೆ ಮತ್ತು ರೈಲು ಸಂಚಾರದಲ್ಲಿ ಅಡೆತಡೆ ಕಂಡುಬರುತ್ತದೆ.